ಪುನೀತ್ ರಾಜ್‌ ಕುಮಾರ್ ಸಾವಿನ ಸತ್ಯ ಹುಡುಕಲು ಆಗ್ರಹ: ತನಿಖೆಗೆ ಆಗ್ರಹಿಸಿ ದಾಖಲಾಯ್ತು ದೂರು

ಪುನೀತ್ ರಾಜ್ ಕುಮಾರ್ ಹೃದಯಾಘಾತಕ್ಕೆ ಬಲಿಯಾಗಿ ವಾರ ಕಳೆದರೂ ಅಭಿಮಾನಿಗಳಿಗೆ ಈ ಸತ್ಯವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಮಧ್ಯೆ ಪುನೀತ್ ಸಡನ್ ಸಾವಿನ ಬಗ್ಗೆ ಅಭಿಮಾನಿಗಳು ತನಿಖೆಗೆ ಒತ್ತಾಯಿಸಿದ್ದಾರೆ. ಸದಾಶಿವ ನಗರ ಪೊಲೀಸ್ ಠಾಣೆಗೆ ದೂರ ನೀಡಿರುವ ಡಾ.ರಾಜ್ ಕುಮಾರ್ ಸೇನೆ ಹಾಗೂ ಅಪ್ಪು ಅಭಿಮಾನಿಗಳು ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಒತ್ತಾಯಿಸಿದ್ದಾರೆ.

Dhruti, daughter of Puneet Raj Kumar, who received her father's final appearance

ಅನಾರೋಗ್ಯದ ವೇಳೆ ಪುನೀತ್ ರಾಜ್ ಕುಮಾರ್ ನಡೆದುಕೊಂಡು ಡಾ.ರಮಣಶ್ರೀ ಕ್ಲಿನಿಕ್ ಗೆ ನಡೆದುಕೊಂಡೇ ಹೋಗಿದ್ದಾರೆ. ಆದರೆ ಅಲ್ಲಿ ಅವರು ಸಾವನ್ನಪ್ಪುವಂತ ಘಟನೆ ನಡೆದಿದೆ. ಅದರೆ ಅಲ್ಲಿ ಏನು ನಡೆಯಿತು ಎಂಬುದು ಬಹಿರಂಗವಾಗಿಲ್ಲ. ಹೀಗಾಗಿ ತನಿಖೆ ನಡೆಸಬೇಕೆಂದು ಅಭಿಮಾನಿಗಳು ಒತ್ತಾಯಿಸಿದ್ದಾರೆ‌.

ಪುನೀತ್ ತುರ್ತು ಪರಿಸ್ಥಿತಿಯಲ್ಲಿ ಇದ್ದಾಗಲೂ ಡಾ.ರಮಣರಾವ್ ಚಿಕಿತ್ಸೆ ನೀಡದೆ ವಿಕ್ರಂ ಹಾಸ್ಪಿಟಲ್ ಗೆ ತೆರಳುವಂತೆ ಸೂಚಿಸಿದ್ದಾರೆ. ಹೀಗಾಗಿ ಹೃದಯಾಘಾತವಾದಾಗ ಗೋಲ್ಡನ್ ಟೈಂ ನಲ್ಲಿ ಸಿಗಬೇಕಿದ್ದ ಚಿಕಿತ್ಸೆ ಸಿಕ್ಕಿಲ್ಲ. ಹೀಗಾಗಿ ನಿರ್ಲಕ್ಷ್ಯ ತೋರಿದ ಡಾ‌‌.ರಮಣರಾವ್ ವಿರುದ್ಧ ಕ್ರಮಕೈಗೊಳ್ಳಬೇಕೆಂಬ ಆಗ್ರಹ ಜನರಿಂದ ವ್ಯಕ್ತವಾಗಿದೆ.

ತನಿಖೆಗೆ ಆಗ್ರಹಿಸಿರುವ ಅಭಿಮಾನಿಗಳು ಪ್ರೊಟೆಸ್ಟ್ ನಡೆಸಿದ್ದಾರೆ. ಆದರೆ ಅಭಿಮಾನಿಗಳ ಈ ಆರೋಪ ಹಾಗೂ ಪ್ರತಿಭಟನೆಗೆ ಪ್ರತಿಕ್ರಿಯಿಸಿರುವ ಡಾ.ಶಿವರಾಜ್ ಕುಮಾರ್ ನನ್ನ ತಮ್ಮನೇ ಉಳಿದಿಲ್ಲ ಎಂದ ಮೇಲೆ ಹೋರಾಟ ,ದೂರು,ತನಿಖೆಯಿಂದ ಏನು ಪ್ರಯೋಜನ ಎಂದು ಪ್ರಶ್ನಿಸಿದ್ದಾರೆ. ಸತ್ಯಅವರವರ ಹೃದಯಕ್ಕೆ ಅರ್ಥವಾದರೇ ಸಾಕು ಎಂದಿದ್ದಾರೆ.

ರಮಣಶ್ರೀ ಕ್ಲಿನಿಕ್ ನ ಸಿಸಿಟಿವಿ ವಶಕ್ಕೆ ಪಡೆಯುವಂತೆಯೂ ರಾಜ್ ಕುಮಾರ್ ಸೇನೆಯ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಒಟ್ಟಿನಲ್ಲಿ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಆಕ್ರೋಶ ವೈದ್ಯರ ವಿರುದ್ಧ ತಿರುಗಿದ್ದು ಪೊಲೀಸರು ದೂರಿನ ವಿಚಾರಣೆ ನಡೆಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

(Puneet Rajkumar s death demanded to find out the truth, fir registered in Sadashiva Nagar Police Station)

Comments are closed.