ಒರಿಸ್ಸಾದ ಸಮುದ್ರ ತೀರದಲ್ಲಿ ಅರಳಿದ ಡಾ.ವಿಷ್ಣುವರ್ಧನ್ ಮರಳು ಶಿಲ್ಪ!

ಕನ್ನಡದ ಮೇರುನಟ, ಸಾಹಸ ಸಿಂಹ ಡಾ.ವಿಷ್ಣುವರ್ಧನ್‌ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ವಿಭಿನ್ನವಾಗಿ ಆಚರಿಸುತ್ತಾರೆ. ಇದೀಗ ಒರಿಸ್ಸಾದ ಪುರಿಯ ಮೆರೀನ್ ಡ್ರೈವ್ ಬೀಚ್ ನಲ್ಲಿ ಇದೇ ಮೊದಲ ಬಾರಿಗೆ ಕನ್ನಡ ಕಲಾವಿದರೊಬ್ಬರ ಮರಳು ಶಿಲ್ಪ ಅರಳಿದೆ. ಅದ್ರಲ್ಲೂ ಕನ್ನಡದ ಮೇರುನಟ ಡಾ.ವಿಷ್ಣುವರ್ಧನ್ ಅವರ ಶಿಲ್ಪ ಇದೀಗ ಎಲ್ಲರ ಗಮನ ಸೆಳೆದಿದೆ.

ಸೆಪ್ಟೆಂಬರ್ 18ರಂದು ಡಾ.ವಿಷ್ಣು ಅವರ 71ನೇ ಜನ್ಮದಿನ. ಆ ಪ್ರಯುಕ್ತ ಮರಳುಶಿಲ್ಪ ಕಲೆಯ ತವರೂರಾದ ಒರಿಸ್ಸಾದಲ್ಲಿ ಡಾ.ವಿಷ್ಣುವರ್ಧನ್ ಅವರ 6 ಅಡಿ ಎತ್ತರ ಮತ್ತು 15 ಅಡಿ ಅಗಲದ ಮರಳು ಶಿಲ್ಪ ಅರಳಿದೆ.

ಹೆಸರಾಂತ ಶಿಲ್ಪಿ ಮನೀಶ್ ಕುಮಾರ್ ಅವರು ಈ ಶಿಲ್ಪವನ್ನು ರಚಿಸಿದ್ದಾರೆ. ಅದಕ್ಕೆ ಅಗತ್ಯವಾದ ಹಣಕಾಸು ವ್ಯವಸ್ಥೆಯನ್ನು ವೀರಕಪುತ್ರ ಶ್ರೀನಿವಾಸ ಅವರು ಒದಗಿಸಿದ್ದಾರೆ.

ಈ ಬಾರಿ ವಿಷ್ಣು ಸರ್‌ ಅವರ ಹುಟ್ಟುಹಬ್ಬವನ್ನು ಆಚರಿಸಲು ಅಭಿಮಾನಿಗಳು ಕಾತರರಾಗಿದ್ದಾರೆ. ಇನ್ನೊಂದೆಡೆ ವಿಷ್ಣುವರ್ಧನ್‌ ಅವರ ಸ್ಮಾರಕ ನಿರ್ಮಾಣದ ಕಾರ್ಯವೂ ನಡೆಯುತ್ತಿದೆ. ಇದೀಗ ಒರಿಸ್ಸಾದಲ್ಲಿ ಅರಳಿದ ಮರಳು ಶಿಲ್ಪವನ್ನು ಕಂಡ ಅಭಿಮಾನಿಗಳು ಸಖತ್‌ ಖುಷಿಯಾಗಿದ್ದಾರೆ.‌

https://youtu.be/05GOjxW07xg

ಇದನ್ನೂ ಓದಿ : ಯುಎಇ ಅಂಗಳದಲ್ಲಿ ಕನ್ನಡ ಕಂಪು : ಕುಂಬ್ಳೆ ಕನ್ನಡ ಹಾಡಿಗೆ ಮನಸೋತ ಪಂಜಾಬ್‌

ಇದನ್ನೂ ಓದಿ : ಡಾ.ವಿಷ್ಣುವರ್ಧನ್ ಸ್ಮಾರಕದ ವೈಶಿಷ್ಟ್ಯನಿಮಗೆ ಗೊತ್ತಾ ! ಅಭಿಮಾನಿಗಳಲ್ಲಿ ಭಾರತಿ ಅವರು ಮನವಿ ಮಾಡಿದ್ದೇಕೆ ?

( Dr. Vishnuvardhan Sand Sculpture on the shores of Orissa)

Comments are closed.