Shah Rukh Khan: ಮುಂಬೈ ಏರ್ ಪೋರ್ಟ್ ನಲ್ಲಿ ಶಾರುಖ್ ಖಾನ್ ವಶಕ್ಕೆ; ಕಿಂಗ್ ಖಾನ್ ಬಳಿ ಸಿಕ್ಕಿದ್ದೇನು ಗೊತ್ತಾ

ಮುಂಬೈ: Shah Rukh Khan: ಬಾಲಿವುಡ್ ಬಾದ್ ಶಾ, ಕಿಂಗ್ ಖಾನ್ ಶಾರುಖ್ ಖಾನ್ ಅವರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ತಡೆಹಿಡಿದಿರುವ ಘಟನೆ ನಡೆದಿದೆ. ಇದಕ್ಕೆ ಕಾರಣ ಶಾರುಖ್ ಖಾನ್ ಅವರ ಲಗೇಜ್ ನಲ್ಲಿದ್ದ ಹಲವಾರು ಬೆಲೆಬಾಳುವ ವಾಚುಗಳು ಎನ್ನಲಾಗಿದೆ.

ಇದನ್ನೂ ಓದಿ: Bipasha Basu :ಹೆಣ್ಣುಮಗುವಿಗೆ ಜನ್ಮ ನೀಡಿದ 43ರ ಹರೆಯದ ಬಾಲಿವುಡ್ ನಟಿ ಬಿಪಾಶಾ ಬಸು

ಶಾರುಖ್ ಖಾನ್ ಅವರ ಶುಕ್ರವಾರ (ನ.11) ರಾತ್ರಿ ಶಾರ್ಜಾದಿಂದ ಖಾಸಗಿ ಜೆಟ್ ನಲ್ಲಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 3ನಲ್ಲಿ ಬಂದು ಇಳಿದಿದ್ದರು. ಕಿಂಗ್ ಖಾನ್ ಮತ್ತು ಅವರ ಜೊತೆಗಿದ್ದವರು ಟರ್ಮಿನಲ್ ನಿಂದ ತೆರಳುತ್ತಿದ್ದ ಸಂದರ್ಭದಲ್ಲಿ ಸುಂಕಾಧಿಕಾರಿಗಳು ಅವರ ಲಗೇಜುಗಳನ್ನು ಪರಿಶಿಲಿಸಿದ್ದಾರೆ. ಆಗ ಅವರಿಗೆ ದುಬಾರಿ ಬೆಲೆಯ 6 ವಾಚುಗಳು ಸಿಕ್ಕಿವೆ. ಇದರ ಬೆಲೆ 18 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ದುಬಾರಿ ಬೆಲೆಯ ವಾಚುಗಳಿಗಾಗಿ ಅವರು ಸುಂಕ ಪಾವತಿ ಮಾಡಬೇಕಿತ್ತು. ಹೀಗಾಗಿ ಕಸ್ಟಮ್ಸ್ ಅಧಿಕಾರಿಗಳು ಅವರನ್ನು ಕೆಲ ಗಂಟೆಗಳ ಕಾಲ ತಡೆದು ನಿಲ್ಲಿಸಿದ್ದಾರೆ. ಕೊನೆಗೆ ಅವರಿಂದ 6.83 ಲಕ್ಷ ರೂ. ಕಸ್ಟಮ್ಸ್ ಸುಂಕವನ್ನು ಅಧಿಕಾರಿಗಳು ಸಂಗ್ರಹಿಸಿದ್ದಾರೆ.

ಕಸ್ಟಮ್ಸ್ ಪ್ರಕ್ರಿಯೆಯ ಬಳಿಕ ಶಾರುಖ್ ಖಾನ್ ಮತ್ತು ಅವರ ಮ್ಯಾನೇಜರ್ ಅವರನ್ನು ಅದೇ ರಾತ್ರಿಯೇ ಮನೆಗೆ ತೆರಳಲು ಅನುಮತಿ ನೀಡಲಾಯಿತು. ಆದರೆ ಖಾನ್ ಅವರ ಅಂಗರಕ್ಷಕ ಸೇರಿದಂತೆ ಅವರ ಜೊತೆ ಪ್ರಯಾಣಿಸಿದ್ದ ಕೆಲವರನ್ನು ವಿಚಾರಣೆಗಾಗಿ ರಾತ್ರಿ ಅಲ್ಲಿಯೇ ಉಳಿಸಿಕೊಳ್ಳಲಾಗಿತ್ತು. ಬಳಿಕ ಇಂದು ಮುಂಜಾನೆ ಅಲ್ಲಿಂದ ತೆರಳಲು ಅನುಮತಿ ನೀಡಲಾಗಿತ್ತು.

ಇದನ್ನೂ ಓದಿ: Youtube medicine: ಯೂಟ್ಯೂಬ್ ನೋಡಿ ಮನೆಯಲ್ಲೇ ಔಷಧಿ ಮಾಡಿ ಕುಡಿಯುವ ಮುನ್ನ ಈ ಸ್ಟೋರಿ ಓದಲೇಬೇಕು..

ಗುರುವಾರ(ನ.10)ರಂದು ಶಾರ್ಜಾದಲ್ಲಿ “ಶಾರ್ಜಾ ಇಂಟರ್ ನ್ಯಾಷನಲ್ ಬುಕ್ ಫೇರ್-2022 ” ಕಾರ್ಯಕ್ರಮದಲ್ಲಿ ಶಾರುಖ್ ಅವರಿಗೆ ಪ್ರಶಸ್ತಿ ಪ್ರದಾನ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಭಾಗಿಯಾಗುವ ಸಲುವಾಗಿ ಶಾರುಖ್ ಖಾನ್ ಶಾರ್ಜಾಗೆ ತೆರಳಿದ್ದರು. ಅಂತಾರಾಷ್ಟ್ರೀಯ ಚಿತ್ರರಂಗಕ್ಕೆ ಅವರ ಕೊಡುಗೆಯನ್ನು ಗಮನಿಸಿ ಶಾರುಖ್ ಖಾನ್ ಅವರಿಗೆ ‘ಗ್ಲೋಬಲ್ ಐಕಾನ್ ಆಫ್ ಸಿನಿಮಾ ಮತ್ತು ಕಲ್ಚರಲ್ ನರೇಟಿವ್ ಅವಾರ್ಡ್’ ಅನ್ನು ನೀಡಿ ಗೌರವಿಸಲಾಗಿದೆ.

Shah Rukh Khan: Shah Rukh Khan stopped by customs officials at Mumbai airport, made to pay Rs 6.83 lakh penalty for carrying expensive watches

Comments are closed.