Meghana Raj : ಸುರಂಗದ ಕೊನೆಯಲ್ಲಿ ಬೆಳಕು, ನನ್ನ ಪಾಲಿಗೆ ಆ ಬೆಳಕು ಚಿರು : HAPPY BIRTHDAY DEAR HUSBAND‌ ಎಂದ ಮೇಘನಾ

ಸ್ಯಾಂಡಲ್‌ವುಡ್‌ ನಟ ದಿವಂಗತ ಚಿರು ಸರ್ಜಾ ಹುಟ್ಟು ಹಬ್ಬ. ಚಿರಂಜೀವಿ ಸರ್ಜಾ ಅಗಲಿ ಎರಡು ವರ್ಷ ಕಳೆದಿದೆ. ಆದರೆ ಚಿರು ನೆನಪು ಮನದಲ್ಲಿ ಇಂದಿಗೂ ಶಾಶ್ವತ. ಪತಿಯ ಹುಟ್ಟು ಹಬ್ಬಕ್ಕೆ ಮೇಘನಾ ಸರ್ಜಾ ವಿಶಿಷ್ಠವಾಗಿ ಶುಭಾಶಯ ಕೋರಿದ್ದಾರೆ. ಚಿರು ಜೊತೆಗಿರುವ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಮೇಘನಾ ಪತಿಯ ಕುರಿತು ಪ್ರೀತಿಯ ಸಾಲುಗಳನ್ನು ಬರೆದಿದ್ದಾರೆ.

Junior chiru Name reveal

ಮೇಘನಾ ರಾಜ್‌ ಸರ್ಜಾ ಹಾಗೂ ಚಿರಂಜೀವಿ ಸರ್ಜಾ ಸ್ಯಾಂಡಲ್‌ವುಡ್‌ನ ಸ್ವೀಟ್‌ ಕಪಲ್ಸ್.‌ ಆದರೆ ಚಿರು ಹೊತ್ತಲ್ಲದ ಹೊತ್ತಲ್ಲಿ ಮೇಘನಾ ಅವರನ್ನು ಒಬ್ಬಂಟಿಯಾಗಿ ಹೊರಟು ಹೋಗಿದ್ರು. ಆದರೆ ಮೇಘನಾ ಚಿರು ನೀಡಿದ ಕಾಣಿಕೆಯಾಗಿರೋ ಮಗನ ಜೊತೆಗೆ ಜೀವನವನ್ನು ಕಳೆಯುತ್ತಿದ್ದಾರೆ. ಮಗನ ನಗುವಿನಲ್ಲೇ ಚಿರು ಇಲ್ಲದ ನೋವನ್ನು ಮರೆಯುತ್ತಿದ್ದಾರೆ.

ಇಂದು ಚಿರಂಜೀವಿ ಸರ್ಜಾ ಹುಟ್ಟುಹಬ್ಬ. ಚಿರು ಇಲ್ಲದ ನೋವು ಮನೆಯವರಿಗೆ ಮಾತ್ರವಲ್ಲ ಲಕ್ಷಾಂತರ ಅಭಿಮಾನಿಗಳಿಗೆ ನೋವನ್ನು ತರಿಸುತ್ತಿದೆ. ಇದೀಗ ಮೇಘನಾ ಸರ್ಜಾ ಪತಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಸುಂದರ ಕ್ಷಣದ ಪೋಟೋವನ್ನು ಅಪ್‌ಲೋಡ್‌ ಮಾಡಿ ಕ್ಷೇಶಗಳ ಕೊನೆಯಲ್ಲಿ ಯಾವಾಗಲೂ ವಿಜಯೋತ್ಸವ. ಬೆಂಕಿಯಿಂದ ಪ್ರಯೋಗವು ಮಹಾನ್‌ ವಿಷಯಗಳನ್ನು ಸಾಧಿಸುವ ಮಾರ್ಗವಾಗಿದೆ. ಆ ಪ್ರಯೋಗ ಎಂದಿಗೂ ಸುಲಭವಲ್ಲ. ಎಲ್ಲಾ ಭರವಸೆಗಳು ಮಸುಕಾದಾಗ, ಜೀವನವು ಇನ್ನೂ ತೋರಿದಾಗ ಸುರಂಗದ ಕೊನೆಯಲ್ಲಿ ಯಾವಾಗಲೂ ಬೆಳಕು ಇರುತ್ತದೆ. ನನಗೆ ಆ ಬೆಳಕು ಚಿರು. ನನ್ನ ಪ್ರಯಾಣವು ಪ್ರಕಾಶಮಾನವಾಗಿ ಬೆಳೆಯಲು ಆ ಬೆಳಕಿನ ಕಡೆಗೆ . HAPPY BIRTHDAY DEAR HUSBAND ❤️ MY LIFE… MY LIGHT ಎಂದು ಮೇಘನಾ ಬರೆದುಕೊಂಡಿದ್ದಾರೆ.

ಮೇಘನಾ ಪುತ್ರ ರಾಯನ್‌ ಸರ್ಜಾನಿಗೆ ಒಂದು ವರ್ಷ ಕಳೆಯುತ್ತಿದೆ. ಇದೀಗ ಪತಿಯ ಹುಟ್ಟು ಹಬ್ಬದ ಸಂದರ್ಭದಲ್ಲಿಯೇ ಮೇಘನಾ ಸರ್ಜಾ ಅಭಿಮಾನಿಗಳಿಗೆ ಗುಡ್‌ನ್ಯೂಸ್‌ ಕೊಟ್ಟಿದ್ದಾರೆ. ಮೇಘನಾ ಶೀಘ್ರದಲ್ಲಿಯೇ ಸಿನಿಮಾ ಲೋಕಕ್ಕೆ ಎಂಟ್ರಿ ಕೊಡಲಿದ್ದಾರೆ. ಒಟ್ಟಿನಲ್ಲಿ ಮೇಘನಾ ಮತ್ತೆ ತೆರೆಯ ಮೇಲೆ ಕಾಣಿಸಿಕೊಳ್ಳಲಿ ಅಂತಾ ಅಸಂಖ್ಯಾತ ಅಭಿಮಾನಿಗಳು ಹಾರೈಸುತ್ತಿದ್ದಾರೆ.

ಇದನ್ನೂ ಓದಿ : ಮೇಘನಾ ರಾಜ್ ಅಭಿಮಾನಿಗಳಿಗೆ ಸಿಹಿಸುದ್ದಿ…! ಸಧ್ಯದಲ್ಲೇ ಸಿನಿಮಾಗೆ ಮರಳಲಿದ್ದಾರೆ ನ್ಯೂಮಮ್ಮಿ….!!

ಇದನ್ನೂ ಓದಿ : Meghana Raj Sarja : ಚಿರು ನನ್ನ ಬೆಸ್ಟ್ ಫ್ರೆಂಡ್: ಮೇಘನಾ ರಾಜ್

ಇದನ್ನೂ ಓದಿ : ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ ರಾಯನ್ ಸರ್ಜಾ: ಮಗನ ಕ್ಯೂಟ್ ವಿಡಿಯೋ ಶೇರ್ ಮಾಡಿದ ಮೇಘನಾ

(The light at the end of the tunnel, for my part Chiru is the light: HAPPY BIRTHDAY DEAR HUSBAND )

Comments are closed.