ಡಿಂಪಲ್ ರಚ್ಚು ನಿರ್ಮಾಣದ ಸಿನಿಮಾಕ್ಕೆ ಚಾಲೆಂಜಿಂಗ್ ಸ್ಟಾರ್ ಹೀರೋ

0

ಸ್ಯಾಂಡಲ್ ವುಡ್ ಬ್ಯೂಟಿ ರಚಿತಾ ರಾಮ್ ಚಿತ್ರರಂಗಕ್ಕೆ ಕಾಲಿಟ್ಟು 7 ವರ್ಷಗಳೇ ಕಳೆದಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ನೀಡಿದ್ದ ರಚಿತಾ ರಾಮ್ ಕನ್ನಡ ಸ್ಟಾರ್ ನಟರ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಏಳು ವರ್ಷಗಳ ಸಿನಿಮಾ ಜನ್ರಿಯಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿರುವ ರಚಿತಾ ರಾಮ್ ಅವರ ತನ್ನ ಮುಂದಿನ ಸಿನಿಮಾ ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಸದ್ಯದಲ್ಲಿಯೇ ಬಿಡುಗಡೆಯಾಗಲಿದ್ದು, ಚಿತ್ರೀಕರಣ ನಡೆಯುತ್ತಿದೆ.

ಕನ್ನಡ ಮಾತ್ರವಲ್ಲದೇ ತೆಲುಗಿನ ಎಪ್ರಿಲ್ ಹಾಗೂ ವೀರಂ, ಲಿಲ್ಲಿ ಸಿನಿಮಾಗಳ ಚಿತ್ರೀಕರಣ ಇನ್ನಷ್ಟೇ ಆರಂಭವಾಗಬೇಕಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬುಲ್ ಬುಲ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ರಚಿತಾ ಇಂದು ಕನ್ನಡಿಗರ ಹಾಟ್ ಫೇವರೇಟ್.

ಬುಲ್ ಬುಲ್ ಮಾತಾಡಕಿಲ್ವಾ ಅಂತಾ ಹಾಡುತ್ತಾ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ರಚಿತಾ, ಸ್ಯಾಂಡಲ್ ವುಡ್ ನ ಬಹು ಬೇಡಿಕೆಯ ನಟಿಯೂ ಹೌದು. ಕನ್ನಡ ಸಿನಿಮಾದಲ್ಲಿ ನಟಿಯಾಗಿ ಪ್ರಖ್ಯಾತಿಯನ್ನು ಪಡೆದಿರುವ ರಚಿತಾಗೆ ತನ್ನ ಕನಸು ಮಾತ್ರ ಇಂದಿಗೂ ಈಡೇರಿಲ್ಲ.

ಹೌದು, ರಚಿತಾ ರಾಮ್ ತಾನು ಸಿನಿಮಾ ನಿರ್ಮಾಣ ಸಂಸ್ಥೆ ಆರಂಭಿಸಬೇಕೆಂಬ ಕನಸು ಕಂಡಿದ್ದಾರೆ. ಮಾತ್ರವಲ್ಲ ತನ್ನ ಕನಸಿನ ಯೋಜನೆಯ ಬಗ್ಗೆಯೂ ಈಗಾಗಲೇ ಹೇಳಿಕೊಂಡಿದ್ದಾರೆ.

ಆದ್ರೀಗ ರಚಿತಾ ರಾಮ್ ನಿರ್ಮಾಣ ಮಾಡುವ ಸಿನಿಮಾ ಸಂಸ್ಥೆಯಿಂದ ತಯಾರಾಗುವ ಸಿನಿಮಾಕ್ಕೆ ಕನ್ನಡದ ಯಾವ ನಟ ನಾಯಕನಾಗಬೇಕೆಂಬ ಕನಸನ್ನು ರಚ್ಚು ಹೇಳಿಕೊಂಡಿದ್ದಾರೆ.

ರಚ್ಚು ನಿರ್ಮಾಣ ಮಾಡುವ ಮೊದಲ ಸಿನಿಮಾಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕನಾಗುವ ಸಾಧ್ಯತೆಯಿದೆ. ಯಾಕೆಂದ್ರ ದರ್ಶನ್ ತನ್ನ ಮೊದಲ ಚಿತ್ರಕ್ಕೆ ನಾಯಕನಾಗಬೇಕೆನ್ನುವುದು ರಚಿತಾ ರಾಮ್ ಕನಸು ಕೂಡ ಹೌದು.

ನನ್ನನ್ನ ಇಂಡಸ್ಟ್ರೀಗೆ ಲಾಂಚ್ ಮಾಡಿದ್ದು ತೂಗುದೀಪ ಬ್ಯಾನರ್ ಮತ್ತು ದರ್ಶನ್ ಸರ್. ಹಾಗಾಗಿ ನಾನು ನಿರ್ಮಾಣ ಮಾಡುವ ಮೊದಲ ಸಿನಿಮಾದಲ್ಲಿ ದರ್ಶನ್ ನಾಯಕರಾಗಿ ಎಂಬುದು ನನ್ನ ಕನಸು. ಅದು ಆಗುತ್ತೋ ಇಲ್ಲವೋ ಗೊತ್ತಿಲ್ಲ ಎಂದಿದ್ದಾರೆ ರಚಿತಾ ರಾಮ್.

ರಚಿತಾ ರಾಮ್ ತನ್ನ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದು ದರ್ಶನ್ ಸಿನಿಮಾದ ಮೂಲಕ. ದರ್ಶನ್ -ರಚ್ಚು ಜೋಡಿ ಬುಲ್ ಬುಲ್ ಚಿತ್ರದ ಮೂಲಕ ಪ್ರೇಕ್ಷಕರನ್ನು ಮೋಡಿ ಮಾಡಿತ್ತು. ಮಾತ್ರವಲ್ಲ ರಚ್ಚು ಮೊದಲ ಸಿನಿಮಾವೇ ಸೂಪರ್ ಹಿಟ್ ಆಗಿತ್ತು.

ಹೀಗಾಗಿಯೇ ರಚಿತಾರಾಮ್ ತನ್ನನ್ನ ಚಿತ್ರರಂಗದಲ್ಲಿ ನಟಿಯನ್ನಾಗಿ ಬೆಳೆಸಿರುವ ದರ್ಶನ್ ಅವರಿಗೆ ತನ್ನ ಮೊದಲ ಚಿತ್ರದಲ್ಲಿ ನಾಯಕನನ್ನಾಗಿಸುವ ಮೂಲಕ ದರ್ಶನ್ ಅವರಿಗೆ ಗಿಫ್ಟ್ ಕೊಡುವ ಪ್ಲ್ಯಾನ್ ಹಾಕಿಕೊಂಡಿದ್ದಾರೆ ಡಿಂಪಲ್ ಕ್ವೀನ್ .

ಸ್ಯಾಂಡಲ್ ವುಡ್ ನಟಿ ರಚಿತಾ ರಾಮ್

ಸ್ಯಾಂಡಲ್ ವುಡ್ ನಟಿ ರಚಿತಾ ರಾಮ್

smokeing is injurious to health

ಸ್ಯಾಂಡಲ್ ವುಡ್ ನಟಿ ರಚಿತಾ ರಾಮ್

ಸ್ಯಾಂಡಲ್ ವುಡ್ ನಟಿ ರಚಿತಾ ರಾಮ್

https://www.instagram.com/p/BrsC0G2B46J/

ಸ್ಯಾಂಡಲ್ ವುಡ್ ನಟಿ ರಚಿತಾ ರಾಮ್

https://www.instagram.com/p/Bt3e7SYBaGK/
Leave A Reply

Your email address will not be published.