ಟೈಟಲ್ ಇಲ್ಲದ ಸಿನಿಮಾ: ಸ್ಯಾಂಡಲ್ ವುಡ್ ನಲ್ಲಿ ಡೈರೈಕ್ಟರ್ ಉಪ್ಪಿ ಹೊಸಪ್ರಯೋಗ

ಸ್ಯಾಂಡಲ್ ವುಡ್ ನಲ್ಲಿ ವಿಭಿನ್ನ ಕಥಾಹಂದರಗಳು ಹಾಗೂ ಢಿಪರೆಂಟ್ ಕಾಸ್ಟ್ಯೂಮ್  ಗಳು ಹೀಗೆ ಹೊಸತನಗಳಿಂದಲೇ ಸದ್ದು ಮಾಡಿದ ನಟ ಹಾಗೂ ನಿರ್ದೇಶಕ ಉಪೇಂದ್ರ್ ಮತ್ತೊಂದು ಹೊಸ ಪ್ರಯೋಗಕ್ಕೆ ಸಿದ್ಧವಾಗಿದ್ದು, ಟೈಟಲ್ ಇಲ್ಲದ ಸಿನಿಮಾ ನಿರ್ಮಿಸಲಿದ್ದಾರೆ.

ಮತ್ತೊಮ್ಮೆ ನಿರ್ದೇಶನಕ್ಕೆ ಮರಳಿದ ಉಪೇಂದ್ರ, ಸಿನಿಮಾ ನಿರ್ಮಿಸುತ್ತಿರುವುದಾಗಿ ಘೋಷಿಸಿದ್ದರು. ಹುಟ್ಟುಹಬ್ಬದಂದು ಸಿನಿಮಾ ಟೈಟಲ್ ಘೋಷಿಸುವ ಸಿದ್ಧತೆಯಲ್ಲಿದ್ದ ಉಪೇಂದ್ರ ಸಿನಿಮಾ ಪೋಸ್ಟರ್ ಲೀಕ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಬುದ್ಧಿವಂತನ ಹೊಸ ಸಿನಿಮಾ ಪೋಸ್ಟರ್ ವೈರಲ್ ಆಗಿದೆ.

ಆದರೆ ಈ ಸಿನಿಮಾದ ವೈಶಿಷ್ಟ್ಯತೆಯೂ ಬಯಲಾಗಿದ್ದು, ಈ ಬಾರಿ ಟೈಟಲ್ ಇಲ್ಲದ ಸಿನಿಮಾ ನಿರ್ಮಿಸಲಿದ್ದಾರಂತೆ ಉಪೇಂದ್ರ. ಪೋಸ್ಟರ್ ನಲ್ಲಿ ವೈಟ್ ಯೂ ಹಾಗೂ ಮಧ್ಯದಲ್ಲಿ ರೆಡ್ ಕಲರ್ ಒಂದು ಗೆರೆ ಹಾಕಲಾಗಿದೆ. ಮೇಲ್ನೋಟಕ್ಕೆ ಇದು ತಿರುಪತಿ ನಾಮದಂತೆ ತೋರುತ್ತಿದ್ದು, ಇಂಗ್ಲೀಷ್ ನಲ್ಲಿ ಯೂ ಮತ್ತು ಆಯ್ ಎಂಬ ಸಿಂಬಾಲ್ ನೀಡುತ್ತಿದೆ.

ಆದರೆ ಈ ಕೋಡ್ ಏನನ್ನು ಬಿಂಬಿಸುತ್ತಿದೆ ಎಂಬ ಪ್ರಶ್ನೆಗೆ ನಿರ್ದೇಶಕ ಉಪೇಂದ್ರ ಉತ್ತರ ನೀಡಬೇಕಿದೆ. 2015 ರಲ್ಲಿ 10 ನೇ ಸಿನಿಮಾ ಉಪ್ಪಿ-2 ಬಳಿಕ ನಿರ್ದೇಶನದಿಂದ ದೂರ ಉಳಿದಿದ್ದ ಉಪೇಂದ್ರ ಈಗ ಮತ್ತೊಮ್ಮೆ ಡೈರೈಕ್ಟರ್ ಪೋಸ್ಟ್ ನಲ್ಲಿ ಆಕ್ಷ್ಯನ್ ಕಟ್ ಹೇಳಲು ಸಿದ್ಧವಾಗಿದ್ದಾರೆ.

1992 ರಲ್ಲಿ ತರ್ಲೆ ನನ್ ಮಗ ಸಿನಿಮಾದ ಮೂಲಕ ಸಂಪೂರ್ಣ ನಿರ್ದೇಶಕರಾಗಿ ಕೆರಿಯರ್ ಆರಂಭಿಸಿ ಉಪೇಂದ್ರ, ಶ್,ಓಂ,ಆಫರೇಷನ್ ಅಂತ,ಓಂಕಾರ,ಸ್ವಸ್ತಿಕ ಸೇರಿ ಹಲವು ಚಿತ್ರ ನಿರ್ದೇಶಿಸಿದ್ದಾರೆ. ಈಗ ಉಪೇಂದ್ರ 11 ಸಿನಿಮಾ ನಿರ್ದೇಶನಕ್ಕೆ ಸಿದ್ಧವಾಗಿದ್ದಾರೆ.

ಸದ್ಯ ಉಪೇಂದ್ರ ನಟಿಸಿದ ತೆಲುಗು ಸಿನಿಮಾ ಗಣಿ ಬಿಡುಗಡೆಗೆ ಸಿದ್ಧವಾಗಿದ್ದು, ಇದಲ್ಲದೇ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜದಲ್ಲಿ ಉಪ್ಪಿ ಬ್ಯುಸಿಯಾಗಿದ್ದಾರೆ. ಎರಡು ಭಾಗದಲ್ಲಿ ರಿಲೀಸ್ ಆಗಲಿರೋ ಈ ಸಿನಿಮಾದಲ್ಲಿ ಸುದೀಪ್ ಕೂಡ ನಟಿಸಿದ್ದಾರೆ.  

Actor upendra directing to title movie

Comments are closed.