ತಾಲಿಬಾನ್ ಉಗ್ರರಿಂದ ಪೈಶಾಚಿಕ ಕೃತ್ಯ : ಕುಟುಂಬದವರ ಎದುರಲ್ಲೇ ಗರ್ಭಿಣಿ ಪೊಲೀಸ್ ಹತ್ಯೆ

ಕಾಬೂಲ್ : ಆಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಂಡ ನಂತರದಲ್ಲಿ ಉಗ್ರರು ಜನರಿಗೆ ನಾನಾ ತರಹದ ಹಿಂಸೆ ನೀಡುತ್ತಿದ್ದಾರೆ. ಇದೀಗ ಮತ್ತೆ ತಾಲಿಬಾನ್ ಉಗ್ರರು ಅಟ್ಟಹಾಸ ಮೆರೆಯುತ್ತಿದ್ದು 8 ತಿಂಗಳ ಗರ್ಭಿಣಿಯಾಗಿದ್ದ ಮಹಿಳಾ ಪೊಲೀಸ್ ಓರ್ವಳನ್ನು ಕುಟುಂಬದವರ ಕಣ್ಣೆದುರಲ್ಲೇ ಅಮಾನವೀಯವಾಗಿ ಹತ್ಯೆ ಮಾಡಿದ್ದಾರೆ.

ಬಾನು ನೆಗರ್ ಮೃತಪಟ್ಟ ಮಹಿಳಾ ಪೊಲೀಸ್ ಎಂದು ಗುರುತಿಸಲಾಗಿದೆ. ಆಫ್ಘಾನಿಸ್ತಾನದ ಘೋರ್ ಪ್ರಾಂತ್ಯದ ರಾಜಧಾನಿ ಫಿರೋಜ್ ಕೋಹ್ ನ ನಿವಾಸದದಲ್ಲಿದ್ದ ಬಾನು ನೆಗರ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕುಟುಂಬದವರ ಎದುರಲ್ಲೇ ತಾಲಿಬಾನಿಗಳು ಈ ಕ್ರೌರ್ಯ ಮೆರೆದಿದ್ದಾರೆ.

ಇದನ್ನೂ ಓದಿ: Mysore Gang Rape : ತಮಿಳುನಾಡಲ್ಲಿ ಅತ್ಯಾಚಾರಿಗಳಿಂದ ಸ್ಥಳ ಮಹಜರು : ಬಟ್ಟೆ, ಮಾರಕಾಸ್ತ್ರ ವಶಕ್ಕೆ ಪಡದ ಪೊಲೀಸರು

ಗನ್ ಹಿಡಿದು ಮನೆಗೆ ನುಗ್ಗಿದ ಉಗ್ರರು ಮನೆಯವರನ್ನು ಕಟ್ಟಿಹಾಕಿದ್ದಾರೆ. ಬಾನು ಅವರ ಮೇಲೆ ಮನಬಂದಂತೆ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ. ಇದೇ ರೀತಿ ಹಲವು ಕಡೆಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ, ಹಿಂಸಾಚಾರ ನಡೆಸುತ್ತಿರುವ ತಾಲಿಬಾನ್ ಭಯೋತ್ಪಾದಕರು ಅಟ್ಟಹಾಸ ಮೆರೆದಿದ್ದಾರೆ.

ಇದನ್ನೂ ಓದಿ: Udupi : ಮಾದಕ ವಸ್ತು ಸೇವಿಸಿ ಸೌಮ್ಯ ಕೊಲೆ : ಸಂದೇಶ್‌ ವಿರುದ್ದ ಪೋಷಕರ ಆಕ್ರೋಶ

ಆದರೆ ತಾಲಿಬಾನ್‌ ಉಗ್ರ ಸಂಘಟನೆ ಮಾತ್ರ ನಾವು ಬದಲಾಗಿದ್ದೇವೆ, ಹೆಣ್ಣಿನ್ನು ಹಿಂಸಿಸುವುದನ್ನು ಬಿಟ್ಟಿದ್ದೇವೆ ಎಂದು ಸುಳ್ಳು ಭರವಸೆಯನ್ನು ನೀಡುತ್ತಿವೆ. ಆದರೆ ಆಫ್ಘಾನಿಸ್ತಾನದಲ್ಲಿ ಮಾತ್ರ ಹೆಣ್ಣಿನ ಮೇಲೆ ಅತ್ಯಾಚಾರ, ಹಿಂಸಾಚಾರ, ಶೋಷಣೆಗಳು ಮಾತ್ರ ನಿಂತಿಲ್ಲ.

(Deadly act by Taliban militants: Pregnant police women killed in front of family)

Comments are closed.