GOOD NEWS : ಸರಕಾರಿ ನೌಕರರಿಗೆ ಗುಡ್‌ನ್ಯೂಸ್ : ಕೆಲಸದ ಅವಧಿಯಲ್ಲಿ ಸಿಗುತ್ತೆ ‘ಯೋಗ ವಿರಾಮ’

ನವದೆಹಲಿ : ಸರಕಾರಿ ನೌಕರರ ದಕ್ಷತೆ ಹಾಗೂ ಹುಮ್ಮಸ್ಸಿನಿಂದ ಕಾರ್ಯನಿರ್ವಹಣೆ ಮಾಡುವ ಸಲುವಾಗಿ ಮಾಸ್ಟರ್‌ ಫ್ಲ್ಯಾನ್‌ವೊಂದನ್ನು ಸಿದ್ದಪಡಿಸಿದೆ. ಇನ್ಮುಂದೆ ಸರಕಾರಿ ನೌಕರರು ಕಚೇರಿಯ ಅವಧಿಯಲ್ಲಿ ಯೋಗ ವಿರಾಮ ಪಡೆಯಬಹುದು ಎಂದು ಕೇಂದ್ರ ಸರಕಾರ ಆದೇಶ ಹೊರಡಿಸಿದೆ.

ಕೇಂದ್ರ ಸರಕಾರದ ಹೊಸ ಆದೇಶದ ಪ್ರಕಾರ ಸರಕಾರಿ ನೌಕರರು ತಮ್ಮ ಕಚೇರಿಯ ಅವಧಿಯಲ್ಲಿ ಐದು ನಿಮಷಗಳ ಕಾಲ ಯೋಗ ವಿರಾಮ ಪಡೆಯುತ್ತಿದ್ದಾರೆ. ಯೋಗ ಮಾಡುವುದರಿಂದ ಮನಸ್ಸು ತಾಜಾವಾಗಿರುತ್ತದೆ. ಹೀಗಾಗಿ ಸರಕಾರ ಆಯುಷ್‌ ಇಲಾಖೆ ಸಿದ್ದ ಪಡಿಸಿರುವ ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳುವಂತೆ ಹೇಳಿದೆ.

ಸರಕಾರಿ ನೌಕರರು ಈ ಆಪ್‌ನ್ನು ಕಡ್ಡಾಯವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಅಲ್ಲದೇ ಯೋಗದ ಕುರಿತು ಸಮಗ್ರ ಮಾಹಿತಿ ಈ ಆಪ್‌ನಲ್ಲಿ ಲಭ್ಯವಾಗಲಿದೆ. ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ), ಎರಡು ದಿನಗಳ ಹಿಂದೆ ಹೊರಡಿಸಿದ ಆದೇಶದಲ್ಲಿ, ಈ ಆಪ್ ಅನ್ನು ಪ್ರಚಾರ ಮಾಡಲು ಎಲ್ಲಾ ಸಚಿವಾಲಯಗಳನ್ನು ಕೇಳಿದೆ. ಆ ಆದೇಶದಲ್ಲಿ ‘ಭಾರತ ಸರ್ಕಾರದ ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳು ವೈ- ಬಳಕೆಯನ್ನು ಉತ್ತೇಜಿಸಲು ವಿನಂತಿಸಿದೆ.

