ಕೊರೋನಾ ಎರಡನೇ ಅಲೆಯ ಸಂಕಷ್ಟ ಹಾಗೂ ಮೂರನೇ ಅಲೆಯ ಭೀತಿ ಚಿತ್ರರಂಗ ಖುಷಿ ಕಿತ್ತುಕೊಂಡಿದೆ. ಶ್ರಾವಣ ಮಾಸದ ಹಬ್ಬಗಳ ಸಂಭ್ರಮದ ಖುಷಿ ಹೆಚ್ಚಿಸ ಬೇಕಿದ್ದ ಸಿನಿಮಾಗಳು ರಿಲೀಸ್ ನಿಂದ ದೂರ ಸರಿದಿದ್ದು, ಸಲಗದ ಬಳಿಕ ನಿನ್ನ ಸನಿಹಕೆ ಕೂಡ ತೆರೆಗೆ ಬರ್ತಿಲ್ಲ.

ಡಾ. ರಾಜ್ ಕುಮಾರ್ ಮೊಮ್ಮಗಳು ಹಾಗೂ ನಟ ರಾಮ್ ಕುಮಾರ್ ಪುತ್ರಿ ಧನ್ಯ ರಾಮ್ ಕುಮಾರ್ ಸಿನಿ ಜರ್ನಿಗೆ ಕೊರೋನಾ ಅಡ್ಡಗಾಲಾಗಿದೆ. ಧನ್ಯಾ ನಟನೆಯ ಬಹುನೀರಿಕ್ಷಿತ ಚಿತ್ರ ನಿನ್ನ ಸನಿಹಕೆ ಅಗಸ್ಟ್ 20 ರಂದು ತೆರೆಗೆ ಬರಲು ಸಿದ್ಧವಾಗಿತ್ತು. ಆದರೆ ಕೊರೋನಾ ಎರಡನೆ ಅಲೆ, ನೈಟ್ ಕರ್ಪ್ಯೂ ಕಾರಣಕ್ಕಿ ಸಿನಿಮಾ ರಿಲೀಸ್ ಮುಂದೂಡಲಾಗಿದೆ.

ಈ ಬಗ್ಗೆ ವಿವರಣೆ ನೀಡಿರುವ ಚಿತ್ರತಂಡ, ನಿನ್ನ ಸನಿಹಕೆ ಟ್ರೇಲರ್ ಹಾಗೂ ಹಾಡುಗಳಿಗೆ ನೀವು ಅಭೂತಪೂರ್ವ ಬೆಂಬಲ ನೀಡಿದ್ದಿರಿ. ನಿಮ್ಮ ಪ್ರೀತಿ,ವಿಶ್ವಾಸಕ್ಕೆ ನಾವು ಋಣಿ. ಆದರೆ ಕೊರೋನಾ ಅಸಹಜ ಸ್ಥಿತಿ, ಥಿಯೇಟರ್ ಗಳಲ್ಲಿ ಅರ್ಧದಷ್ಟು ಪ್ರೇಕ್ಷಕರಿಗೆ ಅವಕಾಶ, ನೈಟ್ ಕರ್ಪ್ಯೂ ಹಾಗೂ ವಿಕೆಂಡ್ ಕರ್ಪ್ಯೂಗಳ ಕಾರಣಕ್ಕೆ ಸಿನಿಮಾ ತೆರೆಗೆ ಬರಲು ವಿಳಂಬವಾಗುತ್ತಿದೆ ಎಂದಿದೆ.

ನಿಮ್ಮೆಲ್ಲರ ಸುರಕ್ಷತೆಯೇ ನಮ್ಮ ಆದ್ಯತೆ. ಹೀಗಾಗಿ ನಾವು ಮುಂದಿನ ರಿಲೀಸ್ ದಿನಾಂಕದೊಂದಿಗೆ ನಿಮ್ಮ ಮುಂದೇ ಬರುತ್ತೇವೆ. ಅಲ್ಲಿಯವರೆಗೂ ನಮ್ಮನ್ನು ಪ್ರೋತ್ಸಾಹಿಸಿ ಎಂದು ಚಿತ್ರತಂಡ ಮನವಿ ಮಾಡಿದೆ.

ಧನ್ಯಾ ರಾಮ್ ಕುಮಾರ್ ಹಾಗೂ ಸೂರಜ್ ಗೌಡ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾ ಧನ್ಯಾ ಮೊದಲ ಸಿನಿಮಾವಾಗಿದ್ದು, ಸಾಕಷ್ಟು ನೀರಿಕ್ಷೆ ಮೂಡಿಸಿದೆ. ಅಲ್ಲದೇ ಡಾ.ರಾಜ್ ಮನೆತನದಿಂದ ನಟನೆಗಿಳಿದ ಮೊದಲ ಹೆಣ್ಣುಮಗಳು ಧನ್ಯಾ ಎಂದು ಸೋದರ ಮಾವಂದಿರು ಶುಭಹಾರೈಸಿದ್ದರು.