Sandalwood queen Ramya: ದೀಪಿಕಾ ಬೆಂಬಲಕ್ಕೆ ಸ್ಯಾಂಡಲ್ ವುಡ್ ಕ್ವೀನ್: ರಮ್ಯ ಹಿಂದೂ ವಿರೋಧಿ ಎಂದ ನೆಟ್ಟಿಗರು

(Sandalwood queen Ramya) ಸ್ಯಾಂಡಲ್ ವುಡ್ ಕ್ವೀನ್ ಎನ್ನಿಸಿರೋ ನಟಿ ರಮ್ಯ, ಸಂಸದೆಯಾಗಿ ಹೆಸರು ಗಳಿಸಿದಷ್ಟೇ, ವಿವಾದಗಳ ಮೂಲಕವೂ ಜನರ ಕಣ್ಣು ಕೆಂಪಾಗಿಸಿದ್ದಾರೆ. ಸದಾ ಸೋಷಿಯಲ್ ಮೀಡಿಯಾದಲ್ಲಿ ಒಂದಿಲ್ಲೊಂದು ಸಂಚಲನ ಮೂಡಿಸೋ ಹೇಳಿಕೆ ನೀಡೋ ರಮ್ಯ ಈ ಭಾರಿ ವಿವಾದಿತ ವಿಚಾರದ ಪರ‌‌ನಿಲ್ಲೋ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ.

ದೇಶದಾದ್ಯಂತ ಪಠಾಣ ಸಿನಿಮಾದ ಬೇಷರಮ್ ರಂಗ್ ಹಾಡು ವಿವಾದದ ಕಿಡಿ ಹೊತ್ತಿಸಿದೆ. ದೀಪಿಕಾ ಪಡುಕೋಣೆ ಹಾಕಿದ ಕೇಸರಿ ಬಿಕನಿ, ಸ್ಟೆಪ್ ಹಾಗೂ ಬೋಲ್ಡ್ ನಟನೆ ಹಿಂದುತ್ವವಾದಿಗಳ ಕಣ್ಣು ಕೆಂಪಾಗಿಸಿದೆ. ಬೇಷರಮ್ ರಂಗ್ ಹಾಡಿನ‌ ವಿರುದ್ಧ ತಿರುಗಿ ಬಿದ್ದ ಹಿಂದೂತ್ವವಾದಿಗಳು ಬಾಯ್ಕಾಟ್ ಪಠಾಣ ಎಂಬ ಅಭಿಯಾನ ಆರಂಭಿಸಿದ್ದಾರೆ.

ಈ ಮಧ್ಯೆ ಸ್ಯಾಂಡಲ್ ವುಡ್ ಕ್ವೀನ್ ಎನ್ನಿಸಿರೋ ನಟಿ ರಮ್ಯ(Sandalwood queen Ramya), ಸೋಷಿಯಲ್ ಮೀಡಿಯಾದಲ್ಲಿ ದೀಪಿಕಾ ಪಡುಕೋಣೆ ಪರ ಬ್ಯಾಟಿಂಗ್ ಮಾಡಿದ್ದಾರೆ. ಎಲ್ಲಾ ವಿಚಾರಗಳಲ್ಲೂ ಹೆಣ್ಣುಮಕ್ಕಳನ್ನೇ ಟಾರ್ಗೆಟ್ ಮಾಡುವ ಮತ್ತು ಹೆಣ್ಣು ಮಕ್ಕಳ ಉಡುಪಿನ ಬಗ್ಗೆ ಟೀಕೆ ಮಾಡೋ ಮನಸ್ಥಿತಿ ವಿರುದ್ಧ ನಟಿ ರಮ್ಯ ಚಾಟಿ ಬೀಸಿದ್ದಾರೆ.

