Ysr Family: ತಂಗಿ ರಾಜಕೀಯ ಪ್ರವೇಶಕ್ಕೆ ಅಣ್ಣನ ವಿರೋಧ: : ವೈಎಸ್ಆರ್ ಕುಟುಂಬದಲ್ಲಿ ಮೂಡಿದ್ಯಾ ಬಿರುಕು

ಆಂಧ್ರಪ್ರದೇಶ: ಆಂಧ್ರಪ್ರದೇಶದ ಅಧಿಕಾರದ ಗದ್ದುಗೆ ಹಿಡಿದು ಯಶಸ್ವಿ ಸಿಎಂ ಎನ್ನಿಸಿಕೊಳ್ಳುತ್ತಿರುವ ವೈ.ಎಸ್.ಜಗನ್ ಮೋಹನ್ ರೆಡ್ಡಿ ಕೌಟುಂಬಿಕ ಕಾರಣಕ್ಕೆ ಸುದ್ದಿಯಾಗಿದ್ದು, ತಂದೆಯ ಸ್ಮರಣಾರ್ಥ ಆಯೋಜಿಸಲಾದ ಕಾರ್ಯಕ್ರಮಕ್ಕೆ ಗೈರಾಗುವ ಮೂಲಕ ಜಗನ್ ಕುಟುಂಬದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಚರ್ಚೆ ಹುಟ್ಟುಹಾಕಿದ್ದಾರೆ.

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ್ ರೆಡ್ಡಿ ಅವರ ಸ್ಮರಣಾರ್ಥ ಅವರ ಪತ್ನಿ ಹೈದ್ರಾಬಾದ್ ನಲ್ಲಿ ಏರ್ಪಡಿಸಿದ್ದ ಸಭೆ  ಪುತ್ರ ಜಗನ್ ಮೋಹನ್ ರೆಡ್ಡಿ ಗೈರಾಗಿದ್ದಾರೆ. ಇದು ಆಂಧ್ರ ಹಾಗೂ ತೆಲಂಗಣ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಹೈದ್ರಾಬಾದ್ ನಲ್ಲಿ ನಡೆದ 12 ನೇ ವಾರ್ಷೀಕೋತ್ಸವ ಕಾರ್ಯಕ್ರಮಕ್ಕೆ ಜಗನ್ ಮೋಹನ್ ರೆಡ್ಡಿ ಗೈರಾಗಿದ್ದು ಹಾಗೂ ಎಡುಪುಲಪಾಯದಲ್ಲಿ ನಡೆದ ಬೆಳವಣಿಗೆ ಗಮನಿಸಿದ್ರೇ ಜಗನ್ ಹಾಗೂ ಅವರ ಕುಟುಂಬದಲ್ಲಿ ಬಿರುಕು ಮೂಡಿದೆ ಎಂದು ಅಂದಾಜಿಸಲಾಗುತ್ತಿದೆ.

ಜಗನ್ ತೀವ್ರ ವಿರೋಧದ ನಡುವೆಯೂ ಜಗನ್ ಸಹೋದರಿ ಹಾಗೂ ವೈ.ಎಸ್.ರಾಜಶೇಖರ್ ರೆಡ್ಡಿ ಪುತ್ರಿ ಶರ್ಮಿಳಾ ತೆಲಂಗಾಣ ರಾಜಕೀಯ ಪ್ರವೇಶಿಸಿದ್ದಾರೆ. ಇದೇ ವಿಚಾರಕ್ಕೆ ಕುಟುಂಬದಲ್ಲಿ ಒಡಕು ಮೂಡಿದೆ ಎನ್ನಲಾಗುತ್ತಿದೆ.ಜುಲೈ 8 ರ ವೈಎಸ್ಆರ್ ಜನ್ಮದಿನದಂದು ಶರ್ಮಿಳಾ ವೈಎಸ್ಆರ್ ತೆಲಂಗಾಣ ಪಕ್ಷವನ್ನು ಘೋಷಿಸಿದ್ದು, ಈ ನಿಟ್ಟಿನಲ್ಲೇ ಸಭೆ ಕೂಡ  ನಡೆದಿದೆ. ಹೀಗಾಗಿ ಜಗನ್ ಗೈರಾಗಿದ್ದಾರೆ ಎನ್ನಲಾಗುತ್ತಿದೆ.

Jagan Mohan Reddy Absent in YSR’s Tribute Meet .

Comments are closed.