ಭಜರಂಗಿ ಹಿಂದೆ ಸರಿದ್ರೂ ಧೈರ್ಯ ತೋರಿದ ಲಂಕೆ: ಸಿನಿಪ್ರಿಯರಿಗೆ ಬಹುದಿನಗಳ ಬಳಿಕ ಸಿಕ್ತು ಸಿಹಿಸುದ್ದಿ

ಕೊರೋನಾ ಸಂಕಷ್ಟ ಮನೋರಂಜನಾ ಕ್ಷೇತ್ರವನ್ನು ಸಂಪೂರ್ಣವಾಗಿ ಸ್ತಬ್ಧವಾಗಿಸಿದೆ. ಥಿಯೇಟರ್ ನಲ್ಲಿ ಶೇಕಡಾ 50 ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಲಾಗಿದೆ. ಈ ಕಾರಣಕ್ಕೆ ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಗೆ ಮನಸ್ಸು ಮಾಡುತ್ತಿಲ್ಲ. ಭಜರಂಗಿ-2 ದಂತಹ ಸಿನಿಮಾಗಳು ತೆರೆ ಮೇಲೆ ಬರೋಕೆ ಹಿಂದೇಟು ಹಾಕಿದ್ದರೇ ಯೋಗಿಯ ಲಂಕೆ ಮಾತ್ರ ಗೌರಿ-ಗಣೇಶ ಹಬ್ಬಕ್ಕೆ ತೆರೆಗೆ ಬರ್ತಿದೆ.

ರಾಜ್ಯದಲ್ಲಿಕೊರೋನಾ ಎರಡನೇ ಅಲೆ ತಕ್ಕ ಮಟ್ಟಿಗೆ ಹತೋಟಿಗೆ ಬಂದಿದ್ದರೂ ಸಂಪೂರ್ಣವಾಗಿ ಕೊರೋನಾ ನಿರ್ಮೂಲನೆ ಸಾಧ್ಯವಾಗಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಸದ್ಯ ಥಿಯೇಟರ್ ಗಳ ಮೇಲಿನ ನಿರ್ಬಂಧ ಸಡಿಲಿಸಲು ಸಿದ್ಧವಾಗಿಲ್ಲ. ಹೀಗಾಗಿ ರಿಲೀಸ್ ಗೆ ಸಿದ್ಧವಾಗಿದ್ದ ಭಜರಂಗಿ-2 ಮತ್ತೆ ನಿರ್ಧಾರ ಬದಲಿಸಿದೆ. ಯೋಗಿಯ ಲಂಕೆ ಮಾತ್ರ ಸಂಕಷ್ಟದ ನಡುವೆಯೂ ಮನೋರಂಜನೆ ನೀಡಲು ಮುಂದಾಗಿದೆ.

ಸಪ್ಟೆಂಬರ್ 10 ರಂದು ಲೂಸ ಮಾದ ಯೋಗಿ  ನಟನೆಯ ಲಂಕೆ ಸಿನಿಮಾ ತೆರೆಗೆ ಬರಲಿದೆ. ಇದರೊಂದಿಗೆ ಭಜರಂಗಿ-2 ಸಿನಿಮಾ ಕೂಡ ತೆರೆಗೆ ಬರೋದಾಗಿ ಘೋಷಿಸಿತ್ತು. ಆದರೆ ಥಿಯೇಟರ್ ಮೇಲಿನ ನಿರ್ಬಂಧದಿಂದ ಮತ್ತೆ ಚಿತ್ರಮಂದಿರಕ್ಕೆ ಬರೋ ತೀರ್ಮಾನ ಬದಲಾಯಿಸಿದೆ.

ಲಂಕೆ ಸಿನಿಮಾ ರಿಲೀಸ್ ಬಗ್ಗೆ ವಿವರಣೆ ನೀಡಿರೋ ನಿರ್ದೇಶಕ ರಾಮ್ ಪ್ರಸಾದ್, ಕರ್ನಾಟಕದ 200 ಚಿತ್ರಮಂದಿರದಲ್ಲಿ  ಲಂಕೆ ಸಿನಿಮಾ ರಿಲೀಸ್ ಆಗಿದೆ. ಕೆಲವು ಚಿತ್ರಮಂದಿರಗಳು ಲಂಕೆ ಪ್ರದರ್ಶನದ ಜೊತೆಗೆ ಚಿತ್ರಪ್ರದರ್ಶನ ಪುನರಾರಂಭಿಸಲು ನಿರ್ಧರಿಸಿದ್ದು, ಖುಷಿ ತಂದಿದೆ ಎಂದಿದ್ದಾರೆ.

ಲೂಸ್ ಮಾದ ನಾಯಕನಾಗಿರುವ ಲಂಕೆ ಸಿನಿಮಾದಲ್ಲಿ ಕೃಷಿ ತಾಪಂಡ್, ಕಾವ್ಯ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಂಡಿದ್ದು, ದಿವಂಗತ ನಟ ಸಂಚಾರಿ ವಿಜಯ್ ಕೂಡ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಕಾರ್ತೀಕ ಶರ್ಮಾ ಸಂಗೀತ ಸಂಯೋಜನೆ ಇರುವ ಸಿನಿಮಾಗೆ ರಮೇಶಬಾಬು ಛಾಯಾಗ್ರಹಣವಿದೆ.

actor yogi movie lanke releasing on september 10 th

Comments are closed.