1279 ದ್ವಿತೀಯ ದರ್ಜೆ ಹುದ್ದೆ ಸಹಾಯಕರ ಹುದ್ದೆ ಅರ್ಜಿ

0

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗವು ರಾಜ್ಯದ ವಿವಿಧ ಇಲಾಖೆಗಳಲ್ಲಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಖಾಲಿ ಉಳಿದಿರುವ 1,279 ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಕರ್ನಾಟಕ ಮೂಲವೃಂದದಲ್ಲಿ 1,080 ಹಾಗೂ ಹೈದ್ರಾಬಾದ್ ಕರ್ನಾಟಕ ವೃಂದದಲ್ಲಿ 199 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಆಸಕ್ತ ಅಭ್ಯರ್ಥಿಗಳು ಮಾರ್ಚ್ 9 ರಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಭರ್ತಿ ಮಾಡಬಹುದಾಗಿದೆ.

ವಿದ್ಯಾರ್ಹತೆ : ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ( ಅರ್ಜಿ ಸಲ್ಲಿಕೆಯ ವೇಳೆ ಈ ಬಗ್ಗೆ ಅಧಿಕೃತ ದಾಖಲೆಯನ್ನು ಅಪ್ ಮಾಡಬೇಕು. ಕನ್ನಡ ಮಾಧ್ಯಮ, ಗ್ರಾಮೀಣ ಮಾಧ್ಯಮ ಅಭ್ಯರ್ಥಿಗಳು ಪ್ರಮಾಣ ಪತ್ರ ಸಲ್ಲಿಸಬೇಕು)

ಅರ್ಜಿ ಶುಲ್ಕ: ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 635 ರೂ., ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 335 ರೂ. ಹಾಗೂ ಎಸ್ ಸಿ, ಎಸ್ ಟಿ, ಪಿಡಬ್ಲ್ಯು ಹಾಗೂ ಪ್ರವರ್ಗ-1ರ ಅಭ್ಯರ್ಥಿಗಳಿಗೆ 35 ರೂಪಾಯಿ ನಿಗದಿ ಪಡಿಸಲಾಗಿದೆ.

ವೇತನ ಶ್ರೇಣಿ : ದ್ವಿತೀಯ ದರ್ಜೆ ಸಹಾಯಕರು (21,400-42,000ರೂ.)

ಅರ್ಜಿ ಸಲ್ಲಿಕೆಗೆ ಆರಂಭ : ಮಾರ್ಚ್ 9
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : ಎಪ್ರಿಲ್ 9
ಶುಲ್ಕ ಪಾವತಿಸಲು ಕೊನೆಯ ದಿನಾಂಕ : ಎಪ್ರಿಲ್ 13

ಪರೀಕ್ಷಾ ದಿನಾಂಕಗಳು :
ಕಡ್ಡಾಯ ಕನ್ನಡ ಪರೀಕ್ಷೆ : ಜೂನ್ 6
ಸ್ಪರ್ಧಾತ್ಮಕ ಪರೀಕ್ಷೆ : ಜೂನ್ 7


ಹೆಚ್ಚಿನ ಮಾಹಿತಿಗಾಗಿ
http://www.kpsc.kar.nic.in/notification.html ಕ್ಲಿಕ್ ಮಾಡಿ

Leave A Reply

Your email address will not be published.