ಬಿಗ್ ಬಾಸ್ ಮನೆಯೆಂಬ ಮಹಾಸಾಗರದಿಂದ ಮೂರೇ ಮೂರು ದಿನಕ್ಕೆ ವಾಪಸ್ಸಾಗಿದ್ದ ನಟಿ ಹಾಗೂ ಮಾಡೆಲ್ ವೈಜಯಂತಿ ಅಡಿಗ್ ವೈವಾಹಿಕ ಬದುಕಿಗೆ ಕಾಲಿಡಲು ಸಿದ್ಧವಾಗಿ ದ್ದಾರೆ. ವಿಭಿನ್ನವಾಗಿ ವರ್ಚುವಲ್ ಎಂಗೇಜಮೆಂಟ್ ಮಾಡಿಕೊಂಡಿರೋ ವೈಜಯಂತಿ ಪೋಟೋಸ್ ಹಂಚಿಕೊಂಡಿದ್ದಾರೆ.

ಅಮ್ಮಚ್ಚಿ ಎಂಬ ನೆನಪು ಸಿನಿಮಾದ ಮೂಲಕ ನಟನೆಗೆ ಕಾಲಿಟ್ಟ ವೈಜಯಂತಿ ವಿಶ್ವದಾದ್ಯಂತ ಹೆಸರು ಗಳಿಸಿರುವ ಅಡಿಗಾಸ್ ಹೊಟೇಲ್ ಮಾಲೀಕರ ಕೂಸು. ಸ್ವತಃ ಹೊಟೇಲ್ ಉದ್ಯಮಿಯಾಗಿಯೂ ಗುರುತಿಸಿಕೊಂಡಿರೋ ವೈಜಯಂತಿ ಸೂರಜ್ ಸಂಜಯ್ ಎಂಬುವವರ ಜೊತೆ ಹಸೆಮಣೆ ಏರಲು ಸಿದ್ಧವಾಗಿದ್ದಾರೆ.

ಸೂರಜ್ ಸಂಜಯ್ ವಿದೇಶದಲ್ಲಿರೋದರಿಂದ ಸದ್ಯ ವರ್ಚುವಲ್ ನಿಶ್ಚಿತಾರ್ಥದ ಕಾರ್ಯಕ್ರಮಗಳು ನಡೆದಿದ್ದು, ಕುಟುಂಬಸ್ಥರ ಸಮ್ಮುಖದಲ್ಲಿ ನಡೆದ ನಿಶ್ಚಿತಾರ್ಥ ಹಾಗೂ ಲಗ್ನ ಪತ್ರಿಕೆ ಬರೆಸುವ ಶಾಸ್ತ್ರದ ಪೋಟೋ ವಿಡಿಯೋಗಳನ್ನು ವೈಜಯಂತಿ ಅಡಿಗ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಬಿಗ್ ಬಾಸ್ ಸೀಸನ್ 8 ಮೊದಲ ಶೋದ ವೇಳೆ ನಟಿ ಪ್ರಿಯಾಂಕಾ ತಿಮ್ಮೇಶ್ ಹಾಗೂ ನಟಿ ವೈಜಯಂತಿ ಅಡಿಗ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಬಾಸ್ ಮನೆಗೆ ಬಂದಿದ್ದರು. ಈ ವೇಳೆ ಮನೆಯವರ ನೆನಪಾಗುತ್ತಿದೆ. ಶೋದಲ್ಲಿ ಇರಲು ಸಾಧ್ಯವೇ ಇಲ್ಲ ಎಂದ ವೈಜಯಂತಿ ಕೇವಲ ಮೂರೇ ದಿನಕ್ಕೆ ಶೋದಿಂದ ಹೊರಬಂದಿದ್ದರು.
ಇದನ್ನೂ ಓದಿ : ಸಾಕ್ಷಿ ಅವಾರ್ಡ್ ಫಂಕ್ಷನ್ ನಲ್ಲಿ ಮಿಂಚಿದ ಪೂಜಾ ಹೆಗ್ಡೆ: ಸೋಷಿಯಲ್ ಮೀಡಿಯಾದಲ್ಲಿ ಪೋಟೋ ವೈರಲ್
ಇದನ್ನೂ ಓದಿ : ಬಿಗ್ ಬಾಸ್ ಒಟಿಟಿ ದಿವ್ಯಾ ಅಗರವಾಲ್ ಗೆ ವಿನ್ನರ್ ಪಟ್ಟ: ಸೆಕೆಂಡ್ ರನ್ನರ್ ಸ್ಥಾನಪಡೆದ ಶಮಿತಾ ಶೆಟ್ಟಿ
( sandalwood actress vyjayanthi adiga gets engaged )