ಭಾನುವಾರ, ಏಪ್ರಿಲ್ 27, 2025
HomeCinemaMeghanaraj ಹೊಸ ಪೋಟೋ ಶೂಟ್‌ : ಮಹಾರಾಣಿಯಾಗಿ ಮಿಂಚಿದ ಮೇಘನಾ

Meghanaraj ಹೊಸ ಪೋಟೋ ಶೂಟ್‌ : ಮಹಾರಾಣಿಯಾಗಿ ಮಿಂಚಿದ ಮೇಘನಾ

- Advertisement -

ಚಿರಂಜೀವಿ ಸರ್ಜಾ ಪತ್ನಿ, ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಚಿರು ಹುಟ್ಟಿದ ಹಬ್ಬದ ನೆನಪಿಗಾಗಿ ಮೇಘನಾರಾಜ್‌ ಪೋಟೋ ಶೂಟ್‌ ಮೂಲಕ ಹೊಸ ಸಂದೇಶವನ್ನು ನೀಡಿದ್ದಾರೆ. ಮಹಾರಾಣಿಯ ಧಿರಿಸಿನಲ್ಲಿ ಮೇಘನಾ ಮಿಂಚಿದ್ದು, ಚಿರಂಜೀವಿ ಸರ್ಜಾ ರಾಜನಾಗಿ ಕಾಣಿಸಿಕೊಂಡಿದ್ದಾರೆ.

ಕಳೆದ ಎರಡು ವರ್ಷಗಳಿಂದಲೂ ಮೇಘನಾ ರಾಜ್‌ ಸರ್ಜಾ ನಟನೆಯಿಂದ ದೂರ ಉಳಿದಿದ್ದರು. ಪತಿಯ ನೆನಪಲ್ಲೇ ಎರಡನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ಮೇಘನಾ ಅಪರೂಪದ ಪೋಟೋ ಶೂಟ್‌ ಮಾಡಿಸಿಕೊಂಡಿದ್ದಾರೆ. ರಾಜನೋರ್ವನ ನಿಧನದ ನಂತರದಲ್ಲಿ ರಾಣಿ ಹೇಗೆ ಸಾಮ್ರಾಜ್ಯವನ್ನು ಮುನ್ನಡೆಸುತ್ತಾಳೆ ಅನ್ನೋದು ಪೋಟೋ ಶೂಟ್‌ನ ಸಂದೇಶ.

ಅಕ್ಟೋಬರ್‌ ತಿಂಗಳು ಮೇಘನಾ ಪಾಲಿಗೆ ಅತ್ಯಮೂಲ್ಯ. ಪತಿ ಚಿರು ಸರ್ಜಾ ಹಾಗೂ ರಾಯನ್‌ ಸರ್ಜಾ ಇಬ್ಬರೂ ಕೂಡ ಅಕ್ಟೋಬರ್‌ ತಿಂಗಳಲ್ಲೇ ಜನಿಸಿದ್ದಾರೆ. ಆದರೆ ಪತಿ ಜೊತೆಗೆ ಇಲ್ಲಾ ಅನ್ನೋ ನೋವು ಅವರನ್ನು ಕಾಡುತ್ತಿದೆ. ಇದೇ ಹೊತ್ತಲ್ಲೇ ಮೇಘನಾ ಮಾಡಿರುವ ಫೋಟೋ ಶೂಟ್‌ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆದಿದೆ.

ಇದನ್ನೂ ಓದಿ : ಸುರಂಗದ ಕೊನೆಯಲ್ಲಿ ಬೆಳಕು, ನನ್ನ ಪಾಲಿಗೆ ಆ ಬೆಳಕು ಚಿರು : HAPPY BIRTHDAY DEAR HUSBAND‌ ಎಂದ ಮೇಘನಾ

ಮಧುರಾ ರೆಡ್ಡಿ ಅವರ ಕಾನ್ಸೆಪ್ಟ್‍ನಲ್ಲಿ ಎಎಂ ಸ್ಟುಡಿಯೋ ಜೊತೆ ಸೇರಿ ಈ ಹೊಸ ಫೋಟೋಶೂಟ್ ಮಾಡಲಾಗಿದೆ. ನಾಳೆ ಚಿರು ಹುಟ್ಟುಹಬ್ಬವಾಗಿದ್ದು, ಮೇಘನಾ ರಾಜ್ ಅವರ ಹೊಸ ಸಿನಿಮಾ ಕೂಡ ಲಾಂಚ್ ಆಗಲಿದೆ. 2 ವರ್ಷಗಳ ಬಳಿಕ ಮತ್ತೆ ಬಿಗ್ ಸ್ಕ್ರೀನ್‍ಗೆ ಮೇಘನಾ ರಾಜ್ ಮರಳಲಿದ್ದಾರೆ. ಆದರೆ ಪೋಟೋ ಶೂಟ್‌ನಲ್ಲಿ ಎಲ್ಲಿಯೂ ರಾಯನ್‌ ಸರ್ಜಾ ಕಾಣಿಸಿಕೊಂಡಿಲ್ಲ.

ಮಹಾರಾಣಿಯಾಗಿ ಕಾಣಿಸಿಕೊಂಡಿರುವ ನಟಿ ಮೇಘನಾರಾಜ್‌ ತನ್ನ ಪ್ರೀತಿಯ ಪತಿ ಚಿರಂಜೀವಿ ಸರ್ಜಾ ಪೋಟೋಗೆ ಪೇಂಟಿಂಗ್‌ ಮಾಡುತ್ತಾ ಪೋಸ್‌ ಕೊಟ್ಟಿದ್ದಾರೆ. ಮಹಾರಾಣಿಯ ಪೋಟೋ ಶೂಟ್‌ನಲ್ಲಿ ಮೇಘನಾ ಸಖತ್‌ ಕ್ಯೂಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನೊಂದೆಡೆಯಲ್ಲಿ ಪತಿ ಹುಟ್ಟು ಹಬ್ಬದ ದಿನದಂದೇ ಮೇಘನಾ ಹೊಸ ಸಿನಿಮಾದ ಮುಹೂರ್ತ ಕೂಡ ನೆರವೇರಲಿದೆ.

ಇದನ್ನೂ ಓದಿ : ಮತ್ತೊಂದು ಆತ್ಮೀಯ ಜೀವ ಕಳೆದುಕೊಂಡ ಮೇಘನಾ….! ಭಾವುಕ ವಿದಾಯ ಕೋರಿ ಇನ್ ಸ್ಟಾ ಪೋಸ್ಟ್….!!

ಇದನ್ನೂ ಓದಿ : ಮೇಘನಾರನ್ನು ಚಿರು ಏನಂತ ಕರೆಯುತ್ತಿದ್ದರು…?! ಚಿರು ಮೇಘನಾ ಪ್ರೀತಿಯ ವಿಡಿಯೋ ವೈರಲ್…!!

( New photo shoot: Sandalwood Actress Meghana shining as a queen )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular