ಪಡ್ಡೆ ಹುಡುಗರ ಹೃದಯಕ್ಕೆ ಕಿಚ್ಚಿಟ್ಟ ಅಗ್ನಿಸಾಕ್ಷಿಯ ಸನ್ನಿಧಿ !

0

ಕನ್ನಡ ಕಿರುತೆರೆಯಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರೋ ಅಗ್ನಿಸಾಕ್ಷಿ ಧಾರಾವಾಹಿ ಮುಗಿದು ಕೆಲವು ತಿಂಗಳೇ ಕಳೆದಿದೆ. ಆದ್ರೆ ಧಾರವಾಹಿಯಲ್ಲಿ ನಟಿಸಿದ್ದ ಸನ್ನಿಧಿ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾಳೆ. ತನ್ನ ನಟನೆಯಿಂದಲೇ ಸನ್ನಿಧಿಯಾಗಿ ನಟಿಸಿದ್ದ ವೈಷ್ಣವಿ ಗೌಡ ಇದೀಗ ಸಖತ್ ಬೋಲ್ಡ್ ಆಗಿರೊ ಪೋಟೋ ಶೂಟ್ ಮಾಡೋ ಮೂಲಕ ಪಡ್ಡೆ ಹೈಕಳ ಹೃದಯಕ್ಕೆ ಕಿಚ್ಚು ಹಚ್ಚಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರೀಯವಾಗಿ ಇರುತ್ತಿದ್ದ ವೈಷ್ಣವಿ..ಸದಾ ಸಾಂಪ್ರದಾಯಿಕ ಉಡುಗೆಗಳನ್ನೇ ಉಟ್ಟು ಅಭಿಮಾನಿಗಳ ಮುಂದೆ ಬರ್ತಿದ್ರು.

ಆದ್ರೀಗ ವೈಷ್ಣವಿ ತನ್ನ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಬೋಲ್ಡ್ ಆಂಡ್ ಬ್ಯೂಟಿಪುಲ್ ಪೋಟೋಗಳನ್ನು ಹರಿಬಿಟ್ಟಿದ್ದಾರೆ.

ಸುಮಾರು 1500 ಸಂಚಿಕೆಗಳನ್ನು ಪ್ರಸಾರ ಕಂಡಿದ್ದ ಅಗ್ನಿಸಾಕ್ಷಿ ಧಾರವಾಹಿಯ ನಂತರ ಕಿರುತೆರೆಯ ರಿಯಾಲಿಟಿ ಶೋನಲ್ಲಿ ಮಿಂಚಿದ್ದ ವೈಷ್ಣವಿ, ಗಿರ್ ಗಿಟ್ಲೆ ಸಿನಿಮಾದಲ್ಲಿಯೂ ನಟಿ ಸೈ ಎನಿಸಿಕೊಂಡಿದ್ದರು.

ಅಗ್ನಿಸಾಕ್ಷಿಯ ಸನ್ನಿಧಿಯಾಗಿ ವೈಷ್ಣವಿ ಕನ್ನಡಿಗರ ಮನೆಮಾತಾಗಿದ್ರು, ಸಿದ್ದಾರ್ಥ್ ಸನ್ನಿಧಿ ರೋಮ್ಯಾನ್ಸ್ ಜನರಿಗೆ ಸಖತ್ ಇಷ್ಟವಾಗಿತ್ತು.

ಅಗ್ನಿಸಾಕ್ಷಿ ಧಾರವಾಹಿ ಮುಗಿಯುತ್ತಿದ್ದಂತೆಯೇ ವೈಷ್ಣವಿಗೆ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರ್ತಿದೆ.

ಆದರೆ ಯಾವುದೇ ಧಾರವಾಹಿಗೂ ವೈಷ್ಣವಿ ಒಪ್ಪಿಕೊಳ್ಳುತ್ತಿಲ್ಲ. ಸದ್ಯ ಮಾಡೆಲಿಂಗ್ ನಲ್ಲಿ ಸಾಕಷ್ಟು ಬ್ಯೂಸಿಯಾಗಿದ್ದಾರೆ.

ಆಗಾಗ ಪೋಟೋ ಶೂಟ್ ಗಳನ್ನು ಮಾಡ್ತಿರೋ ವೈಷ್ಣವಿ ಇನ್ಸ್ಟಾಗ್ರಾಮ್ ನಲ್ಲಿ ಪೋಟೋ ಶೂಟ್ ಪೋಟೋಗಳನ್ನು ಶೇರ್ ಮಾಡ್ತಿದ್ದಾರೆ.

(ಚಿತ್ರಕೃಪೆ : ವೈಷ್ಣವಿ ಇನ್ಸ್ಟಾಗ್ರಾಮ್ )

Leave A Reply

Your email address will not be published.