ಸೋಮವಾರ, ಏಪ್ರಿಲ್ 28, 2025
HomeCinemaSanjanaa Anand : ಸಲಗ ಸುಂದರಿ ಟಾಲಿವುಡ್ ಗೆ: ಹೊಸ ಜರ್ನಿ ಖುಷಿ‌ ಹಂಚಿಕೊಂಡ ಸಂಜನಾ

Sanjanaa Anand : ಸಲಗ ಸುಂದರಿ ಟಾಲಿವುಡ್ ಗೆ: ಹೊಸ ಜರ್ನಿ ಖುಷಿ‌ ಹಂಚಿಕೊಂಡ ಸಂಜನಾ

- Advertisement -

ಸ್ಯಾಂಡಲ್ ವುಡ್ ನಲ್ಲಿ ಮಿಂಚೋ ಸುಂದರಿಯರು ನಿಧಾನಕ್ಕೆ ಪರಭಾಷೆಯತ್ತ ಮುಖಮಾಡೋದು ಕಾಮನ್. ಕನ್ನಡದ ಹಿರೋಯಿನ್ ಗಳು ತಮಿಳು, ತೆಲುಗಿಗೆ ಕಾಲಿಟ್ಟರೇ, ಅಲ್ಲಿನ ಹಿರೋಯಿನ್ ಗಳು ಇಲ್ಲಿ ಧೂಳೆಬ್ಬಿಸುತ್ತಾರೆ. ಇದೀಗ ಈ ಸಾಲಿಗೆ ಕನ್ನಡದ ಸಲಗ ಸುಂದರಿ ಸಂಜನಾ ಆನಂದ (Sanjanaa Anand) ಹೊಸ ಸೇರ್ಪಡೆ. ಕನ್ನಡದಲ್ಲಿ ಕೆರಿಯರ್ ಆರಂಭಿಸಿದ ಶೃದ್ಧಾ ಶ್ರೀನಾಥ್, ರಚಿತಾರಾಮ್, ನಭಾನಟೇಶ್, ರಚಿತಾ ರಾಮ್, ರಶ್ಮಿಕಾ ಮಂದಣ್ಣ ಸೇರಿದಂತೆ ಹಲವರು ಈಗಾಗಲೇ ತಮಿಳು, ತೆಲುಗು, ಹಿಂದಿಯಲ್ಲಿ ಮಿಂಚುತ್ತಿದ್ದಾರೆ‌. ಹೀಗಿರುವಾಗಲೇ ಇತ್ತೀಚಿಗೆ ಸಲಗದಲ್ಲಿ ಸದ್ದು ಮಾಡಿದ್ದ ಸಂಜನಾ ತೆಲುಗಿಗೆ ಎಂಟ್ರಿಕೊಡಲು ಸಿದ್ಧವಾಗಿದ್ದಾರೆ.

ತೆಲುಗಿನ ದೊಡ್ಡ ಬ್ಯಾನರ್ ಸಿನಿಮಾವೊಂದರಲ್ಲಿ ಸಂಜನಾ ನಟಿಸುತ್ತಿದ್ದು, ಕಳೆದ ತಿಂಗಳು ಸಿನಿಮಾ‌ ಮುಹೂರ್ತ ನೆರವೇರಿದೆ. ಈಗಾಗಲೇ ಶೂಟಿಂಗ್ ನಲ್ಲಿ ಭಾಗಿಯಾಗುತ್ತಿರುವ ಸಂಜನಾ ಸೋಷಿಯಲ್ ಮೀಡಿಯಾ ದಲ್ಲಿ ತಮ್ಮ ಖುಷಿ ಹಂಚಿಕೊಂಡಿದ್ದಾರೆ. ನಿಮ್ಮೆಲ್ಲರ ಆಶೀರ್ವಾದದೊಂದಿಗೆ ಒಂದು ಹೊಸ ಜರ್ನಿ ಆರಂಭಿಸುತ್ತಿದ್ದೇನೆ. ಅಶೀರ್ವದಿಸಿ ಎಂದು ಸಂಜನಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ.

