ಅಪ್ಪುಗೆ ಪದ್ಮಶ್ರೀ ಅಭಿಯಾನ : ಸಹೋದರ ಶಿವಣ್ಣ ಹೇಳಿದ್ದೇನು ಗೊತ್ತಾ?

ನಟ ಪುನೀತ್ ರಾಜ್ ಕುಮಾರ್ ನಿಧನರಾಗಿ ಇಂದಿಗೆ 11 ದಿನ ಕಳೆದಿದೆ. ಈ ಮಧ್ಯೆ ಪುನೀತ್ ಸಾಮಾಜಿಕ ಹಾಗೂ ಕಲಾ ಸೇವೆ ಪರಿಗಣಿಸಿ ಮರಣೋತ್ತರ ಪದ್ಮಶ್ರೀ ಪ್ರಶಸ್ತಿ ನೀಡಬೇಕೆಂಬ ಆಗ್ರಹ ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತವಾಗಿದೆ. ಹಲವಾರು ಸೆಲೆಬ್ರೆಟಿಗಳು ಹಾಗೂ ಅಪ್ಪು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಪದ್ಮಶ್ರೀ ಫಾರ್ ಪುನೀತ್ ಎಂಬ ಅಭಿಯಾನ ನಡೆಸಿದ್ದಾರೆ.

The statue of Puneeth Raj Kumar will be built in the Bangalore City

ಈ ಕುರಿತು ನಟ ಹಾಗೂ ಪುನೀತ್ ಸಹೋದರ ಶಿವರಾಜ್ ಕುಮಾರ್ ಬಳಿ ಮಾಧ್ಯಮಗಳು ಪ್ರಶ್ನೆ ಕೇಳಿದಾಗ ಶಿವಣ್ಣ ಭಾವುಕರಾಗಿದ್ದು, ಪುನೀತ್ ನಮ್ಮ ಹಾಗೂ ಅಭಿಮಾನಿಗಳ ಪಾಲಿಗೆ ಅಮರಶ್ರೀ. ಪದ್ಮಶ್ರೀ ಪ್ರಶಸ್ತಿ ಮೀರಿ ಅವರು ನಮ್ಮ ನಡುವೆ ಅಮರವಾಗಿದ್ದಾರೆ ಎಂದಿದ್ದಾರೆ.

ಈ ಕ್ಷಣ ಕ್ಕೂ ಅವನ ಸಾವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನನಗೆ ತಮ್ಮನಿಗಿಂತ ಹೆಚ್ಚು ಮಗನನ್ನು ಕಳೆದುಕೊಂಡಿದ್ದೇನೆ ಎನ್ನಿಸುತ್ತಿದೆ. ನಾನು ಎತ್ತಿ ಆಡಿಸಿದ ಮಗ. ನನ್ನ ಮುಂದೇ ಇನ್ನಿಲ್ಲ ಎಂಬುದನ್ನು ಒಪ್ಪಿಕೊಳ್ಳಲಾಗುತ್ತಿಲ್ಲ.

ಕಾರ್ಯಗಳನ್ನು ಮಾಡುವಾಗಲೂ ಇದನ್ನೆಲ್ಲ ಮಾಡಬೇಕಾ ಎನ್ನಿಸುತ್ತಿತ್ತು.‌ಆದರೂ ಶಾಸ್ತ್ರ ಎಂಬ ಕಾರಣಕ್ಕಾಗಿ ಮಾಡಬೇಕಾಯಿತು. ಪದ್ಮ ಶ್ರಿ ಪ್ರಶಸ್ತಿ ಬಂದರೂ ಬರದಿದ್ದರೂ ಪುನೀತ್ ನಮ್ಮ ಹಾಗೂ ಅಭಿಮಾನಿಗಳ ಹೃದಯದಲ್ಲಿ ಅವನು ಸದಾ ಅಮರಶ್ರೀ ಎಂದಿದ್ದಾರೆ.

ಅಲ್ಲದೇ ಯಾವ ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಳ್ಳಬೇಡಿ. ಪುನೀತ್ ಮಾತುಗಳನ್ನು ನೆನಪಿಸಿಕೊಂಡು ಬೇರೆಯವರಿಗೆ ಸಹಾಯ ಮಾಡುತ್ತ ಬದುಕಿ. ನೀವು ಸಾಯೋದರಿಂದ ನಿಮ್ಮ ಕುಟುಂಬ ಸಂಕಷ್ಟಕ್ಕೊಳಗಾಗುತ್ತದೆ ಎಂಬುದು ನಿಮ್ಮ ನೆನಪಿನಲ್ಲಿರಲಿ. ನಾವು ಈಗಾಗಲೇ ನೋವಿನಲ್ಲಿದ್ದೇವೆ. ನೀವು ಆತ್ಮಹತ್ಯೆ ಮಾಡಿಕೊಂಡು ಮತ್ತಷ್ಟು ನೋವು ಕೊಡಬೇಡಿ ಎಂದು ಶಿವಣ್ಣ ಮನವಿ ಮಾಡಿದ್ದಾರೆ. ಸದಾಶಿವ ನಗರದ ಪುನೀತ್ ನಿವಾಸದಲ್ಲಿ ನಡೆದ ತಿಥಿ ಕಾರ್ಯದ ವೇಳೆಯೂ ಶಿವಣ್ಣ ಭಾವುಕರಾಗಿದ್ದು ನಟ ದರ್ಶನ್ ಸೇರಿದಂತೆ ಹಲವರು ಶಿವಣ್ಣರನ್ನು ಸಮಾಧಾನ ಪಡಿಸಿದ್ದಾರೆ .

ಇದನ್ನೂ ಓದಿ : ಸೋಷಿಯಲ್ ಮೀಡಿಯಾದಲ್ಲಿ ಮೌನಿರಾಯ್ ಹವಾ: ಕೆಜಿಎಫ್ ಬೆಡಗಿ ಟ್ರೆಡಿಶನಲ್ ಲುಕ್ ವೈರಲ್

ಇದನ್ನೂ ಓದಿ : ತಂದೆಯ ಆಸೆ ನೆರವೇರಿಸಿದ ವಂದಿತಾ: ದುಃಖದ ನಡುವೆಯೂ ಪರೀಕ್ಷೆಗೆ ಹಾಜರ್

(Puneeth Raj Kumar Padmashri Demand shivaraj kumar reaction )

Comments are closed.