ಮೊದಲ ದಿನವೇ 5 ಕೋಟಿ ರೂ. ಭರ್ಜರಿ ಕಲೆಕ್ಷನ್ ಕಂಡ ಸಮಂತಾ ಅಭಿನಯದ ಶಾಕುಂತಲಂ

ನಟಿ ಸಮಂತಾ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಶಾಕುಂತಲಂ (Shaakuntalam box office collection) ನಿನ್ನೆ (ಏಪ್ರಿಲ್ 14) ರಂದು ಸಿನಿಮಂದಿರಗಳಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾವು ಕಾಳಿದಾಸನ ಅಭಿಜ್ಞಾನಶಾಕುಂತಲಂ ಕಥೆಯಿಂದ ಸ್ಫೂರ್ತಿ ಪಡೆದಿದೆ. ಶಾಕುಂತಲಂ ಸಿನಿಮಾವು ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆಯೊಂದಿಗೆ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ತೆರೆದುಕೊಂಡಿದೆ. ಶಾಕುಂತಲಂ ಸಿನಿಮಾ ಪ್ರಾರಂಭದಲ್ಲಿ ನಿಧಾನಗತಿ ಕಂಡಿದ್ದು, ವರದಿಗಳ ಪ್ರಕಾರ, ಶಾಕುಂತಲಂ ಸಿನಿಮಾವು ಮೊದಲ ದಿನದ ಬಾಕ್ಸ್ ಆಫೀಸ್‌ನಲ್ಲಿ 5 ಕೋಟಿ ರೂ ಕಲೆಕ್ಷನ್‌ ಗಳಿಸಿದೆ.

ನಟಿ ಸಮಂತಾ ಬಹಳ ಸಮಯದಿಂದ ಅನಾರೋಗದಿಂದ ಬಳಲುತ್ತಿದ್ದು, ಈ ನಡುವೇ ಕೂಡ ತಮ್ಮನ್ನು ತಾವು ಸಿನಿಮಾದಲ್ಲಿ ತೊಡಗಿಸಿಕೊಂಡು ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ. ನಟಿ ಸಮಂತಾ ಅಭಿನಯದ ಶಾಕುಂತಲಂ ತೆಲುಗು, ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಬೆಳ್ಳಿ ಪರದೆಗಳಲ್ಲಿ ಬಿಡುಗಡೆಯಾಗಿದೆ. ಆದರೆ, ಸಿನಿಮಾವು ತನ್ನ ಮೊದಲ ದಿನದಲ್ಲಿ ಹೆಚ್ಚಿನ ಸಿನಿಪ್ರೇಕ್ಷಕರನ್ನು ಸೆಳೆಯುವಲ್ಲಿ ಸೋಲನ್ನು ಕಂಡಿದೆ. ಆದರೆ ಎಲ್ಲಾ ಭಾಷೆಗಳಲ್ಲಿ ಒಟ್ಟು 5 ಕೋಟಿ ರೂ. ಗಳಿಕೆ ಕಂಡಿದೆ. ತೆಲುಗು ರಾಜ್ಯಗಳಲ್ಲಿ ಶಾಕುಂತಲಂ ಒಟ್ಟಾರೆ ಶೇ.32.60 ರಷ್ಟು ಓಪನಿಂಗ್‌ನ್ನು ಪಡೆದುಕೊಂಡಿದೆ.

ಇದನ್ನೂ ಓದಿ : ರಮೇಶ್‌ ಅರವಿಂದ್‌ ಅಭಿನಯದ ಶಿವಾಜಿ ಸುರತ್ಕಲ್‌ 2 ಬಿಡುಗಡೆ

ಇದನ್ನೂ ಓದಿ : ಶ್ರೀಲಂಕಾದಲ್ಲಿ ಶೂಟಿಂಗ್‌ನಲ್ಲಿ ಬ್ಯುಸಿಯಾದ ಕೆಜಿಎಫ್ ಸ್ಟಾರ್ ನಟ ಯಶ್

ಶಾಕುಂತಲಂ ಎಂಬುದು ತೆಲುಗು ಪೌರಾಣಿಕ ಕಥಾಹಂದರವಾಗಿದ್ದು ಗುಣಶೇಖರ್ ಬರೆದು ನಿರ್ದೇಶಿಸಿದ್ದಾರೆ. ಇದನ್ನು ಗುನಾ ಟೀಮ್‌ವರ್ಕ್ಸ್ ಅಡಿಯಲ್ಲಿ ನೀಲಿಮಾ ಗುಣ ನಿರ್ಮಿಸಿದ್ದಾರೆ ಮತ್ತು ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ವಿತರಿಸಿದ್ದಾರೆ. ಕಾಳಿದಾಸನ ಜನಪ್ರಿಯ ನಾಟಕ ಅಭಿಜ್ಞಾನ ಶಾಕುಂತಲಂ ಆಧರಿಸಿದ ಈ ಸಿನಿಮಾದಲ್ಲಿ ಸಮಂತಾ ಶಕುಂತಲಾ ಮತ್ತು ದೇವ್ ಮೋಹನ್ ಪುರು ವಂಶದ ರಾಜ ದುಷ್ಯಂತ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಮೋಹನ್ ಬಾಬು, ಜಿಶು ಸೇನ್‌ಗುಪ್ತ, ಮಧು, ಗೌತಮಿ, ಅದಿತಿ ಬಾಲನ್ ಮತ್ತು ಅನನ್ಯ ನಾಗಲ್ಲ ಒಳಗೊಂಡ ಬಹುತಾರಂಗಣ ಒಳಗೊಂಡಿದೆ.

ಇದನ್ನೂ ಓದಿ : ರಾಜಕೀಯ ಸೇರ್ಪಡೆ ವಿಚಾರ : ರಾಜಕೀಯ ಬಣ್ಣ ಬೇಡ, ಸ್ಪಷ್ಟನೆ ನೀಡಿದ ನಟ ರಿಷಬ್‌ ಶೆಟ್ಟಿ

Shaakuntalam box office collection: Rs 5 crore on the first day. Samantha starrer Shakunthalam saw huge collection

Comments are closed.