Puneeth Raj Kumar ನಿಧನದ ಐದೇ ದಿನಕ್ಕೆ ಅಪ್ಪು ಪುತ್ರಿ ಧೃತಿ ವಿದೇಶಕ್ಕೆ : ದಿಟ್ಟ ನಿರ್ಧಾರದ ಹಿಂದಿದೆ ಭಾವನಾತ್ಮಕ ವಿಚಾರ

ದೊಡ್ಡನೆಯ ರಾಜಕುಮಾರ್ ಪುನೀತ್ ಇನ್ನಿಲ್ಲವಾಗಿ ವಾರ ಸಮೀಪಿಸುತ್ತಿದೆ. ಆದರೂ ಕುಟುಂಬದವರ, ಅಭಿಮಾನಿಗಳ ದುಃಖ ಮಾಸಿಲ್ಲ. ಹೀಗಿರುವಾಗಲೇ ಪುನೀತ್ ಪುತ್ರಿ ಧೃತಿ ದಿಟ್ಟ ನಿರ್ಧಾರ ಕೈಗೊಂಡಿದ್ದು ವಿದೇಶಕ್ಕೆ ವಾಪಸ್ಸಾಗಿದ್ದಾರೆ.

The statue of Puneeth Raj Kumar will be built in the Bangalore City

ಪುನೀತ್ ರಾಜ್ ಕುಮಾರ್ ಗೆ ಇಬ್ಬರು ಹೆಣ್ಣು ಮಕ್ಕಳು. ವಂದಿತಾ ಹಾಗೂ ಧೃತಿ. ಧೃತಿ ಹಿರಿಯ ಮಗಳು ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ತಂದೆಯ ಅಕಾಲಿಕ ನಿಧನದ ವೇಳೆ ಧೃತಿ ಧೈರ್ಯವಾಗಿ 20 ಗಂಟೆಗಳ ಕಾಲ ಪ್ರಯಾಣ ಮಾಡಿ ತಂದೆಯ ಅಂತಿಮ ದರ್ಶನಕ್ಕೆ ಆಗಮಿಸಿದ್ದರು. ಅಲ್ಲದೇ ನೋವಿನಲ್ಲಿದ್ದ ತಾಯಿ ಹಾಗೂ ತಂಗಿಗೆ ಸಾಂತ್ವನ ಹೇಳಿದ್ದರು. ತಮ್ಮ ನೋವಿನಲ್ಲೂ ತಾಯಿಯನ್ನು ಸಂತೈಸುವ ಕೆಲಸ ಮಾಡಿದ್ದರು. ಆದರೆ ಈಗ ತಂದೆಯ ನಿಧನದ ಐದು ದಿನಗಳಲ್ಲೇ ವಿದೇಶಕ್ಕೆ ವಾಪಸ್ಸಾಗಿದ್ದಾರೆ.

ಈ ವಿಚಾರವನ್ನು ಸ್ವತಃ ಶಿವರಾಜ್ ಕುಮಾರ್ ಮಾಧ್ಯಮಗಳಿಗೆ ಖಚಿತ ಪಡಿಸಿದ್ದಾರೆ. ಧೃತಿ ನ್ಯೂಯಾರ್ಕ್‌ ನಲ್ಲಿ ಓದುತ್ತಿದ್ದಾರೆ. ತಂದೆ ನಿಧನದ ಹಿನ್ನೆಲೆಯಲ್ಲಿ ಆಗಮಿಸಿದ್ದರು. ಆದರೆ ಈಗ ಅವರು ಮತ್ತೆ ವಿದೇಶಕ್ಕೆ ಮರಳಿದ್ದಾರೆ ಎಂದು ಶಿವರಾಜ್ ಕುಮಾರ್ ಮಾಹಿತಿ ನೀಡಿದ್ದಾರೆ. ಧೃತಿ ದೊಡ್ಮನೆ ಮೊಮ್ಮಗಳಾಗಿದ್ದರೂ ಶ್ರೀಮಂತಿಕೆಯ ಹಂಗಿಲ್ಲದೇ ಬೆಳೆದವರು.

