ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ ಸಿನಿಮಾ ರಾಜ್ಯದಾದ್ಯಂತ ತೆರೆ ಕಂಡಿದೆ. ಸುಮಾರು ಮೂನ್ನೂರಕ್ಕೂ ಅಧಿಕ ಥಿಯೇಟರ್‌ಗಳಲ್ಲಿ ಕೋಟಿಗೊಬ್ಬ ಅಬ್ಬರಿಸಿದ್ದಾನೆ. ಈ ನಡುವಲ್ಲೇ ಕಿಚ್ಚ ತಮ್ಮ ಅಭಿಮಾನಿಗಳಿಗಾಗಿ ಟ್ವೀಟ್ ಮಾಡಿದ್ದು, ಟ್ವೀಟ್ ನಲ್ಲಿ ಕೋಟಿಗೊಬ್ಬ ಸಿನಿಮಾದ ಅಪರೂಪದ ಪೋಸ್ಟರ್ ವೊಂದನ್ನು ಹಂಚಿಕೊಂಡಿದ್ದಾರೆ. ಟ್ವೀಟ್ ನೋಡಿರುವ ಅಭಿಮಾನಿಗಳು ಸಖತ್ ಫಿದಾ ಆಗಿದ್ದಾರೆ.

ಅಕ್ಟೋಬರ್ 14ರಂದು ಕೋಟಿಗೊಬ್ಬ ರಾಜ್ಯದಾದ್ಯಂತ ತೆರೆ ಕಾಣಬೇಕಾಗಿತ್ತು. ಆದರೆ ತಾಂತ್ರಿಕ ಕಾರಣದ ಹಿನ್ನೆಲೆಯಲ್ಲೀ ಸಿನಿಮಾ ಒಂದು ದಿನ ವಿಳಂಭವಾಗಿ ಅಕ್ಟೋಬರ್ 15ರ ವಿಜಯ ದಶಮಿಯ ದಿನದಂದು ತೆರೆಗೆ ಬಂದಿದೆ. ಕೋಟಿಗೊಬ್ಬನ ದರ್ಶನ ಸಿಗುತ್ತಲೇ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. ಕೋಟಿಗೊಬ್ಬ ಸಿನಿಮಾದಲ್ಲಿ ಹಲವು ಗೆಟಪ್‌ಗಳಲ್ಲಿ ಕಾಣಿಸಿಕೊಂಡಿರುವ ಸುದೀಪ್ ತಮ್ಮ ಅಪರೂಪದ ಗೆಟಪ್‌ನ ಪೋಸ್ಟರ್‌ವೊಂದನ್ನು ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಉದ್ದ ಗಡ್ಡ ಬಿಟ್ಟು ಬಂಡಿ ಎಳೆಯುವ ವೃದ್ದನ ಗೆಟಪ್‌ನಲ್ಲಿ ಸುದೀಪ್ ಕಾಣಿಸಿಕೊಂಡಿದ್ದಾರೆ. ಸ್ವಾತಿ ಮುತ್ತು ಸಿನಿಮಾದ ನಂತರದಲ್ಲಿ ಸುದೀಪ್ ಅವರನ್ನು ವೃದ್ದನ ಗೆಟಪ್‌ನಲ್ಲಿ ಕಂಡ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. ಚಿತ್ರತಂಡ ಇದುವರೆಗೂ ಬಿಡುಗಡೆ ಮಾಡದೆ ಇರುವ ಪೋಸ್ಟರ್ ನೋಡಿರುವ ಪ್ರೇಕ್ಷಕರಲ್ಲಿ ಕೋಟಿಗೊಬ್ಬ ಸಿನಿಮಾದ ಬಗೆಗಿನ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ.
ಇದನ್ನೂ ಓದಿ : Kotigobba 3 : ಸುದೀಪ್ ಸರ್‌ಗೆ ಸತ್ಯ ಗೊತ್ತಿದೆ : ಕೋಟಿಗೊಬ್ಬ ಸಿನಿಮಾಕ್ಕೆ ವಿತರಕರು ಮೋಸ ಮಾಡಿದ್ರು : ಸೂರಪ್ಪ ಬಾಬು

ಇನ್ನು ಸುದೀಪ್ ಪೋಸ್ಟರ್ ಜೊತೆಗೆ ಕೋಟಿಗೊಬ್ಬ -3 ಅಭಿಮಾನಿಗಳಿಗೆ ಅಭಿಮಾನದ ಹೊಳೆಯನ್ನೇ ಹರಿಸಿದ್ದಾರೆ. ಈಗಾಗಲೇ ಸಿನಿಮಾದ ನೋಡಿರುವ ಪ್ರೇಕ್ಷಕರು ಸುದೀಪ್ ಗುಣಗಾನ ಮಾಡುತ್ತಿದ್ರೆ, ಇನ್ನೊಂದೆಡೆಯಲ್ಲಿ ಪಟಾಕಿ ಸಿಡಿಸಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ವಿಶೇಷ ಗೆಟಪ್‌ನಲ್ಲಿ ಸುದೀಪ್ ನೋಡಿರುವ ಪ್ರೇಕ್ಷಕರು ಖುಷಿಯಾಗಿದ್ದಾರೆ. ಇದೇ ಕಾರನಕ್ಕೆ ಸುದೀಪ್ ಅಭಿಮಾನಿಗಳ ಸಂಭ್ರಮ ನೋಡಲು ಖುಷಿಯಾಗುತ್ತಿದೆ. ನೀವೆಲ್ಲರೂ ನಮಗೆ ನೀಡಿರುವ ಬೆಂಬಲಕ್ಕೆ ಬೆಲೆ ಕಟ್ಟಲಾಗದು ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಕೋಟಿಗೊಬ್ಬ, ಕೋಟಿಗೊಬ್ಬ -2 ಸಿನಿಮಾದ ಸಕ್ಸಸ್ ಬೆನ್ನಲ್ಲೇ ಸುದೀಪ್ ಇದೀಗ ಕೋಟಿಗೊಬ್ಬ 3 ಸಿನಿಮಾದ ಮೂಲಕ ಥಿಯೇಟರ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಶಿವಕಾರ್ತಿಕ್ ನಿರ್ದೇಶನದಲ್ಲಿ ಸೂರಪ್ಪ ಬಾಬು ನಿರ್ಮಾಣ ಮಾಡಿರುವ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆಯ ಬರೆಯಲು ಸಜ್ಜಾದಂತಿದೆ. ಮೊದಲ ದಿನವೇ ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ. ಲೇಟಾದ್ರೂ ಕೋಟಿಗೊಬ್ಬ ಲೇಟೆಸ್ಟ್ ಆಗಿಯೇ ಎಂಟ್ರಿ ಕೊಟ್ಟಿದ್ದಾನೆ.
ಇದನ್ನೂ ಓದಿ :
ಸುದೀಪ್ ಅಭಿಮಾನಿಗಳಿಗೆ ಬಿಗ್ ಶಾಕ್ : ಕೋಟಿಗೊಬ್ಬ ರಿಲೀಸ್ ವಿಳಂಬ, ಕ್ಷಮೆ ಕೋರಿದ ಕಿಚ್ಚ
ಕಿಚ್ಚನ ಹುಟ್ಟುಹಬ್ಬಕ್ಕೆ ಕೋಟಿಗೊಬ್ಬ-3 ಗಿಫ್ಟ್ : ಕೆಲವೇ ಗಂಟೆಗಳಲ್ಲಿ ದಾಖಲೆಯ ವೀಕ್ಷಣೆ
ಸಿಂಹಕ್ಕೆ ಕೈಯಾರೆ ಮಾಂಸ ಉಣಿಸಿದ ರಾಕಿಂಗ್ ಸ್ಟಾರ್: ವಿಡಿಯೋ ವೈರಲ್
(Kotigobba 3 Kichcha Sudeep reaction about first day first show, tweet special poster )