2 ಅಲೆಗಿಂತ 7 ಪಟ್ಟು ಹೆಚ್ಚು ಮಕ್ಕಳನ್ನು ಕಾಡುತ್ತೆ ಕೊರೊನಾ 3ನೇ ಅಲೆ : ತಜ್ಞರ ವರದಿ ಆತಂಕ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್‌ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿದೆ. ಅದ್ರಲ್ಲೂ ಮೂರನೇ ಅಲೆ ಮಕ್ಕಳನ್ನೇ ಹೆಚ್ಚಾಗಿ ಕಾಡಲಿದೆ, ಅದ್ರಲ್ಲೂ ಎರಡನೇ ಅಲೆಗಿಂತ ಏಳು ಪಟ್ಟು ಹೆಚ್ಚು ಮಕ್ಕಳಿಗೆ ಮೂರನೇ ಅಲೆಯಲ್ಲಿ ಸೋಂಕು ಕಾಣಿಸಿಕೊಳ್ಳಿದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.

ಹಲವು ದೇಶಗಳಲ್ಲಿ ಈಗಾಗಲೇ ಕೊರೊನಾ ಮೂರನೇ ಅಲೆ ಮಕ್ಕಳಿಗೆ ಆತಂಕವನ್ನು ಮೂಡಿಸಿತ್ತು. ಆದರೆ ಭಾರತದಲ್ಲಿ ಕೊರೊನಾ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಲಿದೆಯೋ ಇಲ್ಲವೋ ಅನ್ನೋ ಬಗ್ಗೆ ತಜ್ಞರು ಒಂದೊಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಹಲವು ತಜ್ಞರು ಸೋಂಕು ಮಕ್ಕಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ. ಆದ್ರೀಗ ತಜ್ಞರು ನಡೆಸಿದ ಹೊಸ ಸಂಶೋಧನೆ ಪೋಷಕರಿಗೆ ಆತಂಕವನ್ನು ಮೂಡಿಸಿದೆ.

ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ಭಾರತೀಯ ಸಾರ್ವಜನಿಕ ಆರೋಗ್ಯ ತಜ್ಞರ ವರದಿಯ ಪ್ರಕಾರ ಕೊರೊನಾ ಸೋಂಕು ಮೂರನೇ ಅಲೆಯಲ್ಲಿ ಎರಡನೇ ಅಲೆಗಿಂತ ಏಳುಪಟ್ಟು ಹೆಚ್ಚು ಮಕ್ಕಳನ್ನು ಕಾಡಲಿದೆಯಂತೆ. ಅಲ್ಲದೇ ಮೂರಲೇ ಅಲೆ ಮಕ್ಕಳ ಪಾಲಿಗೆ ಕಂಟಕವಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಅದ್ರಲ್ಲೂ ಖ್ಯಾತ ಸಾಂಕ್ರಾಮಿಕ ಕಾಯಿಲೆಗಳ ತಜ್ಞ ಡಾ.ಗಿರಿಧರ ಬಾಬು ಅವರ ಪ್ರಕಾರ, ಎರಡನೇ ಅಲೆಗಿಂತ ಕೊರೊನಾ ಸೋಂಕು ಮೂರನೇ ಅಲೆಯಲ್ಲಿ ಹತ್ತು ಪಟ್ಟು ಹೆಚ್ಚು ಪರಿಣಾಮವನ್ನು ಬೀರಲಿದೆ ಎಂದ್ದಾರೆ.

ಈಗಾಗಲೇ ಕೊರೊನಾ ಲಸಿಕೆಯನ್ನು ನೀಡುವ ಕಾರ್ಯವನ್ನು ನಡೆಸಲಾಗುತ್ತಿದೆ. ಕೊರೊನಾ ಲಸಿಕೆಯನ್ನು ಪರಿಣಾಮಕಾರಿಯಾಗಿ ನೀಡಿದ್ರೆ ಕೊರೊನಾ ನಿಯಂತ್ರಣ ಮಾಡಬಹುದಾಗಿದೆ. ಅದ್ರಲ್ಲೂ ಮಕ್ಕಳಿಗೆ ಹೆಚ್ಚು ಲಸಿಕೆಯನ್ನು ನೀಡಿದ್ರೆ ಮೂರನೇ ಅಲೆಯ ಪರಿಣಾಮ ಕಡಿಮೆಯಾಗಬಹುದೆಂದು ಅಭಿಪ್ರಾಯ ಪಟ್ಟಿದ್ದಾರೆ. ಒಂದೊಮ್ಮೆ ಕೊರೊನಾ ಲಸಿಕೆ ಪರಿಣಾಮಕಾರಿಯಾಗದಿದ್ರೆ, ಆಸ್ಪತ್ರೆಯಲ್ಲಿ ಐಸಿಯು, ಆಮ್ಲಜನಕದ ಅಗತ್ಯತೆಯೂ ಹೆಚ್ಚಳವಾಗುವ ಸಾಧ್ಯತೆಯಿದೆ.

ಕೊರೊನಾ ವೈರಸ್‌ ಸೋಂಕಿನ ನಡುವಲ್ಲೇ ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸಲಾಗಿದೆ. ಇನ್ನೊಂದೆಡೆಯಲ್ಲಿ ಪೂರ್ವ ಪ್ರಾಥಮಿಕ, ಪ್ರಾಥಮಿಕ ಶಾಲೆಗಳನ್ನು ತೆರೆಯಲು ಸರಕಾರ ಸಿದ್ದತೆ ನಡೆಸುತ್ತಿದೆ. ಈ ನಡುವಲ್ಲೇ ತಜ್ಞರ ಸಂಶೋಧನಾ ವರದಿ ಎಚ್ಚರಿಕೆಯ ಗಂಟೆಯನ್ನು ಮೊಳಗಿಸಿದೆ. ಈ ನಿಟ್ಟಿನಲ್ಲಿ ಸರಕಾರ ಮೂರನೇ ಅಲೆಯ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಕೈಗೊಳಬೇಕಾಗಿದೆ.

ಇದನ್ನೂ ಓದಿ : ಕೊಲ್ಲೂರು ದೇವಳ ಪ್ರವೇಶಕ್ಕಿನ್ನು ಆಧಾರ್‌ ಕಡ್ಡಾಯ : ಕೇರಳ ಭಕ್ತರ ನಿಗಾಕ್ಕೆ ಉಡುಪಿ ಜಿಲ್ಲಾಡಳಿತದ ಹೊಸ ಆದೇಶ

ಇದನ್ನೂ ಓದಿ : ಕೊರೊನಾ ಲಸಿಕೆ ವಿತರಣೆಯಲ್ಲಿ ದಾಖಲೆ ಬರೆದ ಭಾರತ : 67.72 ಕೋಟಿ ಡೋಸ್‌ ಲಸಿಕೆ ವಿತರಣೆ

( The Corona 3rd wave is effected children more than 7 times )

Comments are closed.