Pro Kabaddi League final: ಕನ್ನಡಿಗನ ತಂಡಕ್ಕೆ ಜೈಪುರ ಸವಾಲ್, ಇಲ್ಲಿದೆ ಫೈನಲ್ ಪಂದ್ಯದ ಕಂಪ್ಲೀಟ್ ಮಾಹಿತಿ


ಮುಂಬೈ: (Pro Kabaddi League final)ಪ್ರೊ ಕಬಡ್ಡಿ ಲೀಗ್-9ನೇ (Pro Kabadddi League) ಆವತ್ತಿಯ ಫೈನಲ್ ಪಂದ್ಯ ಇಂದು (ಶನಿವಾರ) ನಡೆಯಲಿದ್ದು, ಜೈಪುರ ಪಿಂಕ್ ಪ್ಯಾಂಥರ್ಸ್ ಹಾಗೂ ಪುಣೇರಿ ಪಲ್ಟನ್ (Jaipur Pink Panthers Vs Puneri Paltan) ತಂಡಗಳು ಮುಖಾಮುಖಿಯಾಗಲಿವೆ.

(Pro Kabaddi League final)ಮುಂಬೈನ ಡೋಮ್, NSCI SVP ಸ್ಟೇಡಿಯಂನಲ್ಲಿ ರೋಚಕ ಫೈನಲ್ ಪಂದ್ಯ ನಡೆಯಲಿದ್ದು, ಕನ್ನಡಿಗ ಬಿ.ಸಿ ರಮೇಶ್ ಅವರ ಗರಡಿಯಲ್ಲಿ ಪಳಗಿರುವ ಪುಣೇರಿ ಪಲ್ಟನ್ ತಂಡ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದೆ. ಇರಾನ್ ಆಟಗಾರ ಫಜಲ್ ಅತ್ರಾಚಲಿ ನಾಯಕತ್ವದ ಪುಣೇರಿ ಪಲ್ಟನ್ ಬಳಗ ಪ್ರೊ ಕಬಡ್ಡಿ ಲೀಗ್ ಇತಿಹಾಸದಲ್ಲಿ ಇದೇ ಮೊದಲ ಬಾರಿ ಫೈನಲ್ ತಲುಪಿದೆ. ಮತ್ತೊಂದೆಡೆ ಮೊದಲ ಆವೃತ್ತಿಯ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ 2ನೇ ಬಾರಿ ಫೈನಲ್ ತಲುಪಿದ್ದು, ಚಾಂಪಿಯನ್ ಪಟ್ಟದ ಮೇಲೆ ಕಣ್ಣಿಟ್ಟಿದೆ.

ಗುರುವಾರ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಜೈಪುರ ಪಿಂಕ್ ಪ್ಯಾಂಥರ್ಸ್ ಪಡೆ ಬೆಂಗಳೂರು ಬುಲ್ಸ್ ವಿರುದ್ಧ 49-29ರ ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸಿ ಫೈನಲ್ ತಲುಪಿದ್ರೆ, 2ನೇ ಸೆಮಿಫೈನಲ್ ಪಂದ್ಯದಲ್ಲಿ ಪುಣೇರಿ ಪಲ್ಟನ್ ತಂಡ, ತಮಿಳ್ ತಲೈವಾಸ್ ತಂಡವನ್ನು 39-37ರಲ್ಲಿ ರೋಚಕವಾಗಿ ಮಣಿಸಿ ಫೈನಲ್ ತಲುಪಿದೆ. ಜೈಪುರ ವಿರುದ್ಧದ ಲೀಗ್ ಮುಖಾಮುಖಿಯಲ್ಲಿ ಎರಡೂ ಬಾರಿಯೂ ಪುಣೇರಿ ಪಲ್ಟನ್ ಗೆಲುವು ದಾಖಲಿಸಿದೆ. ಮೊದಲ ಪಂದ್ಯದಲ್ಲಿ 32-24ರ ಅಂತರದಲ್ಲಿ ಗೆದ್ದಿದ್ದ ಪಲ್ಟನ್ ಪಡೆ, 39-32ರಿಂದ ಗೆಲುವು ಸಾಧಿಸಿತ್ತು.

