Puneet Raj Kumar : ಬೆಳ್ಳಿ ತೆರೆಗೆ ಬಾಲನಟನ‌ ಬದುಕು: ಪುನೀತ್‌ ರಾಜ್‌ ಕುಮಾರ್‌ ಬಯೋಪಿಕ್ ರೂಪದಲ್ಲಿ ಪವರ್ ಚರಿತ್ರೆ

ಮಳೆ‌ ನಿಂತರೂ ಹನಿ‌ನಿಂತಿಲ್ಲ ಅನ್ನೋ ಹಾಗೇ ಪುನೀತ್ ರಾಜ್‌ ಕುಮಾರ್ ( Puneet Raj Kumar ) ಅಕಾಲಿಕವಾಗಿ ಅಗಲಿ ಹೋದರೂ ಅವರ ನೆನಪುಗಳು ಅಭಿಮಾನಿ‌ ಗಳು, ಆಪ್ತರನ್ನು ಕಾಡುತ್ತಲೇ ಇದೆ. ಅಲ್ಲದೇ ಅಪ್ಪು ಅಗಲಿಕೆಯನ್ನು ಸಹಿಸಲಾಗದೇ ಇನ್ನೂ ಅಭಿಮಾನಿಗಳು,ಸಂಬಂಧಿಕರು, ಫ್ಯಾನ್ಸ್ ನೊಂದು ಕಣ್ಣೀರಿಡುತ್ತಲೇ ಇದ್ದಾರೆ. ಅಷ್ಟೇ ಅಲ್ಲ ಪುನೀತ್ ನೆನಪನ್ನು ಸದಾ ಕಾಪಿಡಲು ಪುನೀತ್ ಬಯೋಪಿಕ್ ನಿರ್ಮಿಸಬೇಕೆಂಬ ಒತ್ತಡ ಬರಲಾರಂಭಿಸಿದೆ.

ಪುನೀತ್ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದರೂ ಪುನೀತ್ ಜೊತೆ ಹೆಚ್ಚು ಆತ್ಮೀಯತೆ ಹಾಗೂ ಆಪ್ತತೆ ಹೊಂದಿದ್ದ ಸಂತೋಷ್‌ ಆನಂದ್ ರಾಮ್ ಗೆ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ವಿಶೇಷ ಬೇಡಿಕೆಯೊಂದನ್ನು ಇಟ್ಟಿದ್ದಾರೆ. ಪುನೀತ್ ಅಗಲಿದ್ದರೂ ಪುನೀತ್ ಸಾಮಾಜಿಕ ಸೇವೆ,ದಾನ ಧರ್ಮ, ಸಾಧನೆ, ಬದುಕು ಎಲ್ಲವನ್ನೂ ಅಮರವಾಗಿಸುವ ನಿಟ್ಟಿನಲ್ಲಿ ಪುನೀತ್ ಬಯೋಪಿಕ್ ಮಾಡಿ ಎಂದು ಸಾಕಷ್ಟು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಆನಂದ್ ರಾಮ್ ಅವರನ್ನು ಒತ್ತಾಯಿಸಿದ್ದಾರೆ. ಇದಕ್ಕೆ ಸಂತೋಷ್ ಕೂಡ ಪಾಸಿಟಿವ್ ಆಗಿ ರೆಸ್ಪಾನ್ಸ್ ಮಾಡಿದ್ದಾರೆ. ಅಭಿಮಾನಿಗಳ ಟ್ವೀಟ್ ಉಲ್ಲೇಖಿಸಿ ರ್ರೀ ಟ್ವೀಟ್ ಮಾಡಿರೋ ಸಂತೋಷ್, I will try my level best to bring this idea on screen ಎಂದಿದ್ದಾರೆ.

