EGG DEATH : ಮೊಟ್ಟೆ ತಿನ್ನುವ ವೇಳೆ ಹುಷಾರ್‌ ! ಬೇಯಿಸಿದ ಮೊಟ್ಟೆ ತಿಂದು ಮಹಿಳೆ ಸಾವು

ಹೈದ್ರಾಬಾದ್‌ : ಮೊಟ್ಟೆ ಆರೋಗ್ಯಕ್ಕೆ ಉತ್ತಮ. ಮೊಟ್ಟೆ ಅಂದ್ರೆ ಬಹುತೇಕರು ಇಷ್ಟ ಪಡ್ತಾರೆ. ಆದರೆ ಮೊಟ್ಟೆ ತಿನ್ನುವ ವೇಳೆಯಲ್ಲಿ ಎಚ್ಚರವಾಗಿರಬೇಕು, ಕೊಂಚ ಯಾಮಾರಿದ್ರೂ ಪ್ರಾಣಕ್ಕೆ ಕುತ್ತು ಬರುತ್ತೆ ಅನ್ನೋದಕ್ಕೆ ತೆಲಂಗಾಣದಲ್ಲಿ ನಡೆದಿರುವ ಘಟನೆಯೇ ಬೆಸ್ಟ್‌ ಎಕ್ಸಾಂಪಲ್.‌ ಊಟದ ವೇಳೆ ಬೇಯಿಸಿದ ಮೊಟ್ಟೆ ತಿನ್ನುವ ವೇಳೆಯಲ್ಲಿ ಉಸಿರುಗಟ್ಟಿ ಮಹಿಳೆಯೋರ್ವರು ಸಾವನ್ನಪ್ಪಿದ್ದಾರೆ.

ತೆಲಂಗಾಣದ ನೇರಳಪಲ್ಲಿ ಎಂಬಲ್ಲಿ ಈ ಘಟನೆ ನಡೆದಿದ್ದು, ನೀಲಮ್ಮ ಎಂಬಾಕೆಯೇ ಮೃತ ಮಹಿಳೆ. ನೀಲಮ್ಮ ಊಟದ ವೇಳೆಯಲ್ಲಿ ಬೇಯಿಸಿದ ಮೊಟ್ಟೆಯನ್ನು ತಿಂದಿದ್ದಾರೆ. ಈ ವೇಳೆಯಲ್ಲಿ ಬೇಯಿಸಿದ ಮೊಟ್ಟೆಯನ್ನು ಇಡಿಯಾಗಿ ಬಾಯಿಯಲ್ಲಿ ಹಾಕಿಕೊಂಡಿದ್ದಾರೆ. ಈ ವೇಳೆಯಲ್ಲಿ ಮೊಟ್ಟೆ ಗಂಟಲಿನಲ್ಲಿ ಸಿಲುಕಿಕೊಂಡಿದೆ. ಮೊಟ್ಟೆ ಒಳಗೆ ಹೋಗದೆ, ಹೊರಗೆ ಬಾರದೇ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇದನ್ನೂ ಓದಿ : ದಿನಕ್ಕೆ ಎಷ್ಟು ಮೊಟ್ಟೆಗಳನ್ನು ಸೇವಿಸಬೇಕು ಗೊತ್ತಾ ?

ಈ ವೇಳೆಯಲ್ಲಿಯೇ ನೀಲಮ್ಮ ಅವರಿಗೆ ಉಸಿರುಗಟ್ಟುವ ಸಮಸ್ಯೆ ಎದುರಾಗಿತ್ತು. ಎಷ್ಟೇ ಕಷ್ಟಪಟ್ಟರೂ ಮೊಟ್ಟೆ ಗಂಟಲಿನಿಂದ ಹೊರಗೆ ಬಾರಲೇ ಇಲ್ಲ. ಸ್ವಲ್ಪ ಹೊತ್ತಲೇ ನೀಲಮ್ಮ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಒಂದೊಮ್ಮೆ ಮೊಟ್ಟೆಯನ್ನು ಕತ್ತರಿಸಿ ತಿಂದಿದ್ದರೆ, ಆಕೆ ಪ್ರಾಣಪಕ್ಷಿ ಉಳಿಯುತ್ತಿತ್ತು.

ಬಹುತೇಕರು ಮೊಟ್ಟೆಯನ್ನು ತಿನ್ನುವಾಗ ಇಡಿಯಾಗಿಯೇ ತಿನ್ನಲು ಇಷ್ಟ ಪಡ್ತಾರೆ. ಇನ್ನೂ ಕೆಲವರು ಮೊಟ್ಟೆಯನ್ನು ಕತ್ತರಿಸಿ ಅದಕ್ಕೆ ಉಪ್ಪು, ಖಾರ ಬೆರೆಸಿ ಟೇಸ್ಟ್‌ ಮಾಡ್ತಾರೆ. ಮೊಟ್ಟೆ ಆರೋಗ್ಯಕ್ಕೆ ಉತ್ತಮ, ವೈದ್ಯಕೀಯ ಜಗತ್ತು ಕೂಡ ಇದನ್ನು ಒಪ್ಪಿಕೊಂಡಿದೆ. ಆದರೆ ಬೇಯಿಸಿದ ಮೊಟ್ಟೆಯನ್ನು ಇಡಿಯಾಗಿ ತಿನ್ನುವ ಬದಲು, ಕತ್ತರಿಸಿ ತಿನ್ನುವುದು ಉತ್ತಮ. ಇನ್ಮುಂದೆ ಯಾವುದಕ್ಕೂ ಮೊಟ್ಟೆ ತಿನ್ನುವ ವೇಳೆಯಲ್ಲಿ ಹುಷಾರಾಗಿದೆ.

ಇದನ್ನೂ ಓದಿ : ಮೊಟ್ಟೆಯೊಳಗೆ ಕಬ್ಬಿಣದ ಚೂರು ಪತ್ತೆ : ಆಹಾರ ಇಲಾಖೆಗೆ ದೂರು ಕೊಟ್ಟ ಗ್ರಾಹಕ

( B Alert eats egg, a woman dies if she eats eggs )

Comments are closed.