ಅಷ್ಟೇ ಅಲ್ಲ ಧೃತಿ ಸ್ಕಾಲರ್ ಶಿಪ್ ನಲ್ಲಿ ಓದುತ್ತಿದ್ದಾರೆ. ತಂದೆಯ ಅಕಾಲಿಕ ನಿಧನ, ಪ್ರೀತಿಯ ತಂದೆ ಇಲ್ಲ ಎಂಬ ಭಾವನೆ ಧೃತಿಯನ್ನು ಕಂಗೆಡಿಸಿದೆಯಂತೆ. ಮನೆಯಲ್ಲಿ ಎಲ್ಲಿ ನೋಡಿದರೂ ತಂದೆಯ ನೆನಪೇ ಕಾಡುತ್ತಿದೆಯಂತೆ. ಹೀಗಾಗಿ ಧೃತಿ ವಿದೇಶಕ್ಕೆ ತೆರಳುವ ದಿಟ್ಟ ನಿರ್ಧಾರ ಮಾಡಿದ್ದಾರಂತೆ. ಮತ್ತೆ ಕಾಲೇಜಿಗೆ ಮರಳಿದರೇ ಸ್ನೇಹಿತರು, ಓದಿನ ನಡುವೆ ತಂದೆಯ ಅಗಲಿಕೆ ನೋವನ್ನು ಸ್ವಲ್ಪ ಮರೆಯಬಹುದು ಎಂಬುದು ಧೃತಿ ತಾಯಿ ಹಾಗೂ ಕುಟುಂಬಸ್ಥರ ಅಭಿಮತ.

ಇದೇ ಕಾರಣಕ್ಕಾಗಿ ಕುಟುಂಬಸ್ಥರು ಧೃತಿಯನ್ನು ಮನವೊಲಿಸಿ ಮರಳಿ ಕಳುಹಿಸಿದ್ದಾರಂತೆ. ಸದಾ ತಂದೆಯ ಪ್ರೀತಿ, ಭಾವನಾತ್ಮಕ ಬೆಸುಗೆಯ ವಿದಾಯದೊಂದಿಗೆ ವಿದೇಶಕ್ಕೆ ತೆರಳುತ್ತಿದ್ದ ಧೃತಿ ಇದೇ ಮೊದಲ‌ ಬಾರಿಗೆ ತಂದೆಯ ನೆನಪುಗಳನ್ನು ಹೊತ್ತು ಭಾರವಾದ ಮನಸ್ಸಿನೊಂದಿಗೆ ತಮ್ಮ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳಿದ್ದಾರಂತೆ. ಪುನೀತ್ ಸಾವಿಗೂ ಎರಡು ದಿನ ಮೊದಲು ಧೃತಿ ತಂದೆಯೊಂದಿಗೆ ಮಾತನಾಡಿದ್ದು, ತಮ್ಮನ್ನು ಅಪಾರವಾಗಿ ಪ್ರೀತಿಸುವ ತಂದೆಯನ್ನು ಕಳೆದುಕೊಂಡು ಧೃತಿ ನಿಜಕ್ಕೂ ಧೃತಿ ಗೆಟ್ಟಿದ್ದಾರೆ.

ಇದನ್ನೂ ಓದಿ : ಪುನೀತ್‌ ರಾಜ್‌ ಕುಮಾರ್‌ ಪ್ರೇರಣೆ : ನೇತ್ರದಾನಕ್ಕೆ ಒಂದೇ ದಿನ 1000 ಕ್ಕೂ ಅಧಿಕ ಮಂದಿ ನೋಂದಣಿ

ಇದನ್ನೂ ಓದಿ : ಅಪ್ಪಾಜಿ ಜೊತೆ ಅಪ್ಪು: ಕಲಾವಿದನ ಕೈಚಳಕಕ್ಕೆ ಮನಸೋತ ಫ್ಯಾನ್ಸ್ !

Comments are closed.