Tuition Fees Relief : ವಿದ್ಯಾರ್ಥಿ, ಪೋಷಕರಿಗೆ ಗುಡ್‌ನ್ಯೂಸ್‌ ಕೊಟ್ಟ ಹೈಕೋರ್ಟ್‌

ಬೆಂಗಳೂರು : ಶಾಲೆಗಳಲ್ಲಿನ ಬೋಧನಾ ಶುಲ್ಕ ಕಡಿತ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್‌ ಮಹತ್ವದ ಆದೇಶವನ್ನು ಹೊರಡಿಸಿದೆ. ಇದೀಗ ಶೇ.15ರಷ್ಟು ಬೋಧನಾ ಶುಲ್ಕ ಕಡಿತಕ್ಕೆ ಆದೇಶಿಸಿದ್ದು, ಪೋಷಕರು ಹಾಗೂ ಖಾಸಗಿ ಶಾಲೆಗಳಿಗೆ ಹೈಕೋರ್ಟ್‌ ರಿಲೀಫ್‌ ನೀಡಿದೆ.

ಕೊರೊನಾ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ಶಾಲೆಗಳಲ್ಲಿ ಶೇ.30ರಷ್ಟು ಕಡಿತ ಮಾಡಬೇಕೆಂದು ರಾಜ್ಯ ಸರಕಾರ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಖಾಸಗಿ ಶಾಲೆಗಳ ಒಕ್ಕೂಟ ಹೈಕೋರ್ಟ್‌ ಮೆಟ್ಟಿಲೇರಿತ್ತು. ಆದ್ರೀಗ ರಾಜ್ಯ ಹೈಕೋರ್ಟ್‌ ವಿಭಾಗೀಯ ಪೀಠ ಖಾಸಗಿ ಶಾಲೆಗಳ ಒಕ್ಕೂಟ ಹಾಗೂ ಪೋಷಕರ ವಾದವನ್ನು ಆಲಿಸಿ, ಸುಪ್ರೀಂ ಕೋರ್ಟ್‌ ತೀರ್ಪನ್ನು ಉಲ್ಲೇಖಿಸಿ ಮಹತ್ವದ ಆದೇಶವನ್ನು ಹೊರಡಿಸಿದೆ.

ಹೈಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ 2020-21ನೇ ಸಾಲಿನಲ್ಲಿ ಖಾಸಗಿ ಶಾಲೆಗಳನ್ನು ಬೋಧನಾ ಶುಲ್ಕದಲ್ಲಿ ಶೇ.15ರಷ್ಟು ಕಡಿತ ಮಾಡಬೇಕಾಗಿದೆ. ಹೈಕೋರ್ಟ್‌ ಆದೇಶದಿಂದಾಗಿ ಪೋಷಕರು ಹಾಗೂ ವಿದ್ಯಾರ್ಥಿಗಳು ನಿರಾಳರಾಗಿದ್ದಾರೆ. ಇನ್ನೊಂದೆಡೆಯಲ್ಲಿ ಕಳೆದ ಸಾಲಿನಲ್ಲಿ ಕೆಲವು ಶಾಲೆಗಳು ಶೇ.30ರಷ್ಟು ಶುಲ್ಕ ವಿನಾಯಿತಿಯನ್ನು ನೀಡಿದ್ದು, ಈ ಬಾರಿ ಶೇ.15ಕ್ಕೆ ಇಳಿಕೆಯಾಗಿವುದರಿಂದಾಗಿ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಕೂಡ ನಿರಾಳವಾಗಿದೆ.

ಖಾಸಗಿ ಶಾಲೆಗಳ ಒಕ್ಕೂಟವಾಗಿರುವ ರೂಪ್ಸಾ ಹಾಗೂ ಕ್ಯಾಂಪ್ಸ್‌ ಹೈಕೋರ್ಟ್‌ ಆದೇಶವನ್ನು ಒಪ್ಪಿಕೊಂಡಿವೆ. ಕೊರೊನಾ ಸಂಕಷ್ಟಕ್ಕೆ ಸಿಲುಕಿದ್ದ ಪೋಷಕರಿಗೆ ಇದೀಗ ಹೈಕೋರ್ಟ್‌ ಮಹತ್ವದ ಆದೇಶವನ್ನು ಹೊರಡಿಸಿದೆ.

ಇದನ್ನೂ ಓದಿ : ಶಾಲಾ ಮಕ್ಕಳಿಗೆ ಕೊರೊನಾ ಟೆಸ್ಟ್‌ ಕಡ್ಡಾಯ : ಕೋವಿಡ್‌ ತಾಂತ್ರಿಕ ಸಮಿತಿ ಸಲಹೆ

ಇದನ್ನೂ ಓದಿ : ಶಾಲಾರಂಭದ ಬೆನ್ನಲ್ಲೇ ಮಡಿಕೇರಿಯಲ್ಲಿ 35 ವಿದ್ಯಾರ್ಥಿನಿರಿಗೆ ಕೊರೊನಾ ಸೋಂಕು

ಇದನ್ನೂ ಓದಿ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯಿಂದ ಶಾಲೆ, ಕಾಲೇಜು ಆರಂಭ

(Tuition Fees Big Relief Karnataka High Court )

Comments are closed.