Rajiv Gandhi assassination: 3 ದಶಕಗಳ ಬಳಿಕ ರಾಜೀವ್ ಗಾಂಧಿ ಹಂತಕರಿಗೆ ಬಿಡುಗಡೆ ಭಾಗ್ಯ: ನಳಿನಿ ಶ್ರೀಹರನ್ ಏನಂದ್ರು ಗೊತ್ತಾ

ಚೆನ್ನೈ: Rajiv Gandhi assassination: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಆರು ಮಂದಿಯನ್ನು ಸುಪ್ರೀಂಕೋರ್ಟ್ ಆದೇಶದಂತೆ ಇಂದು ಬಿಡುಗಡೆಗೊಳಿಸಲಾಗಿದೆ. ನಳಿನಿ ಶ್ರೀಹರನ್, ಆಕೆಯ ಪತಿ ಮುರುಗನ್, ಸಂತನ್, ರಾಬರ್ಟ್ ಪಯಾಸ್ ಮತ್ತು ಜಯಕುಮಾರ್ ಈ ಆರು ಮಂದಿಯನ್ನು ತಮಿಳುನಾಡು ಜೈಲುಗಳಿಂದ ಬಂಧಮುಕ್ತಗೊಳಿಸಲಾಗಿದೆ.

ನಿನ್ನೆಯಷ್ಟೆ ಈ ಆರು ಮಂದಿಯನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ಆದೇಶ ಹೊರಡಿಸಿತ್ತು. ಶಿಕ್ಷೆ ಅನುಭವಿಸಿ ಜೈಲಿನಿಂದ ಹೊರಬಂದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಪ್ರಮುಖ ಅಪರಾಧಿ ನಳಿನಿ ಶ್ರೀಹರನ್, ‘ಜೈಲಿನಿಂದ ಹೊರಬಂದಿರುವುದು ನನಗೆ ಹೊಸ ಜೀವನ ಸಿಕ್ಕಂತಾಗಿದೆ. ತಾನು ಸಾರ್ವಜನಿಕ ಜೀವನದಲ್ಲಿ ಇರುವುದಿಲ್ಲ. 30ಕ್ಕೂ ಅಧಿಕ ವರ್ಷಗಳಿಂದ ನನಗೆ ಬೆಂಬಲ ನೀಡಿದ ತಮಿಳು ಜನರಿಗೆ ಹಾಗೆಯೇ ಕೇಂದ್ರ, ರಾಜ್ಯ ಸರ್ಕಾರಗಳಿಗೂ ಧನ್ಯವಾದ ತಿಳಿಸುತ್ತೇನೆ’ ಎಂದರು.

ಇದನ್ನೂ ಓದಿ: Shah Rukh Khan: ಮುಂಬೈ ಏರ್ ಪೋರ್ಟ್ ನಲ್ಲಿ ಶಾರುಖ್ ಖಾನ್ ವಶಕ್ಕೆ; ಕಿಂಗ್ ಖಾನ್ ಬಳಿ ಸಿಕ್ಕಿದ್ದೇನು ಗೊತ್ತಾ

ಈ ಪ್ರಕರಣದಲ್ಲಿ ನಳಿನಿ ಶ್ರೀಹರನ್, ಮುರುಗನ್, ಸಂತನ್, ಎಜಿ ಪೆರಾರಿವಾಲನ್, ಜಯಕುಮಾರ್, ರಾಬರ್ಟ್ ಪಯಸ್ ಮತ್ತು ಪಿ ರವಿಚಂದ್ರನ್ ಎಂಬ 7 ಮಂದಿ ಅಪರಾಧಿಗಳು ಜೈಲು ಸೇರಿದ್ದರು. ಎಲ್ಲಾ ಆರೋಪಿಗಳು 30 ವರ್ಷಕ್ಕೂ ಹೆಚ್ಚು ಬಾರಿ ಜೈಲು ಶಿಕ್ಷೆಯನ್ನು ಅನುಭವಿಸಿದ್ದಾರೆ. ಆದರೆ ಈ ವರ್ಷ ಮೇ ತಿಂಗಳಲ್ಲಿ ಸುಪ್ರಿಂ ಕೋರ್ಟ್‌ ಪೆರಾರಿವಾಲನ್‌ನ್ನು ಜೈಲಿನಿಂದ ಬಿಡುಗಡೆ ಮಾಡಲು ಸಂವಿಧಾನದ 142ನೇ ವಿಧಿಯ ಅಡಿಯಲ್ಲಿ ತನ್ನ ವಿಶೇಷ ಅಧಿಕಾರವನ್ನು ಬಳಸಿ ಬಿಡುಗಡೆಗೊಳಿಸಿತ್ತು. ಆದರೆ ಉಳಿದ 6 ಅಪರಾಧಿಗಳು ತಮಿಳುನಾಡಿನ ಜೈಲುಗಳಲ್ಲಿ ಶಿಕ್ಷೆಯನ್ನು ಅನುಭವಿಸುತ್ತಿದ್ದರು.

