80th old woman video viral: ಮುಂಬೈ ಮ್ಯಾರಥಾನ್‌ ನಲ್ಲಿ ಸೀರೆಯುಟ್ಟು ಓಡಿದ 80 ವರ್ಷದ ಮಹಿಳೆ

ಮುಂಬೈ: (80th old woman video viral) ನಮ್ಮ ಕನಸುಗಳನ್ನು ಪೂರೈಸಿಕೊಳ್ಳಲು ವಯಸ್ಸು ಅಡ್ಡಿ ಬರುತ್ತದೆ ಎಂಬ ನಮ್ಮ ಮನಸ್ಥಿತಿಯನ್ನು ಸುಳ್ಳು ಎಂದು ಇಲ್ಲೊಬ್ಬ ಮಹಿಳೆ ಸಾಬೀತು ಪಡಿಸಿದ್ದಾರೆ. ವಯಸ್ಸು ಕೇವಲ ಸಂಖ್ಯೆಯಷ್ಟೇ ಎಂಬುದನ್ನು 80 ವರ್ಷದ ಮಹಿಳೆಯೊಬ್ಬರು ಸೀರೆಯುಟ್ಟು ಮ್ಯಾರಥಾನ್‌ ನಲ್ಲಿ ಓಡುವ ಮೂಲಕ ಸಾಬೀತುಪಡಿಸಿದ್ದಾರೆ.

ಜನವರಿ 15 ರಂದು ನಡೆದ ಐಕಾನಿಕ್ ಟಾಟಾ ಮುಂಬೈ ಮ್ಯಾರಥಾನ್‌ನ 18 ನೇ ಆವೃತ್ತಿಯಲ್ಲಿ ಮಹಿಳೆಯೊಬ್ಬರು ಭಾಗವಹಿಸಿದ್ದು, ಅವರಿಗೆ 80 ವರ್ಷ ವಯಸ್ಸಾಗಿತ್ತು. ಇವರು ಸೀರೆಯುಟ್ಟು ಮ್ಯಾರಥಾನ್‌ ನಲ್ಲಿ ಓಡಿ ಎಲ್ಲರನ್ನು ಅಚ್ಚರಿಗೊಳಿಸಿದರು. ಸದ್ಯ 80 ವರ್ಷದ ಮಹಿಳೆ ಮ್ಯಾರಥಾನ್‌ ನಲ್ಲಿ ಓಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ (80th old woman video viral) ಆಗಿದೆ.

ಮ್ಯಾರಥಾನ್‌ ನಲ್ಲಿ ಓಡಿ ಜನರಿಗೆ ಅಚ್ಚರಿಗೊಳಗಾಗುವಂತೆ ಮಾಡಿದ ಮಹಿಳೆಯ ಮೊಮ್ಮಗಳು ಮೆಹ್ತಾ ಫೆರ್ನಾಂಡಿಸ್‌ ಈ ವಿಡಿಯೋವನ್ನು ಹಂಚಿಕೊಂಡಿದ್ದು, “ಈ ಭಾನುವಾರದಂದು TATA ಮ್ಯಾರಥಾನ್ ಅಲ್ಲಿ ಓಡಿದ ನನ್ನ 80 ವರ್ಷದ ನಾನಿ ಅವರ ಸಂಪೂರ್ಣ ಇಚ್ಛೆ ಮತ್ತು ಉತ್ಸಾಹದಿಂದ ಸ್ಫೂರ್ತಿ ಪಡೆದಿದ್ದೇನೆ” ಎಂದು ಡಿಂಪಲ್ ಮೆಹ್ತಾ ಫರ್ನಾಂಡಿಸ್ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

https://www.instagram.com/p/CnhhxHtje_M/



ತಮ್ಮ ಈ ವಯಸ್ಸಿನಲ್ಲೂ ಮಹಿಳೆ ಈ ರೀತಿಅಯಗಿ ಸಾಧನೆಗೈದಿರುವುದು ಎಲ್ಲರಿಗೂ ಅಚ್ಚರಿಯ ಜೊತೆಗೆ ನಾಚಿಕೆ ಪಡುವಂತೆಯೂ ಮಾಡಿದೆ. ಯುವಕರು ಯುವತಿಯರ ಕೈಯಲ್ಲಿ ಮಾಡಲಾಗದಂತಹ ಸಾಧನೆಯನ್ನು 80 ವರ್ಷದ ಮಹಿಳೆಯೊಬ್ಬರು ಮಾಡಿದ್ದಾರೆ. ಅವರ ಈ ಸಾಧನೆಗೆ ಒಳ್ಳೆಯ ಮೆಚ್ಚುಗೆ ವ್ಯಕ್ತವಾಗುತ್ತಿದೆ.

” ವಯಸ್ಸು ಎನ್ನುವುದು ನಮ್ಮ ಮನಸ್ಸಿನ ಸಮಸ್ಯೆಯಾಗಿದೆ. ನಿಮಗೆ ಯಾವುದೇ ಕೆಲಸದಲ್ಲಿ ಮನಸಿಲ್ಲದಿದ್ದರೆ ಅದು ಅಪ್ರಸ್ತುತವೆನಿಸುತ್ತದೆ ” ಎಂದು ಎಂದು ಲೆಜೆಂಡರಿ ಲೇಖಕ ಮಾರ್ಕ್ ಟ್ವೈನ್ ಒಮ್ಮೆ ಹೇಳಿದ್ದರು. ನಮ್ಮ ಕನಸುಗಳನ್ನು ಮುಂದುವರಿಸಲು ನಮಗೆ ವಯಸ್ಸಾಗಿದೆ ಎಂಬುದನ್ನು ಮರೆತು ಮುಂದೆ ಸಾಗಿದರೆ ನಮ್ಮ ಯಶಸ್ಸಿಗೆ ಯಾವ ವಯಸ್ಸು ಕೂಡ ಅಡ್ಡ ಬರುವುದಿಲ್ಲ.

ಇದನ್ನೂ ಓದಿ : Mumbai-goa highway accident: ಕಾರು – ಟ್ರಕ್ ಭೀಕರ ಅಪಘಾತ : 9 ಮಂದಿ ಸಾವು

ಇದನ್ನೂ ಓದಿ : Pradhan Mantri Fasal Bima Yojana : ರೈತರಿಗೆ ಸಿಹಿ ಸುದ್ದಿ : ಬೆಳೆ ಹಾನಿಗೆ ಕೇಂದ್ರದಿಂದ ಸಿಗಲಿದೆ ಆರ್ಥಿಕ ನೆರವು

80th old woman video viral: An 80-year-old woman ran in a saree in Mumbai Marathon

Comments are closed.