ಗೆಲುವಿನ ಭರವಸೆಯೊಂದಿಗೆ ಆಟ ಆರಂಭಿಸಿದ ಆರ್.ಸಿ.ಬಿ ಮತ್ತೊಮ್ಮೆ ಮುಗ್ಗರಿಸಿದ್ದು, ಚೈನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲು ಕಂಡಿದೆ. ಈ ಸೋಲು ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದ್ದು, ದುಬೈನಲ್ಲಿ ಕೂತು ಪಂದ್ಯ ವೀಕ್ಷಿಸಿದ ಸುದೀಪ್ ಟ್ವೀಟ್ ನಲ್ಲಿ ನಿರಾಸೆ ಹಂಚಿಕೊಂಡಿದ್ದಾರೆ.

ಆರ್ಸಿಬಿ ತಂಡದ ಅದ್ಭುತ ಒಫನಿಂಗ್ ನಂತರವೂ ಚೈನೈ ಚೇತರಿಸಿಕೊಂಡು ತಿರುಗಿ ಬಿದ್ದಿದ್ದು ನಿಜಕ್ಕೂ ಒಳ್ಳೆಯ ಆಟ. ವಿರಾಟ್ ಕೊಹ್ಲಿ ಮತ್ತೆ ಫಾರಂಗೆ ಮರಳಿದ್ದು ಖುಷಿಯ ಸಂಗತಿ. ಉಳಿದ ಐದು ಪಂದ್ಯಗಳಲ್ಲಿ ಮತ್ತೆರಡು ಗೆಲುವು ಬೇಕಾಗಿದೆ. ಆರ್.ಸಿ.ಬಿ ಅಭಿಮಾನಿಗಳಾದ ನಾವು ಸದಾ ನಿಮ್ಮ ಬೆಂಬಲಕ್ಕೆ ಇದ್ದೇವೆ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.
ಅಲ್ಲದೇ ಸುದೀಪ್ ದೋನಿ ಪಡೆಯ ಆಟವನ್ನು ಶ್ಲಾಘಿಸಿದ್ದಾರೆ. ಕ್ರಿಕೆಟ್ ಪ್ರಿಯರಾಗಿರೋ ಸುದೀಪ್ ಕೊರೋನಾ ಭೀತಿಯ ನಡುವೆಯೂ ಐಪಿಎಲ್ ಪಂದ್ಯಗಳನ್ನು ಕ್ರೀಡಾಂಗಣದಲ್ಲಿಯೇ ಕುಳಿತು ನೋಡುವುದಕ್ಕಾಗಿ ದುಬೈಗೆ ಹಾರಿದ್ದಾರೆ.
https://twitter.com/KicchaSudeep/status/1441482780525879296?s=08
ಆರ್.ಸಿ.ಬಿ ಸೋಲಿಗೆ ಅಭಿಮಾನಿಗಳು, ಚಿತ್ರರಂಗದ ನಟ-ನಟಿಯರು ಬೇಸರ ವ್ಯಕ್ತಪಡಿಸುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಆರ್.ಸಿ.ಬಿ ವಿರುದ್ಧ ಟ್ರೋಲ್ ಗಳು ಹರಿದಾಡುತ್ತಿವೆ.
(Actor sudeep tweet on rcb and csk match)