Couple Suicide : ಮಂಗಳೂರು ದಂಪತಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌

ಮಂಗಳೂರು : ಕೊರೊನಾ ವೈರಸ್‌ ಸೋಂಕಿಗೆ ಹೆದರಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ ಸಿಕ್ಕಿದೆ. ಮೃತದೇಹದ ಕೊರೊನಾ ತಪಾಸಣಾ ವರದಿಯಲ್ಲಿ ನೆಗೆಟಿವ್‌ ಬಂದಿದ್ದು, ಪೊಲೀಸರು ಎಲ್ಲಾ ಆಯಾಮದಲ್ಲಿಯೂ ತನಿಖೆ ಆರಂಭಿಸಿದ್ದಾರೆ.

ಮಂಗಳೂರು ಹೊರವಲಯದ ಸುರತ್ಕಲ್‌ನ ರಹೇಜಾ ಅಪಾರ್ಟ್‌ಮೆಂಟ್‌ನಲ್ಲಿ ರಮೇಶ್‌ ಹಾಗೂ ಗುಣಾ ದಂಪತಿಗಳ ಆತ್ಮಹತ್ಯೆ ಪ್ರಕರಣ ಆತಂಕವನ್ನು ಮೂಡಿಸಿತ್ತು. ಡೆತ್‌ನೋಟ್‌ ನಲ್ಲಿ ಕೊರೊನಾ ಹಾಗೂ ಬ್ಲ್ಯಾಕ್‌ ಫಂಗಸ್‌ಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿಟ್ಟಿದ್ದರು. ಇದರ ಬೆನ್ನಲ್ಲೇ ಇದೀಗ ಮೃತದೇಹದ ಪರೀಕ್ಷೆಯನ್ನು ನಡೆಸಲಾಗಿದ್ದು, ಕೊರೊನಾ ನೆಗೆಟಿವ್‌ ವರದಿ ಬಂದಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಪಡುಬಿದ್ರಿ ಮೂಲದ ರಮೇಶ್‌ ಸುವರ್ಣ ಹಾಗೂ ಗುಣಾ ಆರ್.‌ ಸುವರ್ಣ ದಂಪತಿ ಮನೆಯವರಿಗೆ ಕೊರೊನಾ ಸೋಂಕು ಬಂದ ಭೀತಿಯ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿ ರುವ ಸಾಧ್ಯತೆಯಿದೆ. ಮಗು ಇಲ್ಲ ಅನ್ನೋ ಕಾರಣಕ್ಕೆ ಮಾನಸಿಕ ಖಿನ್ನತೆಗೆ ಒಳಗಾಗಿ, ಕೊರೊನಾ ಹಾಗೂ ಬ್ಲ್ಯಾಕ್‌ ಫಂಗಸ್‌ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಸ್ಥಳಕ್ಕೆ ಸುರತ್ಕಲ್‌ ಠಾಣೆಯ ಪೊಲೀಸರು ಭೇಟಿಯನ್ನು ನೀಡಿ ಪರಿಶೀಲನೆಯನ್ನು ನಡೆಸುತ್ತಿದ್ದಾರೆ. ಪ್ಲ್ಯಾಟ್‌ನ ಹಾಲ್‌ನಲ್ಲಿ ದಂಪತಿ ಪ್ರತ್ಯೇಕವಾಗಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾಲ್‌ನಲ್ಲಿ ಟಿವಿ ಆನ್‌ ಆಗಿದ್ದು, ಎದುರಿಗೆ ಇರುವ ಟೇಬಲ್‌ ಮೇಲೆಯೇ ಹಣ ಹಾಗೂ ಡೆತ್‌ನೋಟ್‌ ಬರೆದಿಡಲಾಗಿದೆ.

ರಮೇಶ್‌ ಹಾಗೂ ಗುಣಾ ದಂಪತಿ ಸಾವಿನ ಕುರಿತು ಪೊಲೀಸರು ಅಪಾರ್ಟ್‌ಮೆಂಟ್‌ ನಿವಾಸಿಗಳಿಂದ ಹಾಗೂ ಸಂಬಂಧಿಕರಿಂದಲೂ ಮಾಹಿತಿಯನ್ನು ಪಡೆಯುತ್ತಿದ್ದಾರೆ. ಕೊರೊನಾ ಭಯ ಮಾತ್ರವಲ್ಲದೇ ಬೇರೆಯ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಅನ್ನೋ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ : Corona Sucide : ಕೊರೊನಾದಿಂದ ಹದಗೆಟ್ಟ ದೇಹ ಸ್ಥಿತಿ : ಭಯದಿಂದ ಮಂಗಳೂರಲ್ಲಿ ದಂಪತಿ ಆತ್ಮಹತ್ಯೆ

ಇದನ್ನೂ ಓದಿ : ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಶಿಕ್ಷಕನಿಂದ ಅತ್ಯಾಚಾರ : ಖಾಸಗಿಯಾಗಿ ಟ್ಯೂಷನ್‌ ತೆಗೆದುಕೊಳ್ಳೋ ಮುನ್ನ ಹುಷಾರ್‌

Comments are closed.