Live Jamboo Savari : ಮೈಸೂರು ಅರಮನೆಯಲ್ಲಿ ಸಂಭ್ರಮದ ವಿಜಯದಶಮಿ : ಜಂಬೂ ಸವಾರಿ ನೇರ ಪ್ರಸಾರ

ಮೈಸೂರು : ನಾಡಹಬ್ಬ ದಸರಾ ಸಂಭ್ರಮ ಅರಮನೆ ನಗರಿಯಲ್ಲಿ ಮೇಳೈಸಿದೆ. ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಇಂದು ಕೊನೆಯಾಗಲಿದೆ. ಈಗಾಗಲೇ ಪೂಜಾ ಕೈಂಕರ್ಯಗಳು ನೆರವೇರುತ್ತಿದ್ದು, ಕೆಲವೇ ಕ್ಷಣಗಳಲ್ಲಿ ಜಂಬೂ ಸವಾರಿ ಮೆರವಣಿಗೆ ಆರಂಭವಾಗಲಿದೆ.

ಕೊರೊನಾ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ಈ ಬಾರಿ ಮೈಸೂರು ದಸರಾ ಮಹೋತ್ಸವ ಸವಾರಿ ಅರಮನೆ ಆವರಣಕ್ಕೆ ಮಾತ್ರವೇ ಸೀಮಿತವಾಗಲಿದೆ. ಚಾಮುಂಡಿ ಬೆಟ್ಟದಲ್ಲಿ ಉತ್ಸವ ಮೂರ್ತಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್‌ ಅವರು ಪೂಜೆ ಸಲ್ಲಿಸಿದ್ದು, ಅಲಂಕೃತ ವಾಹನದಲ್ಲಿ ಉತ್ಸವ ಮೂರ್ತಿಯನ್ನು ಚಾಮುಂಡಿ ಬೆಟ್ಟದಿಂದ ಮೈಸೂರು ಅರಮನೆಗೆ ಕರೆತರಲಾಗುತ್ತದೆ.

ಸಂಜೆ 4.36 ರಿಂದ 4.46ರ ಶುಭ ಮೀನ ಲಗ್ನದಲ್ಲಿ ಕೋಟೆ ಆಂಜನೇಯ ಸ್ವಾಮಿ ದೇಗುಲದ ಬಳಿಯಲ್ಲಿ ಜಂಬೂ ಸವಾರಿ ಮೆರವಣಿಗೆಗೆ ಸಿಎಂ ಬಸವರಾಜ್‌ ಬೊಮ್ಮಾಯಿ ಅವರು ಚಾಲನೆ ನೀಡಲಿದ್ದಾರೆ. ನಂತರ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆಯನ್ನು ಮಾಡಲಿದ್ದಾರೆ. ನಂತರ ಯದುವೀರ್‌ ಕೃಷ್ಣದತ್ತ ಒಡೆಯರ್‌ ಅವರು ಚಿನ್ನದ ಅಂಬಾರಿಯಲ್ಲಿರುವ ದೇವಿಗೆ ಪುಷ್ಪಾರ್ಚನೆಯನ್ನು ನೆರವೇರಿಸಲಿದ್ದಾರೆ.

https://www.youtube.com/watch?v=ng2ZmrUPLwk

ಚಂಡೆ, ಭಜನಾ ತಂಡ, ಪೊಲೀಸ್‌ ಬ್ಯಾಂಡ್‌, ನಾದಸ್ವರ, ಅಶ್ವದಳ, ವೇದಘೋಷ, ನವದುರ್ಗೆಯರ ಮೆರವಣಿಗೆ ಜಂಬೂ ಸವಾರಿಯ ಹೈಲೈಟ್ಸ್.‌ ಆದರೆ ಜಂಬೂ ಸವಾರಿ ಮೆರವಣಿಗೆ ಯಲ್ಲಿ ಪಾಲ್ಗೊಳ್ಳಲು ಕೇವಲ ಐನೂರು ಜನರಿಗೆ ಮಾತ್ರವೇ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ದೂರದೂರುಗಳಿಂದ ಬಂದಿರುವ ಭಕ್ತರಿಗೆ ನಿರಾಸೆಯಾಗಿದೆ.

(A live stream of the celebrated Vijayadashami Jumbo ride at Mysore Palace )

Comments are closed.