ಭಾನುವಾರ, ಏಪ್ರಿಲ್ 27, 2025
HomeCinemaPuneeth rajkumarಕುರಿಗಾಹಿಗಳ ಜೊತೆ ಊಟ ಸವಿದ ಸ್ಯಾಂಡಲ್ ವುಡ್ ಸ್ಟಾರ್: ಅಪ್ಪು ಸರಳತೆಗೆ ಸಿಕ್ತು ಮತ್ತೊಂದು...

Puneeth rajkumarಕುರಿಗಾಹಿಗಳ ಜೊತೆ ಊಟ ಸವಿದ ಸ್ಯಾಂಡಲ್ ವುಡ್ ಸ್ಟಾರ್: ಅಪ್ಪು ಸರಳತೆಗೆ ಸಿಕ್ತು ಮತ್ತೊಂದು ಸಾಕ್ಷಿ

- Advertisement -

ದೊಡ್ಮನೆ ಹುಡುಗ ಪುನೀತ್ ರಾಜಕುಮಾರ್ ತಮ್ಮ ಸರಳತೆಯಿಂದಲೇ ಹೆಸರಾದವರು. ಎಲ್ಲರೊಂದಾಗಿ ಬೆರೆಯುವ ಪವರ್ ಸ್ಟಾರ್, ಗಂಗಾವತಿಯ ಅಂಜನಾದ್ರಿ ಬೆಟ್ಟದಲ್ಲಿ ಕುರಿಗಾಹಿಗಳ ಜೊತೆ ಕಾಲ ಕಳೆದು ಅವರೊಂದಿಗೆ ಊಟ ಮಾಡಿ ಸರಳತೆ ಮೆರೆದಿದ್ದಾರೆ.

ಪ್ರವಾಸ ಪ್ರಿಯರಾಗಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಭಾನುವಾರ ಕೊಪ್ಪಳದ ಗಂಗಾವತಿ ಸನಿಹದಲ್ಲಿರುವ ಅಂಜನಾದ್ರಿ ಬೆಟ್ಟಕ್ಕೆ ದೇವರ ದರ್ಶನಕ್ಕೆ ತೆರಳಿದ್ದರು. ಆದರೆ ಕೊರೋನಾ ನಿಯಮಗಳ ಕಾರಣಕ್ಕೆ ಪುನೀತ್ ರಾಜಕುಮಾರ್ ಗೆ ಪ್ರವೇಶಾವಕಾಶ ಸಿಗಲಿಲ್ಲ.

ಇದರಿಂದ ಬೇಸರಗೊಳ್ಳದೇ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಓಡಾಟ ನಡೆಸಿದ ಪುನೀತ್ ರಾಜಕುಮಾರ್, ಗಂಗಾವತಿ ಸಮೀಪದ ಹಳ್ಳಿಗಳಿಗೆ ಭೇಟಿ ನೀಡಿದರು. ಬಳಿಕ ಕುರಿಗಾಹಿಗಳ ಬಳಿ ತೆರಳಿದ ಪುನೀತ್ ಅವರ ಮಕ್ಕಳನ್ನು ಎತ್ತಿಮುದ್ದಾಡಿ ಅವರೊಂದಿಗೆ ಕಾಲ ಕಳೆದರು. ಮಾತ್ರವಲ್ಲ ಅವರೊಂದಿಗೆ ಕಂಬಳಿಯಲ್ಲಿ ಕೂತು ಸಂಗಟಿ ಹಾಲು ಸವಿದರು.

ಪುನೀತ್ ರಾಜಕುಮಾರ್ ಕುರಿಗಾಹಿಗಳೊಂದಿಗೆ ತೆಗೆಸಿಕೊಂಡಿರೋ ಪೋಟೋಗಳು  ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಪ್ಪು ಫ್ಯಾನ್ಸ್ ತಮ್ಮ ಸ್ಟಾರ್ ಸರಳತೆ ನೋಡಿ ಖುಷಿಪಟ್ಟಿದ್ದಾರೆ.ಕೆಲ ದಿನಗಳ ಹಿಂದೆಯಷ್ಟೇ ಸಕ್ರೆಬೈಲ್ ಆನೆ ಶಿಬಿರಕ್ಕೆ ತೆರಳಿದ್ದ ಪುನೀತ್ ರಾಜಕುಮಾರ್ ಮಾವುತರು ಹಾಗೂ ಅವರ ಕುಟುಂಬದೊಂದಿಗೆ ಕಾಲಕಳೆದಿದ್ದರು.

ಸದ್ಯ ಜೆಮ್ಸ್ ಚಿತ್ರೀಕರಣ ಮುಗಿಸಿರುವ ಪುನೀತ್ ರಾಜಕುಮಾರ್ ಹೊಂಬಾಳೆ ಫಿಲ್ಸ್ಮಂ ಜೊತೆ ದ್ವಿತ್ವ ಸಿನಿಮಾಕ್ಕೆ ಸಜ್ಜಾಗುತ್ತಿದ್ದಾರೆ. ಲೂಸಿಯಾ ಖ್ಯಾತಿಯ ಪವನ್ ಕುಮಾರ್ ಈ ಸಿನಿಮಾಗೆ ಆಕ್ಷ್ಯನ್ ಕಟ್ ಹೇಳಲಿದ್ದಾರೆ.

puneeth rajkumar had lunch with shepherd family in gangavathi

RELATED ARTICLES

Most Popular