ಅಪಘಾತಕ್ಕೂ ಮುನ್ನ ಮಾಜಿಸಚಿವರ ಮಗನ ಮನೆಯಲ್ಲಿ ಪಾರ್ಟಿ : ಜಾಲಿರೈಡ್ ಬಗ್ಗೆ ನಟಿ ಶರ್ಮಿಳಾ ಮಾಂಡ್ರೆ ಹೇಳಿದ್ದೇನು ಗೊತ್ತಾ ?

0

ಬೆಂಗಳೂರು : ಕೊರೊನಾ ಹಿನ್ನೆಲೆ ದೇಶದಾದ್ಯಂತ ಲಾಕ್ ಡೌನ್ ಜಾರಿಯಲ್ಲಿದೆ. ಸೆಲೆಬ್ರಿಟಿಗಳು ಸ್ಟೇ ಹೋಮ್ ಅಂತಾ ಸಂದೇಶ ನೀಡುತ್ತಿದ್ದಾರೆ.

ಕೇಂದ್ರ ಸರಕಾರದ ಆದೇಶವನ್ನು ಪಾಲನೆ ಮಾಡುತ್ತಿದ್ದಾರೆ. ಆದರೆ ಸ್ಯಾಂಡಲ್ ವುಡ್ ನಟಿ ಶರ್ಮಿಳಾ ಮಾಂಡ್ರೆ ಜಾಲಿರೈಡ್ ಮಾಡೋದಕ್ಕೆ ಹೋಗಿ ನಡೆದ ಅಪಘಾತದಿಂದಾಗಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಬೆಂಗಳೂರಿನ ವಸಂತನಗರದ ಪ್ಲೈ ಓವರ್ ಬಳಿಯಲ್ಲಿ ರಾತ್ರಿ 3 ಗಂಟೆಯ ಸುಮಾರಿಗೆ ಮದ್ಯಪಾನ ಮಾಡಿ ಶರ್ಮಿಳಾ ಮಾಂಡ್ರೆ ಅಪಘಾತ ಮಾಡಿದ್ದಾರೆನ್ನುವ ಆರೋಪ ಕೇಳಿಬಂದಿದೆ.

ಶರ್ಮೀಳಾ ಮಾಂಡ್ರೆ ಅಪಘಾತಕ್ಕೂ ಮುನ್ನ ಬೆಂಗಳೂರಿನ ಸ್ಯಾಂಕಿ ರೋಡ್ ನಲ್ಲಿರುವ ಅಬ್ ಶಾಟ್ ಅಪಾರ್ಟ್ ಮೆಂಟ್ ವೊಂದರಲ್ಲಿ ಮಾಜಿ ಸಚಿವರ ಮಗನ ಮನೆಯಲ್ಲಿ ಭರ್ಜರಿ ಪಾರ್ಟಿ ಮಾಡಿದ್ದಾರೆ.

ನಂತರ ನಾಲ್ವರು ಸ್ನೇಹಿತರ ಜೊತೆಯಲ್ಲಿ ಜಾಗ್ವಾರ್ ಕಾರಿನಲ್ಲಿ ಮನೆಯತ್ತ ಹೊರಟಿದ್ದರು ಎಂದು ತಿಳಿದುಬಂದಿದೆ.

ಕಾರಿನಲ್ಲಿ ಒಟ್ಟು 5 ಮಂದಿಯಿದ್ದರೂ ಕೂಡ ಅಪಘಾತದಲ್ಲಿ ಮುಂಭಾಗದಲ್ಲಿದ್ದ ಲೋಕೇಶ್ ಹಾಗೂ ನಟಿ ಶರ್ಮಿಳಾ ಮಾಂಡ್ರೆಗೆ ಗಾಯವಾಗಿತ್ತು. ಆದರೆ ಶರ್ಮಳಾ ಮಾಂಡ್ರೆ ಸ್ನೇಹಿತರು ಆಸ್ಪತ್ರೆಗೆ ದಾಖಲು ಮಾಡುವಾಗ ತಪ್ಪು ಮಾಹಿತಿ ನೀಡಿದ್ದಾರೆ.

ನಟಿ ಶರ್ಮಿಳಾ ಮಾಂಡ್ರೆಯ ಜೊತೆಯಲ್ಲಿದ್ದ ಲೋಕೇಶ್ ಗೆ ರಾಜಕಾರಣಿಗಳು, ಸಲೆಬ್ರಿಟಿಗಳ ಸಂಪರ್ಕವಿದೆ ಎನ್ನುವುದು ತಿಳಿದುಬಂದಿದೆ. ಅಲ್ಲದೇ ಕಾರಿನಲ್ಲಿ ವಿಐಪಿ ಪಾಸ್ ಸಿಕ್ಕಿರೋದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ಜಾಲಿರೈಡ್, ಪಾರ್ಟಿ ಮಾಡೋದಕ್ಕೆ ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ವಿತರಿಸಲಾಗಿದ್ದ ವಿಐಪಿ ಪಾಸ್ ಗಳನ್ನೂ ನಟಿ ಶರ್ಮಿಳಾ ಮಾಂಡ್ರೆ ದುರ್ಬಳಕೆ ಮಾಡಿಕೊಂಡಿದ್ದಾರಾ ಅನ್ನೋ ಅನುಮಾನವೂ ವ್ಯಕ್ತವಾಗುತ್ತಿದೆ.

