ಸಿನಿಮಾ ರಂಗಕ್ಕೆ ಮರಳೋ ನೀರಿಕ್ಷೆ ಮೂಡಿಸಿದ್ದ ಸ್ಯಾಂಡಲ್ ವುಡ್ ಕ್ವೀನ್ ರಮ್ಯ (Sandalwood Queen Ramya) ಬಣ್ಣ ಹಚ್ಚದೇ ಇದ್ದರೂ ಬಣ್ಣದ ಲೋಕವನ್ನು ಪ್ರೋತ್ಸಾಹಿಸೋಕೆ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಅವರ ನಿರ್ಮಾಣದ ಚೊಚ್ಚಲ ಸಿನಿಮಾ ಸ್ವಾತಿ ಮುತ್ತಿನ ಮಳೆಹನಿಯೇ (swathi mutthina male haniye ) ರಿಲೀಸ್ ಡೇಟ್ ಫಿಕ್ಸ್ ಆಗಿದ್ದು, ನಟಿ ರಮ್ಯ ಈ ಸಿಹಿಸುದ್ದಿಯೊಂದಿಗೆ ಅಭಿಮಾನಿಗಳಿಗೆ ವಿಜಯದಶಮಿ ಶುಭಾಶಯ ಕೋರಿದ್ದಾರೆ.
ಹಲವು ವರ್ಷಗಳ ಕಾಲ ಸ್ಯಾಂಡಲ್ ವುಡ್ ನ ಅನಭಿಷಿಕ್ತ ರಾಣಿಯಾಗಿ ಮೆರೆದ ನಟಿ ರಮ್ಯ ಸ್ಯಾಂಡಲ್ ವುಡ್ ನಿಂದ ರಾಜಕೀಯಕ್ಕೆ ಎಂಟ್ರಿಕೊಟ್ಟರು. ಆ ಬಳಿಕ ಅಲ್ಲಿಂದಲೂ ನಿವೃತ್ತಿ ಪಡೆದು ಸದ್ಯ ವಿರಾಮದ ಬದುಕನ್ನು ಎಂಜಾಯ್ ಮಾಡ್ತಿದ್ದಾರೆ. ಈಗ ಬಹುತೇಕ ಪ್ರವಾಸದಲ್ಲೇ ದಿನಕಳೆಯೋ ನಟಿ ರಮ್ಯ ವರ್ಷದ ಹಿಂದೆಯೇ ಸಿನಿಮಾ ರಂಗಕ್ಕೆ ಮರಳೋ ಮುನ್ಸೂಚನೆ ಕೊಟ್ಟಿದ್ದರು.

ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದ ಮೂಲಕ ಮತ್ತೆ ಬಣ್ಣ ಹಚ್ಚೋದಾಗಿ ಹೇಳಿದ್ದರು. ಆದರೆ ಊರಿಗೊಬ್ಬಳೇ ಪದ್ಮಾವತಿ ಚಿತ್ರರಂಗಕ್ಕೆ ಬರ್ತಾರೆ ಅನ್ನೋ ಸಂಭ್ರಮ ಬಹುಕಾಲ ಉಳಿಯಲಿಲ್ಲ. ಸಿನಿಮಾದಿಂದ ದೂರ ಉಳಿಯುವ ತಮ್ಮ ನಿರ್ಧಾರವನ್ನು ಮತ್ತಷ್ಟು ಗಟ್ಟಿಗೊಳಿಸಿದ ನಟಿ ರಮ್ಯ, ಕೇವಲ ನಿರ್ಮಾಣ ಮಾಡೋದಾಗಿ ಘೋಷಿಸಿದರು.
ಇದನ್ನೂ ಓದಿ : ನಟ ಯಶ್ ಕಾಲಿಗೆ ಪೊಲೀಯೋ ? ಇಲ್ಲಿದೆ ವೈರಲ್ ವಿಡಿಯೋದ ಅಸಲಿ ಸತ್ಯ
ರಮ್ಯ ಮಾಲಿಕತ್ವದ ಆ್ಯಪಲ್ ಬಾಕ್ಸ್ ಸ್ಟುಡಿಯೋಸ್ ಮೂಲಕ ಚಿತ್ರ ನಿರ್ಮಾಣ ಮಾಡೋದಾಗಿ ನಟಿ ರಮ್ಯ ಘೋಷಿಸಿದರು. ಮೊದಲ ಸಿನಿಮಾವಾಗಿ ಸ್ವಾತಿ ಮುತ್ತಿನ ಮಳೆ ಹನಿಯೇ ಈಗ ರಿಲೀಸ್ ಗೆ ಸಿದ್ಧವಾಗಿದೆ. ನವೆಂಬರ್ 24 ರಂದು ಸಿನಿಮಾ ತೆರೆಗೆ ಬರಲಿದೆ ಎಂದು ನಟಿ ರಮ್ಯ ಸ್ವಾತಿ ಮುತ್ತಿನ ಮಳೆಹನಿಯೇ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಇನ್ ಸ್ಟಾಗ್ರಾಂ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ.

