Scam 1770 Movie Teaser : ದಡ್ಡ ಪ್ರವೀಣ್‌ನ ಹೊಸ ಸಿನಿಮಾಕ್ಕೆ ಶುಭಕೋರಿದ ನಟ ರಿಷಬ್‌ ಶೆಟ್ಟಿ

ನಿರ್ದೇಶಕ ರಿಷಬ್‌ ಶೆಟ್ಟಿ ಕನ್ನಡ ಸಿನಿರಂಗದಲ್ಲಿ ಕಡಿಮೆ ಬಜೆಟ್‌ನಲ್ಲಿ ವಿಭಿನ್ನ ರೀತಿಯ ಕಂಟೆಂಟ್‌ ಇರುವ ಸಿನಿಮಾಗಳನ್ನು ತರುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲೂ ಶಾಲೆ ಮಕ್ಕಳನ್ನು ಇಟ್ಟುಕೊಂಡು ಮಾಡಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾ ಮೂಲಕ ಯಶಸ್ಸನ್ನು ಕಂಡಿದ್ದಾರೆ. ಕೇವಲ ೨ ಕೋಟಿ ಬಜೆಟ್‌ನಲ್ಲಿ ಮಾಡಿದ ಈ ಸಿನಿಮಾ ೩೫ಕೋಟಿ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಪಡೆಯುವ ಮೂಲಕ ಗೆಲುವನ್ನು ಸಾಧಿಸಿದೆ. ಈ ಸಿನಿಮಾದಲ್ಲಿ ಬರುವ ಪ್ರವೀಣನ ಪಾತ್ರಧಾರಿ ರಂಜನ್‌ ಅದ್ಭುತ ನಟನೆಯ ಮೂಲಕ ದಡ್ಡ ಪ್ರವೀಣ ಎಂದೇ ಗುರುತಿಸಿಕೊಂಡಿದ್ದಾರೆ. ಇದೀಗ ಬಾಲನಟ ರಂಜನ್‌ ಅಭಿನಯದ ಹೊಸ ಸಿನಿಮಾ ‘ಸ್ಕ್ಯಾಮ್‌ 1770’ ಟೀಸರ್‌ (Scam 1770 Movie Teaser) ಬಿಡುಗಡೆಯಾಗಿದ್ದು, ನಿರ್ದೇಶಕ ರಿಷಬ್‌ ಶೆಟ್ಟಿ ಶುಭ ಹಾರೈಸಿದ್ದಾರೆ.

ನಟ ರಿಷಬ್‌ ಶೆಟ್ಟಿ ತಮ್ಮ ಟ್ವಿಟರ್‌ನಲ್ಲಿ,”ನಮ್ಮ ದಡ್ಡ ಪ್ರವೀಣನ ಹೊಸ ಚಿತ್ರದ ಟೀಸರ್ ಇಲ್ಲಿದೆ. ‘ಸ್ಕ್ಯಾಮ್‌ 1770’ ತಂಡಕ್ಕೆ ಶುಭ ಹಾರೈಸುತ್ತೇನೆ.” ಎಂದು ಸಿನಿಮಾದ ಪೋಸ್ಟರ್‌ನ್ನು ಹಂಚಿಕೊಂಡಿದ್ದಾರೆ. ಟೀಸರ್‌ನಲ್ಲಿ ದಡ್ಡ ಪ್ರವೀಣ್‌ ವಿದ್ಯಾರ್ಥಿಯಾಗಿದ್ದು, ಯಾವುದೋ ಸ್ಕಾಮ್‌ನಲ್ಲಿ ತೊಡಗಿಕೊಂಡಿರುವುದನ್ನು ಬಿಂಬಿಸಿದ್ದಂತೆ ಇದೆ. ಈ ಸಿನಿಮಾ ಕೂಡ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಕಾಣುತ್ತಿದ್ದು, ಟೀಸರ್‌ ನೋಡಿದ ಪ್ರೇಕ್ಷಕರ ಕುತೂಹಲವನ್ನು ಕೆರಳಿಸಿದಂತೆ ಆಗಿದೆ.

