Heavy rain : ಕೇರಳದಲ್ಲಿ ವರುಣನ ರುಧ್ರ ನರ್ತನ : ಸಶಸ್ತ್ರ ಪಡೆಗಳ ಸಹಾಯ ಕೋರಿದ ಸಿಎಂ ವಿಜಯನ್

ಕೇರಳ : ದೇವರ ನಾಡಿನಲ್ಲಿ ವರುಣ ರುದ್ರ ನರ್ತನವಾಡುತ್ತಿದ್ದಾನೆ. ದಕ್ಷಿಣ ಮತ್ತು ಮಧ್ಯ ಕೇರಳದಲ್ಲಿ ಶನಿವಾರ ಸುರಿದ ಭಾರಿ ಮಳೆಯಿಂದಾಗಿ   ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳ ಗುಡ್ಡಗಾಡು ಪ್ರದೇಶಗಳಲ್ಲಿ ಭೂಕುಸಿತದಲ್ಲಿ ಹತ್ತಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, 22ಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆಗಾಗಿ (rescue operations) ಸಶಸ್ತ್ರ ಪಡೆಗಳ ಸಹಾಯವನ್ನು ಕೇರಳ ಸರಕಾರ ಕೋರಿದೆ.

ರಾಜ್ಯದ ಕೆಲವು ಭಾಗಗಳಲ್ಲಿ ಪರಿಸ್ಥಿತಿ ನಿಜವಾಗಿಯೂ ಗಂಭೀರವಾಗಿದೆ. ಜೀವಉಳಿಸಲು ಸಾಧ್ಯವಿರುವ ಎಲ್ಲವನ್ನೂ ನಾವು ಮಾಡುತ್ತೇವೆ’ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ರಾಜ್ಯ ರಾಜಧಾನಿಯಲ್ಲಿ ತುರ್ತು ಸಭೆಯ (emergency meeting) ಅಧ್ಯಕ್ಷತೆ ವಹಿಸಿದ್ದ ನಂತರ ಹೇಳಿಕೆಯಲ್ಲಿ ತಿಳಿಸಿದ್ದಾರೆ. ‘ನಾವು ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಸಹಾಯವನ್ನು ಕೋರಿದ್ದೇವೆ. ಜಿಲ್ಲೆಗಳಲ್ಲಿ ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ.

ಇದನ್ನೂ ಓದಿ: Rain Red Alert : ಕೇರಳದಲ್ಲಿ ಭಾರಿ ಮಳೆ ರೆಡ್‌ ಅಲರ್ಟ್‌ : 3 ದಿನ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ

ರಾಜ್ಯ ಸರ್ಕಾರವು ಎಲ್ಲಾ ಅಣೆಕಟ್ಟುಗಳಲ್ಲಿ ನೀರಿನ ಮಟ್ಟವನ್ನು ಮೇಲ್ವಿಚಾರಣೆ ಮಾಡುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು. ಧಾರಾಕಾರ ಮಳೆಯಿಂದಾಗಿ ಕೊಟ್ಟಾಯಂ, ಪತ್ತನಂತಿಟ್ಟ ಮತ್ತು ಇಡುಕ್ಕಿ ಎಂಬ ಮೂರು ಜಿಲ್ಲೆಗಳು ಹೆಚ್ಚು ಬಾಧಿತವಾಗಿವೆ.

ಭಾರಿ ಮಳೆಯ ಹಿನ್ನೆಲೆಯಲ್ಲಿ ಪಥನಂತಿಟ್ಟ ಜಿಲ್ಲೆಯ ಶಬರಿಮಲೈ (shabari malai) ಬೆಟ್ಟದ ದೇವಾಲಯಕ್ಕೆ ತೀರ್ಥಯಾತ್ರೆಯನ್ನು ಸ್ಥಗಿತಗೊಳಿಸಿದ್ದಾರೆ.‌ ಮುನ್ನೆಚ್ಚರಿಕೆಯ ಕ್ರಮವಾಗಿ ಎಲ್ಲಾ ಕಾಲೇಜುಗಳು ಮತ್ತು ಉನ್ನತ ಶಿಕ್ಷಣ ಕೇಂದ್ರಗಳು (Colleges and educational centers) ಬುಧವಾರದವರೆಗೆ ಮುಚ್ಚಿರುತ್ತವೆ.

ಇದನ್ನೂ ಓದಿ; IMD ALERT : ಕರ್ನಾಟಕ, ಕೇರಳ ಸೇರಿ ಮುಂದಿನ 4 ದಿನ ಭಾರಿ ಮಳೆ : ಹವಾಮಾನ ಇಲಾಖೆ ಎಚ್ಚರಿಕೆ

(Heavy rains in Kerala: CM Vijayan seeks help from armed forces)

Comments are closed.