Sanjana Galrani Baby Bump : ಸಖತ್‌ ವೈರಲ್ ಆದ ಸಂಜನಾ ಬೇಬಿ ಬಂಪ್ ಫೋಟೋ!!

ಬಹುಭಾಷ ನಟಿ ಸಂಜನಾ ಗಲ್ರಾನಿ (Sanjana Galrani) ಸಾಮಾಜಿಕ ಜಾಲ ತಾಣದಲ್ಲಿ ಫುಲ್ ಆಕ್ಟೀವ್ ಆಗಿದ್ದಾರೆ. ತಾನು ಪ್ರಗ್ನೆಂಟ್ ಎಂದು ಹೇಳಿದ್ದು ಕೂಡ ಇದೇ ಸಾಮಾಜಿಕ ಜಾಲತಾಣದಲ್ಲಿ (Sanjana Galrani Baby Bump), ಡ್ರಗ್ಸ್ ಪ್ರಕರಣದ ನಂತರ ಸಂಜನಾ ಸಿನಿಮಾ ರಂಗದಿಂದ ಅಂತರ ಕಾಯ್ದುಕೊಂಡಿದ್ದರು. ಇತ್ತೀಚೆಗೆ ನಾನು ತಾಯಿ ಆಗುತ್ತಿದ್ದೇನೆ ಎಂದು ಘೋಷಿಸಿದ್ದರು. ಅದರ ಬೆನ್ನಿಗೆ ಸೀಮಂತ ಕಾರ್ಯಕ್ರಮ ಕೂಡ ಮಾಡಿಕೊಂಡಿದ್ದರು.

ಈಗ ಸಂಜನಾ ಹೊಸ ಬೇಬಿ ಬಂಪ್ ಪೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಇದನ್ನು ತಮ್ಮ ಇನ್ಸ್ಟ್ರಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದೆ ತಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಂಜನಾ ಈಗ ಒಂಭತ್ತು ತಿಂಗಳ ತುಂಬು ಗರ್ಭಿಣಿಯಾಗಿದ್ದಾರೆ. ಮೆರುನ್ ಕಲರ್ ಡ್ರೆಸ್ ನಲ್ಲಿ, ತಲೆಗೆ ಹ್ಯಾಟ್ ಹಾಕಿಕೊಂಡು, ತೂಗುಯ್ಯಾಲೆಯಲ್ಲಿ ಕುಳಿತುಕೊಂಡು ಭಿನ್ನವಾಗಿ ಫೋಸು ನೀಡಿದ್ದಾರೆ. ಈ ಫೋಟೊವನ್ನು ಅಪ್ ಲೋಡ್ ಮಾಡಿ ಅದರ ಕೆಳಗೆ, ಜೀವನ ಕಷ್ಟ ಹಾಗೆಯೇ ವೈವಿಧ್ಯ ಕೂಡ ಅಂತ ಬರೆದುಕೊಂಡಿದ್ದಾರೆ.

ಸಂಜನಾ ಅತಿಕಿರಿಯ ವಯಸ್ಸಿನಲ್ಲೇ ಸಿನಿಮಾ ರಂಗಕ್ಕೆ ಕಾಲಿಟ್ಟರು. ಆದರೆ ಮದುವೆಯಾಗಿದ್ದು ಮಾತ್ರ 35ನೇ ವಯಸ್ಸಿಗೆ. ಗಂಡ ಹೆಂಡತಿ ಚಿತ್ರದ ಮೂಲಕ ಹಾಟ್ ಬೆಡಗಿಯಾದ ಸಂಜನಾ ಅಜೀಜ್ ಪಾಷಾ ಅವರನ್ನು ವರಿಸಿದರು. ಇವರು ಮದುವೆಯಾಗಿರುವ ವಿಚಾರ ಎಷ್ಟೋ ವರ್ಷಗಳ ನಂತರ ತಿಳಿದದ್ದು. ಈ ವಿಚಾರವನ್ನು ಸಂಜನಾ ಬಹಳ ಗುಪ್ತವಾಗಿ ಇಟ್ಟಿದ್ದರು.

ಮುಸ್ಲಿಂ ಹಾಗೂ ಹಿಂದೂ ಧರ್ಮವನ್ನು ಅನುಸರಿಸುತ್ತಿರುವ ಸಂಜನಾ ಈ ಬಗ್ಗೆ ಪೋಸ್ಟ್ ನಲ್ಲಿ ಹೀಗೆ ಬರೆದುಕೊಂಡಿದ್ದಾರೆ. ನಾನು ಜನಿಸಿದ್ದು ಹಿಂದುವಾಗಿ, ಮದುವೆಯಾಗಿದ್ದು ಮುಸ್ಲಿಂ ಕುಟುಂಬದವರನ್ನು. ಹೀಗಾಗಿ ಎರಡೂ ಧರ್ಮವನ್ನು ಖುಷಿಯಾಗಿ ಸ್ವೀಕರಿಸಿದ್ದೇನೆ. ಕಳೆದ ಎರಡು ವರ್ಷಗಳಿಂದ ಕಷ್ಟ ಮತ್ತು ಸವಾಲುಗಳನ್ನು ಎದುರಿಸಿದ್ದೇನೆ. ಈ ಸಂದರ್ಭದಲ್ಲಿ, ನನ್ನ ಮನಸ್ಸನ್ನು ಬೇರೆಡೆಗೆ ತಿರುಗಿಸಿಕೊಂಡಿದ್ದೆ. ಈಗ 18 ಕೆ.ಜಿ ತೂಗ ಹೆಚ್ಚಾಗಿರುವುದರಿಂದ ಬೆನ್ನು ನೋವು ಕಾಡುತ್ತಿದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : Raghu Shastri : ರನ್ ಆಂಟಿನಿ ನಂತರ ಶಾಸ್ತ್ರಿಗಳು ‘ಟಕ್ಕರ್’ ಕೊಡಲು ರೆಡಿ !!

ಇದನ್ನೂ ಓದಿ : Ramya Krishnan : 23 ವರ್ಷಗಳ ನಂತರ ರಜನಿಕಾಂತ್ ಜೊತೆ ರಮ್ಯಾ ಕೃಷ್ಣ ನಟನೆ!!

(Sanjana Galrani Baby Bump photo viral on social media)

Comments are closed.