ಪ್ರೊ ಕಬಡ್ಡಿ ಲೀಗ್-9: ಫೈನಲ್ (Pro Kabaddi League finals)
ಪುಣೇರಿ ಪಲ್ಟನ್ Vs ಜೈಪುರ ಪಿಂಕ್ ಪ್ಯಾಂಥರ್ಸ್ (ರಾತ್ರಿ 8ಕ್ಕೆ)

ಸ್ಥಳ: ಡೋಮ್, NSCI SVP ಸ್ಟೇಡಿಯಂ, ಮುಂಬೈ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

Head to Head (ಜೈಪುರ Vs ಪಲ್ಟನ್)
ಪಂದ್ಯ: 20
ಜೈಪುರ ಗೆಲುವು: 10
ಪಲ್ಟನ್ ಗೆಲುವು: 08
ಟೈ: 02

ಪ್ರೊ ಕಬಡ್ಡಿ ಲೀಗ್-9: Head to Head
ಪಂದ್ಯ: 02
ಪಲ್ಟನ್ ಗೆಲುವು: 02
ಜೈಪುರ ಗೆಲುವು: 00

ಪ್ರೊ ಕಬಡ್ಡಿ ಲೀಗ್-9: ಫೈನಲ್ (ಸ್ಟಾರ್ ಆಟಗಾರರು)
ಸ್ಟಾರ್ ರೇಡರ್ಸ್:
ಅರ್ಜನ್ ದೇಶ್ವಾಲ್ (ಜೈಪುರ ಪಿಂಕ್ ಪ್ಯಾಂಥರ್ಸ್): 290 ರೇಡ್ ಪಾಯಿಂಟ್ಸ್
ಅಸ್ಲಾಂ ಇನಾಮ್ದಾರ್ (ಪುಣೇರಿ ಪಲ್ಟನ್): 138 ರೇಡ್ ಪಾಯಿಂಟ್ಸ್
ಆಕಾಶ್ ಶಿಂಧೆ (ಪುಣೇರಿ ಪಲ್ಟನ್): 135 ರೇಡ್ ಪಾಯಿಂಟ್ಸ್
ಮೋಹಿತ್ ಗೊಯಾಟ್ (ಪುಣೇರಿ ಪಲ್ಟನ್): 120 ರೇಡ್ ಪಾಯಿಂಟ್ಸ್)

ಇದನ್ನೂ ಓದಿ:Ranji Trophy Karnataka: ಸರ್ವಿಸಸ್ ವಿರುದ್ಧದ ಪಂದ್ಯ ಡ್ರಾ, 3 ಅಂಕಕ್ಕೆ ತೃಪ್ತಿ ಪಟ್ಟ ಕರ್ನಾಟಕ

ಇದನ್ನೂ ಓದಿ:BenneKudru Sri Kulamahastri: ಮೊಗವೀರ ಸಮಾಜದ ಆರಾಧ್ಯ ದೇವಿ ಬೆಣ್ಣೆಕುದ್ರು ಶ್ರೀ ಕುಲಮಹಾಸ್ತ್ರೀ ಅಮ್ಮ

ಸ್ಟಾರ್ ಡಿಫೆಂಡರ್ಸ್:
ಅಂಕುಶ್ (ಜೈಪುರ ಪಿಂಕ್ ಪ್ಯಾಂಥರ್ಸ್): 86 ಟ್ಯಾಕಲ್ ಪಾಯಿಂಟ್ಸ್
ಸುನಿಲ್ ಕುಮಾರ್ (ಜೈಪುರ ಪಿಂಕ್ ಪ್ಯಾಂಥರ್ಸ್): 59 ಟ್ಯಾಕಲ್ ಪಾಯಿಂಟ್ಸ್
ಫಜಸ್ ಅತ್ರಾಚಲಿ (ಪುಣೇರಿ ಪಲ್ಟನ್): 53 ಟ್ಯಾಕಲ್ ಪಾಯಿಂಟ್ಸ್
ಸೋಮ್’ಬೀರ್ (ಪುಣೇರಿ ಪಲ್ಟನ್): 35 ಟ್ಯಾಕಲ್ ಪಾಯಿಂಟ್ಸ್

Pro Kabaddi League final Jaipur challenge for Kannadigas team, here is the complete information of the final match

Comments are closed.