Student Shootout : ತಲೆಗೆ ಗುಂಡು ಹಾರಿಸಿಕೊಂಡು ವಿದ್ಯಾರ್ಥಿ ಆತ್ಮಹತ್ಯೆ

ಬೆಂಗಳೂರು : ತಲೆಗೆ ಗುಂಡು ಹಾರಿಸಿಕೊಂಡು ದ್ವಿತೀಯ ಪಿಯುಸಿ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಸಂಜಯನಗರದ ನಂದಿನಿ ಹಾಲಿನ ಬೂತ್‌ ಬಳಿಯಲ್ಲಿ ನಡೆದಿದೆ.

ಉತ್ತರಾಖಂಡ್‌ ಮೂಲದ ನಿವೃತ್ತ ಸೇನಾಧಿಕಾರಿ ಭಗತ್‌ ಸಿಂಗ್‌ ಹಾಗೂ ಬಾಬ್ನಾ ದಂಪತಿಗಳ ಮಗ ರಾಹುಲ್‌ ಭಂಡಾರಿ ( 17 ವರ್ಷ) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ. ಬೆಂಗಳೂರಿನ ಆರ್ಮಿ ಸ್ಕೂಲ್‌ ನಲ್ಲಿ ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ರಾಹುಲ್‌ ನಿತ್ಯವೂ ಬೆಳಗ್ಗೆ 3 ಗಂಟೆಗೆ ಎದ್ದು ಓದಿಕೊಳ್ಳುತ್ತಿದ್ದ. ಮಾನಸಿಕ ಒತ್ತಡ ಹೆಚ್ಚಾದಾಗ ವಾಕಿಂಗ್‌ಹೆ ಬರುತ್ತಿದ್ದ ಎನ್ನಲಾಗುತ್ತಿದೆ.

ಇಂದು ಮುಂಜಾನೇ ಬೇಗನೇ ಎದ್ದು ವಾಕಿಂಗ್‌ಗೆ ಬಂದಿದ್ದಾನೆ. ಆದರೆ ಮನೆಯಲ್ಲಿದ್ದ ಬಂದೂಕನ್ನು ಜೊತೆಯಲ್ಲಿಯೇ ತಂದು ತಲೆಯ ಎಡಭಾಗಕ್ಕೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಳಗಾದ್ರೂ ಮಗನ ಮನೆಗೆ ಬಾರದ ಹಿನ್ನೆಲೆಯಲ್ಲಿ ಕರೆ ಮಾಡಿದ್ದಾರೆ. ಆದರೆ ರಾಹುಲ್‌ ಮೊಬೈಲ್‌ ಕರೆಯನ್ನು ಸ್ವೀಕರಿಸಿಲ್ಲ. ಇದರಿಂದ ಭಯಗೊಂಡ ಪೋಷಕರು ಪೊಲೀಸರಿಗೆ ಕರೆ ಮಾಡಿದ್ದಾರೆ. ಈ ವೇಳೆಯಲ್ಲಿ ಆತಮ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 90ಕ್ಕಿಂತಲೂ ಅಧಿಕ ಅಂಕವನ್ನು ಪಡೆದುಕೊಂಡಿದ್ದ, ಹೀಗಾಗಿ ಮನೆಯಿಂದ ವಿದ್ಯಾಭ್ಯಾಸದ ಕುರಿತು ಯಾವುದೇ ಒತ್ತಡ ಇರಲಿಲ್ಲ ಎನ್ನಲಾಗುತ್ತಿದೆ. ಇದೀಗ ಸ್ಥಳಕ್ಕೆ ಡಿಸಿಪಿ ಅನುಚೇತ್‌ ಭೇಟಿ ನೀಡಿದ್ದು, ಪರಿಶೀಲನೆಯನ್ನು ನಡೆಸುತ್ತಿದ್ದಾರೆ. ಈ ಕುರಿತು ಸಂಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ರಾಹುಲ್‌ ಪೋಷಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಇದನ್ನೂ ಓದಿ : ಡ್ರಗ್ಸ್‌ ಫ್ಯಾಕ್ಟರಿ ಆಯ್ತಾ ಬೆಂಗಳೂರು : ಮನೆಯಲ್ಲಿಯೇ ಸಿದ್ದವಾಗ್ತಿತ್ತು ಡ್ರಗ್ಸ್‌, ಸಿಸಿಬಿಯಿಂದ ಮೆಗಾ ರೈಡ್‌

ಇದನ್ನೂ ಓದಿ : ಅಂಬ್ಯುಲೆನ್ಸ್‌- ಲಾರಿ ನಡುವೆ ಭೀಕರ ಅಫಘಾತ : 3 ಸಾವು, 4 ಮಂದಿ ಗಂಭೀರ

ಇದನ್ನೂ ಓದಿ : ವಿದ್ಯಾರ್ಥಿ, ಪೋಷಕರಿಗೆ ಗುಡ್‌ನ್ಯೂಸ್‌ ಕೊಟ್ಟ ಹೈಕೋರ್ಟ್‌

( Student commits suicide by shooting himself in the head )

Comments are closed.