ರಾಜೀವ್ ಗಾಂಧಿ ಹತ್ಯೆ ಪ್ರಕರಣ :

1991ರಲ್ಲಿ ಶ್ರೀ ಪೆರಂಬದೂರಿನಲ್ಲಿ ಚುನಾವಣಾ ರಾಲಿಯಲ್ಲಿ ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಆತ್ಮಹತ್ಯಾ ಬಾಂಬರ್‌ನಿಂದ ಹತ್ಯೆ ಮಾಡಲಾಗಿತ್ತು. ಎಲ್‌ಟಿಟಿಇ ಗುಂಪಿನ ಮಹಿಳಾ ಆತ್ಮಾಹುತಿ ಬಾಂಬರ್ ಧನು (ಅಲಿಯಾಸ್) ತೇನ್ಮೋಳಿ ರಾಜರತ್ನಂ ರಾಜೀವ್ ಗಾಂಧಿಯವರ ಪಾದಗಳನ್ನು ಸ್ಪರ್ಶಿಸಲು ಬಾಗಿದಾಗ ಸ್ಫೋಟಕವನ್ನು ಹೊತ್ತ ಬೆಲ್ಟ್ ಸ್ಫೋಟಿಸಿದರು. ಶ್ರೀಪೆರಂಬದೂರಿನಲ್ಲಿ ನಡೆದ ಬಾಂಬ್ ದಾಳಿಯಲ್ಲಿ ರಾಜೀವ್ ಗಾಂಧಿಯವರೊಂದಿಗೆ ಇತರ 14 ಮಂದಿ ಸಹ ಸಾವನ್ನಪ್ಪಿದ್ದರು.

ಇದನ್ನೂ ಓದಿ: Karnataka MLA Election 2023 : ಬೈಂದೂರಲ್ಲಿ ಗೋಪಾಲ ಪೂಜಾರಿ Vs ಡಾ.ಗೋವಿಂದ ಬಾಬು ಪೂಜಾರಿ ಕದನ

1998ರಲ್ಲಿ ಪೆರಾರಿವಾಲನ್ ಮತ್ತು ನಳಿನಿ ಸೇರಿದಂತೆ 26 ಆರೋಪಿಗಳಿಗೆ ಟಾಡಾ ನ್ಯಾಯಾಲಯವು ಹತ್ಯೆಯಲ್ಲಿ ಅವರ ಪಾತ್ರಕ್ಕಾಗಿ ಶಿಕ್ಷೆಯನ್ನು ವಿಧಿಸಿತ್ತು. ನಂತರ ಕೆಲವು ಆರೋಪಿಗಳಿಗೆ ಮರಣದಂಡನೆ ವಿಧಿಸಲಾಗಿತ್ತು. ಆದರೆ ಎಸ್‌ಸಿ 2014ರಲ್ಲಿ ಅಪರಾಧಿಗಳ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಲಾಗಿತ್ತು. ಉಪಶಮನದ ಶಿಕ್ಷೆಯ ನಂತರ ಪೆರಾರಿವಾಲನ್ ಜೈಲಿನಿಂದ ಬೇಗನೆ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು. ತಮಿಳುನಾಡಿನ ಮಾಜಿ ಮುಖ್ಯಮಂತ್ರಿಗಳಾದ ಜಯಲಲಿತಾ ಮತ್ತು ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ಏಳು ಅಪರಾಧಿಗಳ ಬಿಡುಗಡೆಗೆ ಶಿಫಾರಸು ಮಾಡಿದ್ದರು. ಟಿಎನ್ ಸಿಎಂ ಸ್ಟಾಲಿನ್ ಕೂಡ ಅಪರಾಧಿಗಳನ್ನು ಬಿಡುಗಡೆ ಮಾಡುವಂತೆ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದರು.

Rajiv Gandhi assassination: Nalini, 5 other convicts walk out of jail after three decades

Comments are closed.