ಖ್ಯಾತ ನಿರ್ದೇಶಕ ಕೋಡಿ ರಾಮಕೃಷ್ಣ ಅವರ ಮಗಳು ಕೋಡಿ ದಿವ್ಯ ನಿರ್ಮಿಸುತ್ತಿರುವ ಚಿತ್ರದಲ್ಲಿ ಸಂಜನಾ ನಟಿಸುತ್ತಿದ್ದು ಇದು ಕೋಡಿ ದಿವ್ಯ ಬ್ಯಾನರ್ ನಲ್ಲಿ ಸಿದ್ಧವಾಗುತ್ತಿರುವ ಚೊಚ್ಚಲ ಚಿತ್ರ. ಸಂಜನಾಗೂ ಇದು ಮೊದಲ ಟಾಲಿವುಡ್ ಸಿನಿಮಾ.

ಪ್ರೇಮಕತೆಯನ್ನು ತೆರೆಗೆ ತರಲಾಗುತ್ತಿದ್ದು ಇದರಲ್ಲಿ ಸಂಜನಾ ಆನಂದ ಜೊತೆ ರಾಜ ವಾರು ರಾಣಿ ಗಾರು ಮತ್ತು ಎಸ್ ಆರ್ ಕಲ್ಯಾಣ ಮಂಟಪ್ಪಂ ಸಿನಿಮಾ ಖ್ಯಾತಿಯ ನಟ ಕಿರಣ ಅಬ್ಬಾವರಂ ನಟಿಸಲಿದ್ದಾರೆ. ಕಾರ್ತೀಕ್ ಶಂಕರ್ ಈ‌ ವಿಭಿನ್ನ ಪ್ರೇಮ ಕತೆಯನ್ನು ನಿರ್ದೇಶಿಸಲಿದ್ದು, ಚಿತ್ರ ಸಾಕಷ್ಟು ಕುತೂಹಲ‌ ಮೂಡಿಸಿದೆ.

ಕನ್ನಡದ ಸಲಗ, ವಿಂಡೋ ಸೀಟ್, ಶೋಕಿವಾಲ್, ಕೆಮಿಸ್ಟ್ರಿ ಅಫ್ ಕರಿಯಪ್ಪ ಸೇರಿದಂತೆ ಹಲವು ಚಿತ್ರದಲ್ಲಿ ನಟಿಸಿದ ಸಂಜನಾ ತಮ್ಮ ಮುಗ್ಧ ಲುಕ್ ಹಾಗೂ ನಟನೆಯಿಂದಲೇ ಗಮನ ಸೆಳೆದಿದ್ದಾರೆ.

ಸಲಗ ಸಿನಿಮಾದಲ್ಲಿ ಇನ್ನೊಸೆಂಟ್ ಲುಕ್ ಹಾಗೂ ರಗಡ್ ಡೈಲಾಗ್ ಮೂಲಕ ಗಮನ ಸೆಳೆದಿದ್ದ ಸಂಜನಾ ಆನಂದ್ ಮುಂದಿನ ಚಿತ್ರ ಯಾವುದು ಎಂದು ಅಭಿಮಾನಿಗಳು ಕುತೂಹಲ ದಿಂದ‌ ಕಾಯುತ್ತಿದ್ದರು. ಈಗ ಅಭಿಮಾನಿಗಳ ಕುತೂಹಲಕ್ಕೆ ಉತ್ತರ ಸಿಕ್ಕಿದ್ದು. ಸಂಜನಾ ತೆಲುಗಿನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಇದನ್ನೂ ಓದಿ : Special gift Sudeep : ಬಾಲಿವುಡ್ ನಿಂದ ಬಾದಶಾ ಸುದೀಪ್ ಗೆ ಬಂತು ಸ್ಪೆಶಲ್ ಗಿಫ್ಟ್

ಇದನ್ನೂ ಓದಿ : Bike Ride for Appu : ಅಪ್ಪುಗಾಗಿ ಬೈಕ್ ರೈಡ್ : ಪುನೀತ್ ರಾಜ್ ಕುಮಾರ್ ಸ್ಮರಿಸಲು ವಿಶಿಷ್ಟ ಕಾರ್ಯಕ್ರಮ

( Sanjanaa Anand shares her new Journey to Tollywood )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular