ಇವರೇ ನೋಡಿ ಜ್ಯೂನಿಯರ್ ಚಿರು ಬೆಸ್ಟ್ ಫ್ರೆಂಡ್ ; ಮೇಘನಾ ರಿವೀಲ್ ಮಾಡಿದ್ರು ಸ್ಪೆಶಲ್ ಪೋಟೋ

ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್ ಪುತ್ರ ಜ್ಯೂನಿಯರ್ ಚಿರು 9 ತಿಂಗಳನ್ನು ದಾಟಿ 10 ನೇ ತಿಂಗಳಿಗೆ ಕಾಲಿರಿಸಿದ್ದು ಈ ಖುಷಿ ಜೊತೆ ಮೇಘನಾ ರಾಜ್‌ ಸ್ಪೆಶಲ್ ಪೋಟೋ ಶೇರ್ ಮಾಡಿದ್ದಾರೆ.

ನಟಿ ಮೇಘನಾ ರಾಜ್ ಸದಾ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರೋದಲ್ಲದೇ ತಮ್ಮ ಮಗನ ಬಗ್ಗೆ ಸದಾ ಅಪ್ಡೇಟ್ ಕೊಡುತ್ತಿರುತ್ತಾರೆ. ಇಂದು 10 ನೇ ತಿಂಗಳಿಗೆ ಕಾಲಿಟ್ಟಿರೋ ಮಗನ ಪೋಟೋ ಹಂಚಿಕೊಂಡಿರೋ ಮೇಘನಾ ಮಗನ ಬೆಸ್ಟ್ ಪ್ರೆಂಡ್ ಯಾರು ಎಂಬುದನ್ನು ರಿವೀಲ್ ಮಾಡಿದ್ದಾರೆ.

ಚ್ಯಾಂಪ್ ದಿ ಚಿಂಪ್ ಎಂಬ ಹೆಸರಿನ ಮುದ್ದಾದ ಕೋತಿ ತನ್ನ ಮಗನ ಬೆಸ್ಟ್ ಪ್ರೆಂಡ್ ಎಂಬ ಸಂಗತಿಯನ್ನು ಮೇಘನಾ ರಿವೀಲ್ ಮಾಡಿದ್ದು ಮಗ ಹಾಗೂ ಕೋತಿಯ ಜೊತೆಗಿನ ಪೋಟೋ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ ಈ ಪೋಟೋದಲ್ಲಿ ಮೇಘನಾ ರಾಜ್ ಹಾಗೂ ಆಕೆಯ ಪುತ್ರ ಜ್ಯೂನಿಯರ್ ಚಿರು ಒಂದೇ ರೀತಿಯ ಬಟ್ಟೆ ಧರಿಸಿ ಗಮನಸೆಳೆದಿದ್ದಾರೆ.

ಇತ್ತೀಚಿಗಷ್ಟೇ ಮೇಘನಾ ಆಕ್ಟಿಂಗ್ ಗೆ ಕಮ್ ಬ್ಯಾಕ್ ಮಾಡಿದ್ದು ಜಾಹೀರಾತಿಗಾಗಿ‌ ಬಣ್ಣ ಹಚ್ಚಿದ್ದಾರೆ. ಅಲ್ಲದೇ ಸದ್ಯದಲ್ಲೇ ಮಲೆಯಾಳಂ ಸಿನಿಮಾ‌ಮೂಲಕ ಮತ್ತೆ ಕೆರಿಯರ್ ಆರಂಭ ಮಾಡಲಿದ್ದು ಕನ್ನಡದಲ್ಲಿಯೂ ಎರಡು ಕತೆ ಕೇಳಿದ್ದಾರಂತೆ. ಒಟ್ಟಿನಲ್ಲಿ ರಕ್ಷಾಬಂಧನದ ಸಂಭ್ರಮ ಹೆಚ್ಚಿಸುವಂತೆ ನಟಿ ಮೇಘನಾ ರಾಜ್ ತಮ್ಮ ಸೋಷಿಯಲ್ ಪೋಸ್ಟ್ ಹಾಕಿದ್ದಾರೆ.

ಇದನ್ನೂ ಓದಿ : KGF 2 : ಕೆಜಿಎಫ್‌ 2 ಬಿಡುಗಡೆ ಮುಹೂರ್ತ ಫಿಕ್ಸ್‌ : ಎಪ್ರಿಲ್‌ನಲ್ಲಿ ತೆರೆಗೆ ಬರುತ್ತೆ ಸಿನಿಮಾ

ಇದನ್ನೂ ಓದಿ : Jacqueline fernandez: ದೇಸಿ ಕಾಸ್ಟ್ಯೂಮ್ ನಲ್ಲಿ ವಿದೇಶಿ ಚೆಲುವೆ: ಪಡ್ಡೆ ಹೈಕಳ ನಿದ್ದೆ ಕದ್ದ ಜಾಕ್ವಲಿನ್ ಹಾಟ್ ಅವತಾರ!

Comments are closed.