ಆಯುಷ್‌ ಇಲಾಖೆ ಸಿದ್ದ ಪಡಿಸಿರುವ ಆಂಡ್ರಾಯ್ಡ್‌ ಆಧಾರಿತ ಆಪ್‌ನ್ನು ಸೆಪ್ಟೆಂಬರ್ 2 ರಂದು ಕೇಂದ್ರ ಸರಕಾರ ಬಿಡುಗಡೆ ಮಾಡಿದ್ದು, ಡಿಒಪಿಟಿ ಸಚಿವ ಜಿತೇಂದ್ರ ಸಿಂಗ್‌ ಭಾಗವಹಿಸಿದ್ದು, ಎಲ್ಲಾ ಸರಕಾರಿ ನೌಕರರು ಯೋಗ ಮಾಡಬೇಕೆಂದು ವಿನಂತಿ ಮಾಡಿದ್ದಾರೆ. ಕೆಲಸ ಮಾಡುವ ವೃತ್ತಿಪರರಿಗೆ ತಮ್ಮ ಕೆಲಸದ ದಕ್ಷತೆಯನ್ನು ಹೆಚ್ಚಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದ್ದರು. ಕೆಲಸದ ಸ್ಥಳದಲ್ಲಿ ಒತ್ತಡವನ್ನು ಕಡಿಮೆ ಮಾಡಲು, ಜನರನ್ನು ರಿಫ್ರೆಶ್ ಮಾಡಲು ಮತ್ತು ಮರು-ಗಮನಹರಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಇದು ಆಸನಗಳು, ಪ್ರಾಣಾಯಾಮ ಮತ್ತು ಧ್ಯಾನವನ್ನು ಒಳಗೊಂಡಿದೆ.

ದೆಹಲಿ, ಮುಂಬೈ, ಚೆನ್ನೈ ಸೇರಿದಂತೆ ದೇಶದ ಆರು ಮಹಾನಗರಗಳಲ್ಲಿ ಯೋಗ ವಿರಾಮವನ್ನು ಕಳೆದ ಜನವರಿ ತಿಂಗಳಿನಿಂದಲೇ ಪ್ರಾಯೋಗಿಕವಾಗಿ ನಡೆಸಲಾಗುತ್ತಿದ್ದು, ಯಶಸ್ಸನ್ನು ಕಂಡಿದೆ. ಹೀಗಾಗಿ ದೇಶದಾದ್ಯಂತ ಯೋಜನೆಯು ಜಾರಿಗೆ ಬರುತ್ತಿದೆ. ಇನ್ಮುಂದೆ ಸರಕಾರಿ ನೌಕರರು ಒತ್ತಡ ಮುಕ್ತರಾಗಿ ಕೆಲಸ ಮಾಡಲು ಯೋಗ ಸಹಕಾರಿಯಾಗಲಿದೆ. ಈಗಾಗಲೇ ಹಲವು ಖಾಸಗಿ ಕಂಪೆನಿಗಳು ತನ್ನ ಸಿಬ್ಬಂದಿಗಳನ್ನು ತಾಜಾ ಆಗಿಸಲು ಹಲವು ಟಾಸ್ಕ್‌ಗಳನ್ನು ನೀಡುತ್ತಿವೆ. ಹಲವು ಕಂಪೆನಿಗಳು ಸಿಬ್ಬಂದಿಗಳು ಬೆಳಗ್ಗೆಯೇ ಕಚೇರಿಗೆ ಹಾಜರಾಗುತ್ತಿದ್ದಂತೆಯೇ ಡ್ಯಾನ್ಸ್‌, ಯೋಗದ ಮೂಲಕ ರಿಲ್ಯಾಕ್ಸ್‌ ಆಗುತ್ತಿದ್ದಾರೆ.

ಇದನ್ನೂ ಓದಿ : 2ಕ್ಕಿಂತ ಹೆಚ್ಚು ಮಕ್ಕಳಿದ್ರೆ ಸಿಗಲ್ಲ ಸರಕಾರಿ ಕೆಲಸ ..!! ಒಂದೇ ಮಗುವಿದ್ರೆ ಇಲ್ಲಿದೆ ಭರ್ಜರಿ ಆಫರ್‌

ಇದನ್ನೂ ಓದಿ : ಸರಕಾರಿ ನೌಕರರಿಗೆ ಗುಡ್‌ ನ್ಯೂಸ್‌ : ತುಟ್ಟಿಭತ್ಯೆ ಶೇ.21.50ಕ್ಕೆ ಪರಿಷ್ಕರಿಸಿ ರಾಜ್ಯ ಸರಕಾರ ಆದೇಶ

( Government employees will now take a 5-minute ‘Yoga break’ in the office, order issued)

Comments are closed.