Murder and Suicide case: ಅಕ್ರಮ ಸಂಬಂಧ ಶಂಕೆ : ಪತ್ನಿ, ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಕಾನ್ಪುರ : (Murder and Suicide case) ಪತ್ನಿ ಬೇರೊಬ್ಬ ವ್ಯಕ್ತಿಯ ಜೊತೆಗೆ ವಿವಾಹೇತರ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಪತ್ನಿ ಹಾಗೂ ತನ್ನ ಇಬ್ಬರು ಮಕ್ಕಳನ್ನು ಕೊಲೆಗೈದು ನಂತರ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾನ್ಪುರ ದೇಹತ್ ಪ್ರದೇಶದಲ್ಲಿ ನಡೆದಿದೆ.

ಗುಜರಾತ್‌ನ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಇಂದ್ರಪಾಲ್ ನಿಶಾದ್ (40 ವರ್ಷ) ಎಂಬ ವ್ಯಕ್ತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತನ ಪತ್ನಿ, ಮಗ ಮತ್ತು ಮಗಳು ಶನಿವಾರ ಸಂಜೆ ಅವರ ದೇಹದ ಮೇಲೆ ತೀವ್ರವಾಗಿ ಗಾಯಗೊಂಡು ಶವವಾಗಿ ಪತ್ತೆಯಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೊಲೆ ಮತ್ತು ಆತ್ಮಹತ್ಯೆಯ ಬಗ್ಗೆ ಮಾಹಿತಿ ಪಡೆದ ನಂತರ, ಇನ್ಸ್‌ಪೆಕ್ಟರ್ ಜನರಲ್ (ಕಾನ್ಪುರ ವ್ಯಾಪ್ತಿ) ಪ್ರಶಾಂತ್ ಕುಮಾರ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ (ಕಾನ್ಪುರ್ ದೇಹತ್) ಬಿಬಿಜಿಟಿಎಸ್ ಮೂರ್ತಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಘಟನೆಯ ವೈಜ್ಞಾನಿಕ ಪುರಾವೆಗಳನ್ನು ಸಂಗ್ರಹಿಸಲು ವಿಧಿವಿಜ್ಞಾನ ತಜ್ಞರನ್ನು ಸಹ ಕರೆಯಲಾಗಿದೆ.

ಎರಡು ದಿನಗಳ ಹಿಂದೆ ಗುಜರಾತ್‌ನಿಂದ ಮನೆಗೆ ಮರಳಿದ ಇಂದ್ರಪಾಲ್ ನೇಣು ಬಿಗಿದುಕೊಳ್ಳುವ ಮೊದಲು ತನ್ನ ಹೆಂಡತಿ ಮತ್ತು ಮಕ್ಕಳನ್ನು ಹೊಡೆದು ಕೊಂದಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶುಕ್ರವಾರ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲಿ ಲೈವ್ ವಿಡಿಯೋ ಮಾಡಿದ್ದು, ಅದರಲ್ಲಿ ತನ್ನ ಪತ್ನಿ ಬೇರೊಬ್ಬ ಪುರುಷನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸಿದ್ದಾನೆ ಎಂದು ಐಜಿ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ : Bhaskar Reddy Arrested : ಮಾಜಿ ಸಂಸದನ ಹತ್ಯೆ ಪ್ರಕರಣ : ಆಂಧ್ರ ಸಿಎಂ ಜಗಮೋಹನ್‌ ರೆಡ್ಡಿ ಚಿಕ್ಕಪ್ಪ ಭಾಸ್ಕರ್ ರೆಡ್ಡಿ ಅರೆಸ್ಟ್‌

ಇದನ್ನೂ ಓದಿ : Mumbai accident : ಭೀಕರ ಬಸ್‌ ಅಪಘಾತ : 12 ಮಂದಿ ಸಾವು, 27 ಮಂದಿಗೆ ಗಾಯ

ಇದೀಗ ಮೂರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ : ದೇವನಹಳ್ಳಿ : ಮಾಜಿ ಶಾಸಕ ವೆಂಕಟಸ್ವಾಮಿ ಹೃದಯಾಘಾತದಿಂದ ಸಾವು

Murder and Suicide case: Suspected of illicit relationship: A man committed suicide after killing his wife and children

Comments are closed.