ಘಟನೆಯ ಕುರಿತು ಸ್ವಯಂ ಪ್ರಕರಣ ದಾಖಲಿಸಿಕೊಂಡಿರೋ ಹೈಗ್ರೌಂಡ್ಸ್ ಠಾಣೆಯ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. 25 ಜನರನ್ನು ಸೇರಿಸಿಕೊಂಡು ಪಾರ್ಟಿ ಆಯೋಜಿಸಿದ್ದ ಮಾಜಿ ಶಾಸಕರ ಪುತ್ರ ಯಾರೂ ಅನ್ನೋ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಇನ್ನೊಂದೆಡೆ ಜಾಲಿರೈಡ್, ಅಪಘಾತದ ಕುರಿತು ಸ್ಯಾಂಡಲ್ ವುಡ್ ನಟಿ ಶರ್ಮೀಳಾ ಮಾಂಡ್ರೆ ಹೇಳಿಕೆ ನೀಡಿದ್ದಾರೆ. ತಾವು ಯಾವುದೇ ಪಾರ್ಟಿ ಮಾಡಲು ಲಾಕ್ ಡೌನ್ ಸಂದರ್ಭದಲ್ಲಿ ಹೊರಗೆ ಹೋಗಿರಲಿಲ್ಲ ಎಂದಿದ್ದಾರೆ.

ತಾನು ಯಾವುದೇ ಪಾರ್ಟಿಯಲ್ಲಿಯೂ ಪಾಲ್ಗೊಂಡಿಲ್ಲ, ಅನಾರೋಗ್ಯದ ಹಿನ್ನೆಲೆಯಲ್ಲಿ ಔಷಧಿಗಾಗಿ ಮನೆಯಿಂದ ಸ್ನೇಹಿತರ ಕಾರಿನಲ್ಲಿ ಹೋಗಿದ್ದೆ ಎಂದು ಶರ್ಮಿಳಾ ಮಾಂಡ್ರೆ ಸ್ಪಷ್ಟಪಡಿಸಿದ್ದಾರೆ.

ತನಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿತ್ತು, ಹೀಗಾಗಿ ತನ್ನ ಸ್ನೇಹಿತರಾದ ಲೋಕೇಶ್ ಹಾಗೂ ಥಾಮಸ್ ಅವರ ಬಳಿಯಲ್ಲಿ ಪಾಸ್ ಇತ್ತು ಇದರಿಂದಾಗಿ ಅವರ ಸಹಾಯವನ್ನು ಕೇಳಿದ್ದೇನೆ.

ನಂತರ ನನ್ನನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಹಿಂದಿರುಗಿ ಬರುವ ವೇಳೆಯಲ್ಲಿ ಕಾರು ಅಪಘಾತವಾಗಿದೆ.

ತನಗೆ ಔಷಧಿಯ ಅಗತ್ಯವಿದ್ದುದರಿಂದಾಗಿ ತಾನು ಪಾಸ್ ಹೊಂದಿದ್ದ ಸ್ನೇಹಿತರ ಸಹಾಯವನ್ನು ಪಡೆದಿದ್ದೇನೆ. ಆದರೆ ಲಾಕ್ ಡೌನ್ ಸಂದರ್ಭದಲ್ಲಿ ಅನಗತ್ಯವಾಗಿ ಹೊರಗೆ ಹೋಗಿಲ್ಲ ಎಂದಿದ್ದಾರೆ.

ಅಲ್ಲದೇ ತಾನು ಕಾರು ಓಡಿಸುತ್ತಲೇ ಇರಲಿಲ್ಲ, ತಾನು ಹಿಂಬದಿಯ ಸೀಟಿನಲ್ಲಿ ಕುಳಿತಿದ್ದೇ, ಸ್ನೇಹಿತ ಡಾನ್ ಕಾರು ಚಲಾಯಿಸುತ್ತಿದ್ದ, ಅಪಘಾತದಿಂದ ನನ್ನ ಕುತ್ತಿಗೆಗೆ ಪೆಟ್ಟಾಗಿದೆ ಎಂದು ಶರ್ಮಿಳಾ ಮಾಂಡ್ರೆ ಹೇಳಿದ್ದಾರೆ.

ಒಟ್ಟಿನಲ್ಲಿ ಶರ್ಮಿಳಾ ಮಾಂಡ್ರೆ ಕಾರು ಅಪಘಾತ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಆದರೆ ಪೊಲೀಸರ ತನಿಖೆಯಿಂದಷ್ಟೇ ಸತ್ಯಾಂಶ ಹೊರಬರಬೇಕಿದೆ.

Leave A Reply

Your email address will not be published.