ಹೀಗಾಗಿ ಸಂತೋಷ್ ಆನಂದ ರಾಮ್ ಟ್ವೀಟ್ ಅಭಿಮಾನಿಗಳ ಮನಸ್ಸಿನಲ್ಲಿ ಹೊಸ ಆಸೆಯನ್ನು ಹುಟ್ಟುಹಾಕಿದ್ದು ಪುನೀತ್ ಬಯೋಪಿಕ್ ತೆರೆಗೆ ಬರಬಹುದೆಂದು ಅಭಿಮಾನಿಗಳು ಖುಷಿಯಾಗಿದ್ದಾರೆ. ಪುನೀತ್ ಗಾಗಿ ರಾಜ್ ಕುಮಾರ್ ಹಾಗೂ ಯುವರತ್ನ ಮೂವಿಗಳನ್ನು ನಿರ್ದೇಶಿಸಿರುವ ಸಂತೋಷ್ ಆನಂದ ರಾಮ್ ಪುನೀತ್ ಜೊತೆ ಆತ್ಮೀಯವಾದ ಬಾಂಧವ್ಯ ಹೊಂದಿದ್ದರು. ಹೆಚ್ಚಿನ ಸಮಯವನ್ನು ಜೊತೆಯಲ್ಲೇ ಕಳೆದ ಪುನೀತ್ ಬಗ್ಗೆ ಬಯೋಪಿಕ್, ಒಂದೆರಡು ಗೀತೆ ಮಾಡಿಕೊಡಿ ಎಂದೆಲ್ಲ ಪುನೀತ್ ಅಭಿಮಾನಿಗಳು ಸಂತೋಷ್ ಆನಂದ್ ರಾಮ್ ಗೆ ಸೋಷಿಯಲ್‌ಮೀಡಿಯಾದಲ್ಲಿ ಒತ್ತಡ ಹೇರುತ್ತಿದ್ದಾರಂತೆ.

ಇನ್ನೊಂದೆಡೆ ಸದ್ಯ ಸಂತೋಷ್ ಆನಂದ ರಾಮ್ ಹೊಂಬಾಳೆ ಫಿಲ್ಮ್‌ ಅಡಿಯಲ್ಲಿ ಶ್ರೀರಾಘವೆಂದ್ರ ಸ್ಟೋರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಇದೇ ಮೊದಲ ಬಾರಿಗೆ ಈ ಸಿನಿಮಾದ ವಿಭಿನ್ನ ಪಾತ್ರದಲ್ಲಿ ನವರಸ ನಾಯಕ ಜಗ್ಗೇಶ್ ನಟಿಸುತ್ತಿದ್ದಾರೆ. ಹೀಗಾಗಿ ಒಂದೊಮ್ಮೆ ಪುನೀತ್ ಬಯೋಪಿಕ್ ಸಿದ್ಧಪಡಿಸುವುದಾದರೂ ಈ ಸಿನಿಮಾ ಪೂರ್ಣಗೊಂಡ ಮೇಲೆ ನಿರ್ಮಿಸಬಹುದು. ಆದರೆ ಬಯೋಪಿಕ್ ನಿರ್ಮಾಣಕ್ಕೆ ಪುನೀತ್ ಕುಟುಂಬಸ್ಥರ ಒಪ್ಪಿಗೆ ಕೂಡ ಮುಖ್ಯವಾಗಿದ್ದು ಡಾ.ರಾಜ್ ಕುಟುಂಬದ ಸದಸ್ಯರು ಹಾಗೂ ಅಶ್ವಿನಿ ಪುನೀತ್ ರಾಜ್ ಕುಮಾರ್ ಒಪ್ಪಿಗೆ ಸಿಕ್ಕಲ್ಲಿ ಬಹುಷಃ ಪುನೀತ್ ರಾಜ್ ಬಯೋಪಿಕ್ ಮೂಲಕ ಕನ್ನಡಿಗರ ಮನೆ ಮನಕ್ಕೆ ಎಂಟ್ರಿಕೊಡೋದು ಬಹುತೇಕ ಖಚಿತ.

ಇದನ್ನೂ ಓದಿ :‌ Sanjanaa Anand : ಸಲಗ ಸುಂದರಿ ಟಾಲಿವುಡ್ ಗೆ: ಹೊಸ ಜರ್ನಿ ಖುಷಿ‌ ಹಂಚಿಕೊಂಡ ಸಂಜನಾ

ಇದನ್ನೂ ಓದಿ : ಪುನೀತ್‌ ರಾಜ್‌ ಕುಮಾರ್‌ ಪ್ರೇರಣೆ : ನೇತ್ರದಾನಕ್ಕೆ ಒಂದೇ ದಿನ 1000 ಕ್ಕೂ ಅಧಿಕ ಮಂದಿ ನೋಂದಣಿ

(Puneet Raj Kumar biography will be the Biopic)

Comments are closed.