Shwetha srivatsav: ಹೋಪ್ ಮೂಲಕ ಸಿಂಪಲ್ ಹುಡುಗಿಯ ಗ್ರ್ಯಾಂಡ್ ರೀ ಎಂಟ್ರಿ:ಮೋಶನ್ ಪೋಸ್ಟರ್ ರಿಲೀಸ್

ಸಿಂಪಲ್ಲಾಗ್ ಒಂದು ಲವ್ ಸ್ಟೋರಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ನ ಮನಗೆದ್ದ ನಟಿ ಶ್ವೇತಾ ಶ್ರೀವಾಸ್ತವ್  ಹುಟ್ಟುಹಬ್ಬದ ಪ್ರಯುಕ್ತ ಹೋಪ್ ಸಿನಿಮಾದ ಮೋಶನ್ ಟೀಸರ್ ರಿಲೀಸ್ ಆಗಿದ್ದು, ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದೆ.

ಕೆಲ ವರ್ಷಗಳಿಂದ ತಾಯ್ತನಕ್ಕಾಗಿ ನಟನೆಯಿಂದ ಬ್ರೇಕ್ ಪಡೆದಿದ್ದ ಶ್ವೇತಾ ಶ್ರೀವಾಸ್ತವ್ ಮತ್ತೆ ಹೋಪ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಮರಳಿದ್ದಾರೆ. ಹೋಪ್ ಸಿನಿಮಾದಲ್ಲಿ ಶ್ವೇತಾ ಶ್ರೀವಾಸ್ತವ್ ಕೆಎಎಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಅಂಬರೀಶ್ ನಿರ್ದೇಶನದಲ್ಲಿ ಮೂಡಿಬಂದ ಚಿತ್ರದಲ್ಲಿ ಶ್ವೇತಾ ಕೆಎಎಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿರೋದರ ಬಗ್ಗೆ ಸಂಭ್ರಮದಿಂದ ಮಾಹಿತಿ ನೀಡಿರೋ ಶ್ವೇತಾ ಶ್ರೀವಾಸ್ತವ್ 34 ದಿನಗಳಲ್ಲೇ ಶೂಟಿಂಗ್ ಮುಗಿದಿದ್ದು, ಲಾಕ್ ಡೌನ್ ಅವಧಿಯಲ್ಲೇ ಶೂಟಿಂಗ ಮುಗಿದಿದೆ. ಸಿನಿಮಾದಲ್ಲಿ ರಾಜಕೀಯ ಅಂಶಗಳನ್ನು ಸೇರಿಸಲಾಗಿದೆಯಂತೆ.

ಕೆಎಎಸ್ ಅಧಿಕಾರಿ ಪಾತ್ರದ ಶ್ವೇತಾ ಪೋಸ್ಟ್ ಲುಕ್ ರಿವೀಲ್ ಆಗಿದ್ದು, ಸಖತ್ ಗ್ರ್ಯಾಂಡ್ ಆಂಡ್ ಖಡಕ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಸದೆ ಸುಮಲತಾ ಕೂಡ ವಿಶೇಷ ಪಾತ್ರದಲ್ಲಿ ನಟಿಸಿದ್ದಾರಂತೆ.

ಖ್ಯಾತ ಸ್ನೂಕರ್ ಆಟಗಾರ್ತಿ ವರ್ಷಾ ಈ ಸಿನಿಮಾವನ್ನು ನಿರ್ಮಿಸಿದ್ದು, ಕಿರಗೂರಿನ ಗಯ್ಯಾಳಿಗಳು ಚಿತ್ರದಲ್ಲಿ ಶ್ವೇತಾ ಶ್ರೀವಾಸ್ತವ್ ಪಾತ್ರ ನೋಡಿ ಮೆಚ್ಚಿಕೊಂಡಿದ್ದರಂತೆ. ಅದೇ ಕಾರಣಕ್ಕೆ ಶ್ವೇತಾ ಶ್ರೀವಾಸ್ತವ್ ಅವರನ್ನೇ ಹೋಪ್ ಚಿತ್ರದ ಕೆಎಎಸ್ ಅಧಿಕಾರಿ ಪಾತ್ರಕ್ಕೆ ಆಯ್ಕೆ ಮಾಡಿ ಒಪ್ಪಿಸಿದ್ದಾರಂತೆ.

( Actress shweetha shrivasthav re entry with hope movie )

Comments are closed.