ರಾಜ್ ಬಿ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬರ್ತಿರೋ ಈ ಸಿನಿಮಾ, ಸಿರಿ ರವಿಕುಮಾರ್ ಸ್ಯಾಂಡಲ್ ವುಡ್ ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಸಿನಿಮಾ ರಿಲೀಸ್ ಗೂ ಮುನ್ನವೇ ಸಾಕಷ್ಟು ಚರ್ಚೆಗೆ ಗುರಿಯಾಗಿತ್ತು. ಸಿನಿಮಾದ ಟೈಟಲ್ ವಿವಾದಕ್ಕೆ ಸಿಲುಕಿದ್ದು, ಇದು ನನ್ನ ಟೈಟಲ್. ಇದನ್ನು ಬಳಸಿ ಚಿತ್ರ ನಿರ್ಮಾಣಕ್ಕೆ ಅನುಮತಿ ಹಿರಿಯ ನಿರ್ಮಾಪಕ ರಾಜೇಂದ್ರ ಸಿಂಗ್ ಬಾಬು ಫಿಲ್ಮ್ ಚೆಂಬರ್ ಗೆ ಪತ್ರ ಬರೆದಿದ್ದರು. ಮಾತ್ರವಲ್ಲ ನ್ಯಾಯಾಲಯದಲ್ಲೂ ಮೊಕದ್ದಮೆ ದಾಖಲಿಸಿದ್ದರು.
ಇದನ್ನೂ ಓದಿ : 7 ವರ್ಷಗಳ ಬಳಿಕ ಮಲೆಯಾಳಂನಲ್ಲಿ ಮೇಘನಾ ರಾಜ್ ಸರ್ಜಾ ಸಿನಿಮಾ : ತತ್ಸಮ ತದ್ಬವ ಅ.27 ಕ್ಕೆ ರಿಲೀಸ್
ಇದು ತಾವು ನಿರ್ಮಿಸಿದ ಬಣ್ಣದ ಗೆಜ್ಜೆ ಸಿನಿಮಾದ ಹಾಡೊಂದರ ಸಾಲಾಗಿದ್ದು, ಇದೇ ಟೈಟಲ್ ನಲ್ಲಿ ನಾವೊಂದು ಸಿನಿಮಾ ನಿರ್ಮಿಸಿ ಅದು ಅರ್ಧದಲ್ಲೇ ಸ್ಥಗಿತಗೊಂಡಿದೆ. ಹೀಗಾಗಿ ಈ ಟೈಟಲ್ ನಲ್ಲಿ ಸಿನಿಮಾ ನಿರ್ಮಾಣಕ್ಕೆ ಅವಕಾಶ ನೀಡಬಾರದೆಂದು ಅವರು ನ್ಯಾಯಾಲಯಕ್ಕೂ ಮನವಿ ಮಾಡಿದ್ದರು.

ಬಳಿಕ ನ್ಯಾಯಾಲಯದ ತೀರ್ಪು ಪಡೆದು ನಟಿ ರಮ್ಯ ಸಿನಿಮಾ ಪೂರ್ತಿಗೊಳಿಸಿದ್ದಾರೆ. ಓಟಿಟಿ ಹಾಗೂ ಡಿಜಿಟಲ್ ಫ್ಲ್ಯಾಟ್ ಫಾರಂ ನಲ್ಲಿ ಸಿನಿಮಾ ಮೊದಲು ತೆರೆ ಕಾಣಲಿದೆ ಎನ್ನಲಾಗಿತ್ತು. ಆದರೆ ಈಗ ನವೆಂಬರ್ 24 ರಂದು ಸಿನಿಮಾ ತೆರೆಗೆ ಬರಲಿದೆ. ನಿಮ್ಮ ಹತ್ತಿರದ ಥಿಯೇಟರ್ ಗೆ ಸ್ವಾತಿ ಮುತ್ತಿನ ಮಳೆಹನಿಯೇ ಬರಲಿದೆ . ನೋಡಿ ಎಂದು ನಟಿ ರಮ್ಯ ಪೋಸ್ಟ್ ಬರೆದಿದ್ದಾರೆ.
ಇದನ್ನೂ ಓದಿ : ದಸರಾ ಹಬ್ಬಕ್ಕೆ ಬ್ಲೂ ಸೀರೆಯಲ್ಲಿ ಸ್ಪೆಶಲ್ ಪೋಟೋಶೂಟ್: ಮತ್ತೊಮ್ಮೆ ಮಿಂಚಿದ ರಾಕಿಂಗ್ ನಟ ಯಶ್, ರಾಧಿಕಾ ಪಂಡಿತ್
ಗರುಡ ಗಮನ ವೃಷಭ ವಾಹನ, ಒಂದು ಮೊಟ್ಟೆಯ ಕತೆಯಂತಹ ಸಿನಿಮಾಗಳ ಮೂಲಕ ಗಮನ ಸೆಳೆದ ನಿರ್ದೇಶಕ ಹಾಗೂ ನಟ ರಾಜ್ ಬಿ ಶೆಟ್ಟಿ ಈ ಸಿನಿಮಾದಲ್ಲೂ ನಾಯಕರಾಗಿದ್ದಾರೆ. ಒಟ್ಟಿನಲ್ಲಿ ನಟಿಯಾಗಿ ರಮ್ಯರನ್ನು ನೋಡೋ ಅಭಿಮಾನಿಗಳ ಕನಸು ಸದ್ಯ ನನಸಾಗದೇ ಇದ್ದರೂ ನಿರ್ಮಾಪಕಿಯಾಗಿ ನೋಡೋ ಕನಸು ನವೆಂಬರ್ ನಲ್ಲಿ ಈಡೇರಲಿದೆ.
https://www.youtube.com/watch?v=l3H-bEvnWN0
Sandalwood Queen Ramya Good News swathi mutthina male haniye movie hits screens on November 24