ಸ್ಕ್ಯಾಮ್‌ 1770 ಸಿನಿಮಾ ಈಗಿನ ಶಿಕ್ಷಣ ವ್ಯವಸ್ಥೆ ಹಾಗೂ ವಿದ್ಯಾರ್ಥಿಗಳ ಕುರಿತಾದ ಕಥಾಹಂದರವನ್ನು ಒಳಗೊಂಡಿದೆ. ಈ ಸಿನಿಮಾ ಡಿ. ಕ್ರಿಯೇಷನ್ಸ್ ಲಾಂಛನದಲ್ಲಿ ದೇವರಾಜ್ ಆರ್ ನಿರ್ಮಾಣ ಹೊಣೆ ಹೊತ್ತಿದ್ದಾರೆ. ವಿಕಾಸ್ ಪುಷ್ಪಗಿರಿ ನಿರ್ದೇಶನ ಈ ಸಿನಿಮಾಕ್ಕೆ ಇದೆ. ಇದೊಂದು ಪ್ರಸ್ತುತ ಶಿಕ್ಷಣ ವ್ಯವಸ್ಥೆ ಆಧಾರಿತ ಸಿನಿಮಾವಾಗಿದೆ. ಸತ್ಯ ಘಟನೆಗಳನ್ನು ಕಟ್ಟಿಕೊಂಡು ವಾಸ್ತವದಲ್ಲಿ ಏನೆಲ್ಲಾ ನಡೆಯುತ್ತಿದೆ ಎಂಬ ವಿಚಾರವನ್ನು ಇಟ್ಟುಕೊಂಡು ಮಾಡಿರುವ ಸಿನಿಮಾ ಇದಾಗಿದೆ. ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಣ ಸಂಸ್ಥೆ ನಡೆಸುತ್ತಿರುವವರು ನೋಡಬೇಕಾದ ಸಿನಿಮಾವಾಗಿದೆ

ಇತ್ತೀಚೆಗೆಷ್ಟೇ ಡಿ. ಕ್ರಿಯೇಷನ್ಸ್ ಆಕ್ಟ್-1978 ಮತ್ತು 19.20.21 ಎಂಬ ಸಿನಿಮಾಗಳನ್ನು ನೀಡಿದ್ದು, ದೇವರಾಜ್ ಆರ್ ಅವರ ನಿರ್ಮಾಣದ ಈ ಸಿಇಮಾಕ್ಕೆ ಡಾ. ಇಂದು ನಟೇಶ್ ಹಾಗೂ ನೇತ್ರಾವತಿ (ಅಡ್ವೊಕೇಟ್) ಕಥೆ ಬರೆದಿದ್ದಾರೆ. ಚಿತ್ರಕಥೆಯನ್ನು ಶಂಕರ್ ರಾಮನ್ ಹಾಗೂ ವಿಕಾಸ್ ಪುಷ್ಪಗಿರಿ ಬರೆದಿದ್ದಾರೆ. ಇನ್ನು ಈ ಸಿನಿಮಾಕ್ಕೆ ಸಂಭಾಷಣೆ ಶಂಕರ್ ರಾಮನ್ ನೀಡಿದ್ದಾರೆ. ಸತೀಶ್ ಆರ್ಯನ್ ಸಂಗೀತ ನಿರ್ದೇಶನ, ಶೋಯೆಬ್ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ಕಲೈ – ರಾಮು ನೃತ್ಯ ನಿರ್ದೇಶನ ಹಾಗೂ ಚಂದ್ರು ಬಂಡೆ ಸಾಹಸ ನಿರ್ದೇಶನವಿದೆ.

ಇದನ್ನೂ ಓದಿ : ನಟ ಚೇತನ್ ವೀಸಾ ರದ್ದು ಮಾಡಿದ ಕೇಂದ್ರ ಸರಕಾರ

ಇದನ್ನೂ ಓದಿ : ಸ್ಯಾಂಡಲ್‌ವುಡ್‌ ನಟಿ ಮಾನ್ವಿತಾ ಕಾಮತ್‌ಗೆ ಮಾತೃವಿಯೋಗ

ಈ ಸಿನಿಮಾದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿನಿಮಾದ ಖ್ಯಾತಿಯ ರಂಜನ್(ದಡ್ಡ ಪ್ರವೀಣ), ಬಿ.ಸುರೇಶ್, ಅವಿನಾಶ್, ಶ್ರೀನಿವಾಸಪ್ರಭು, ರಮೇಶ್ ಪಂಡಿತ್, ರಾಘು ಶಿವಮೊಗ್ಗ, ನಾರಾಯಣ ಸ್ವಾಮಿ, ಉಗ್ರಂ ಸಂದೀಪ್, ಹರಿಣಿ, ಹಂಸ, ಸುನೇತ್ರ ಪಂಡಿತ್, ಶೃತಿ ನಾಯಕ್ ಮುಂತಾದವರು ಈ ಸಿನಿಮಾದ ಬಹು ತಾರಾಬಳಗದಲ್ಲಿದ್ದಾರೆ.

Scam 1770 Movie Teaser : Actor Rishabh Shetty Wishes Dadda Praveen’s New Movie

Comments are closed.