ನಟಿ ಶರ್ಮಿಳಾ ಮಾಂಡ್ರೆಗೆ ಕೊರೊನಾ ಪಾಸಿಟಿವ್

0

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಇದೀಗ ನಟಿ ಶರ್ಮಿಳಾ ಮಾಂಡ್ರೆಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿರುವ ಕುರಿತು ಸ್ವತಃ ಶರ್ಮಿಳಾ ಮಾಡ್ರೆ ಟ್ವೀಟ್ ಮಾಡಿದ್ದಾರೆ. ನನಗೆ ಹಾಗೂ ನನ್ನ ಕುಟುಂಬ ಸದಸ್ಯರಿಗೆ ಕೊರೊನಾ ಸೋಂಕು ತಗುಲಿದೆ. ಸಣ್ಣದಾಗಿ ರೋಗಲಕ್ಷಣ ಇದೆ. ಹೀಗಾಗಿ ನಾವು ಮನೆಯಲ್ಲೇ ಹೋಂ ಐಸೊಲೇಷನ್‌ನಲ್ಲಿರಲು ನಿರ್ಧರಿಸಿದ್ದೇವೆ.

ನಾನು ಕ್ವಾರಂಟೀನ್​ಗೆ ಒಳಗಾಗಿದ್ದು, ವೈದ್ಯರ ಸಲಹೆಯಂತೆ ಔಷಧಿಗಳನ್ನ ತೆಗೆದುಕೊಳ್ತಿದ್ದೀನಿ ಎಂದು ಶರ್ಮಿಳಾ ಟ್ವಿಟರ್ ಮೂಲಕ ಸ್ಪಷ್ಟಪಡಿಸಿದ್ದಾರೆ‌.

Leave A Reply

Your email address will not be published.