ಸ್ಯಾಂಡಲ್ ವುಡ್ ನಲ್ಲಿ ಮೋಡಿ ಮಾಡಿದ ಸಿನಿಮಾ ಮಾಣಿಕ್ಯ. ತಂದೆ-ಮಗನ ಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಸುದೀಪ್ ಕನ್ನಡಿಗರ ಮಗ ಗೆದ್ದಿದ್ದರು. ಇಬ್ಬರು ಸ್ಟಾರ್ ಗಳನ್ನು ತುಂಬ ಹತ್ತಿರಕ್ಕೆ ತಂದ ಈ ಸಿನಿಮಾ ಬಾಕ್ಸಾಫೀಸ್ ನಲ್ಲಿ ಗೆದ್ದಿತ್ತು.

ಮತ್ತೊಮ್ಮೆ ಇಂತಹುದೇ ಹಿಟ್ ಚಿತ್ರವೊಂದಕ್ಕೆ ಸುದೀಪ್ ಹಾಗೂ ರವಿಚಂದ್ರನ್ ಸಜ್ಜಾಗುತ್ತಿದ್ದಾರಾ? ಇಂತಹದೊಂದು ಊಹೆಗೆ ಕಾರಣವಾಗಿರೋದು ರವಿಚಂದ್ರನ್ ಹಾಗೂ ಸುದೀಪ್ ಭೇಟಿ. ಸುದೀಪ್ ರನ್ನು ರವಿಚಂದ್ರನ್ ಅವರ ನಿವಾಸದಲ್ಲೇ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಈ ಇಬ್ಬರೂ ಸ್ಟಾರ್ ಗಳ ಮಾತುಕತೆಗೆ ವಿಕ್ರಾಂತ್ ರೋಣ ಸಿನಿಮಾದ ನಿರ್ಮಾಪಕ ಜಾಕ್ ಮಂಜು ಸಾಕ್ಷಿಯಾಗಿದ್ದಾರೆ. ಹೀಗಾಗಿ ಮತ್ತೊಮ್ಮೆ ಮಾಣಿಕ್ಯದಂತಹ ಸಿನಿಮಾವೊಂದು ಸಿದ್ಧವಾಗಲಿದ್ದು, ರವಿಚಂದ್ರನ್ ಹಾಗೂ ಸುದೀಪ್ ತಂದೆ ಮಗನ ಪಾತ್ರದಲ್ಲಿ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಆದರೆ ಸದ್ಯಕ್ಕೆ ಯಾವುದೇ ಸಿನಿಮಾ ವಿಚಾರದ ಬಗ್ಗೆ ಸುದೀಪ್ ಅಥವಾ ರವಿಚಂದ್ರನ್ ಯಾವುದೇ ಗುಟ್ಟುಬಿಟ್ಟುಕೊಟ್ಟಿಲ್ಲ. ಸುದೀಪ್ ಅಭಿನಯದ ಕೋಟಿಗೊಬ್ಬ-3 ಹಾಗೂ ವಿಕ್ರಾಂತ ರೋಣ ರಿಲೀಸ್ ಬಳಿಕ ಸಿನಿಮಾ ಘೋಷಣೆಯಾಗಲಿದೆ ಎನ್ನಲಾಗುತ್ತಿದೆ.
ಇನ್ನು ಸುದೀಪ್ ರನ್ನು ಭೇಟಿ ಮಾಡಿರೋ ಪೋಟೋವನ್ನು ಟ್ವೀಟರ್ ನಲ್ಲಿ ಹಂಚಿಕೊಂಡಿರೋ ರವಿಚಂದ್ರನ್, ಬಹುದಿನಗಳ ಬಳಿಕ ದೊಡ್ಡ ಮಗನನ್ನು ಭೇಟಿ ಮಾಡಿದ ಖುಷಿಯಿದೆ ಎಂದಿದ್ದಾರೆ. ಆದರೆ ಅಭಿಮಾನಿಗಳು ಮಾತ್ರ ಈ ಇಬ್ಬರು ಸ್ಟಾರ್ ಗಳಿಂದ ಸಿಹಿಸುದ್ದಿ ನೀರಿಕ್ಷೆಯಲ್ಲಿದ್ದಾರೆ.
sandalwood actoc ravichandar meet sudeep in his house