ಈ ಬಗ್ಗೆ ವಿವರವಾಗಿ ಟ್ವೀಟ್ ಮಾಡಿರೋ ನಟಿ ರಮ್ಯ, ನಟಿ ಸಮಂತಾರನ್ನು ಅವರ ಡಿವೋರ್ಸ್ ಗಾಗಿ ಟ್ರೋಲ್ ಮಾಡಲಾಯಿತು. ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಸಾಯಿ ಪಲ್ಲವಿ ಟಾರ್ಗೆಟ್ ಆದ್ರು. ರಶ್ಮಿಕಾ ಮದುಗೆ ಮುರಿದುಕೊಂಡಿದ್ದಕ್ಕೆ ವಿವಾದಕ್ಕೆ ಗುರಿಯಾದ್ರು. ಈಗ ದೀಪಿಕಾ ಪಡುಕೋಣೆ ಅವರ ಬಟ್ಟೆಗಾಗಿ ಟೀಕೆಗೆ ಗುರಿಯಾಗಿದ್ದಾರೆ.

ಇದಲ್ಲದೇ ಇಂಥ ನೂರಾರು ಕಾರಣಕ್ಕೆ ಅದೆಷ್ಟೋ ಹೆಣ್ಣುಮಕ್ಕಳು ಟಾರ್ಗೆಟ್ ಆಗಿದ್ದಾರೆ. ಆಯ್ಕೆಯ ಸ್ವಾತಂತ್ರ್ಯ ನಮ್ಮ ಮೂಲಭೂತ ಹಕ್ಕು. ಅಲ್ಲದೇ ಮಹಿಳೆಯರನ್ನು ತಾಯಿ ದುರ್ಗೆಯ ಅಂಶ ಎಂದು ಪರಿಗಣಿಸಲಾಗುತ್ತದೆ. ಆದರೆ ಈ ಮಹಿಳೆಯರನ್ನು ವಿರೋಧಿಸುವ ಮನಸ್ಥಿತಿ ಒಂದು ಪಿಡುಗಿನಂತೆ ಕಾಡುತ್ತಿದೆ. ಅದರ ವಿರುದ್ಧ ನಾವು ಹೋರಾಡಬೇಕು ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : KL Rahul Athiya Shetty wedding : “ಮಗಳ ಮದುವೆಯ ದಿನಾಂಕ ಫಿಕ್ಸ್ ಆದ್ರೆ ಹೇಳಿ, ನಾನೂ ಬರುವೆ ” ಹೀಗಂದರೇಕೆ ಸುನೀಲ್ ಶೆಟ್ಟಿ ?

ರಮ್ಯ ಈ ಟ್ವೀಟ್ ಸಾವಿರಾರು ರೀ ಟ್ವೀಟ್ ಗಳು ಬಂದಿದ್ದು ಕೆಲವರು ರಮ್ಯ ಬೆಂಬಲಿಸಿದ್ದರೇ ಇನ್ನೂ ಹಲವರು ರಮ್ಯ ಹಿಂದೂ ವಿರೋಧಿ ಎಂದು ಜರಿದಿದ್ದಾರೆ. ಸದಾ ಟ್ವೀಟ್ ಗಳ ಮೂಲಕ ಟೀಕಾಸ್ತ್ರ ಪ್ರಯೋಗಿಸುವ ನಟಿ ರಮ್ಯ ಈಗ ಹಿಂದುತ್ವದ ವಿರೋಧಿ ಸಿನಿಮಾ ಎಂಬ ಹಣೆ ಪಟ್ಟಿ ಪಡೆದುಕೊಂಡ ಪಠಾಣ ಬೆಂಬಲಿಸುವ ಮೂಲಕ ಹೊಸ ವಿವಾದಕ್ಕೆ ಗುರಿಯಾಗಿದ್ದು, ನಟಿ ರಮ್ಯ ಪೋಸ್ಟ್ ಏನೆಲ್ಲ ವಿವಾದ ಸೃಷ್ಟಿಸುತ್ತೆ ಕಾದು ನೋಡಬೇಕಿದೆ.

(Sandalwood queen Ramya) Sandalwood queen Ennisiro actress Ramya, has made people’s eyes red through controversies as well as gaining fame as a parliamentarian. Ramya has always added fuel to the burning fire by creating a sensation or making a statement on social media.

Comments are closed.