MVA Moves SC : ಏಕನಾಥ್​ ಶಿಂಧೆ ವಿರುದ್ಧ ಶಿವಸೇನೆ ಹೊಸ ಅಸ್ತ್ರ : ಕಾನೂನು ಸಮರಕ್ಕೆ ಮುಂದಾದ ಮಹಾ ವಿಕಾಸ್​ ಅಘಾಡಿ ಮೈತ್ರಿಕೂಟ

ಮಹಾರಾಷ್ಟ್ರ : MVA Moves SC : ಮಹಾರಾಷ್ಟ್ರದ ರಾಜಕೀಯದಲ್ಲಿ ದಿನಕ್ಕೊಂದು ತಿರುವು ಎದುರಾಗುತ್ತಲೇ ಇದೆ. ಕರ್ನಾಟಕ ಮಾದರಿಯಲ್ಲಿಯೇ ಮಹಾ ವಿಕಾಸ್​ ಅಘಾಡಿ ಸರ್ಕಾರ ಪತನಗೊಂಡಿದ್ದು ಅಚ್ಚರಿಯ ಬೆಳವಣಿಗೆಯಲ್ಲಿ ನೂತನ ಸಿಎಂ ಆಗಿ ಏಕನಾಥ್​ ಶಿಂಧೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸರ್ಕಾರ ಪತನದ ಬಳಿಕ ಸುಮ್ಮನೇ ಕೂರದ ಮಹಾ ವಿಕಾಸ್​ ಅಘಾಡಿ ಬಂಡಾಯ ಶಾಸಕರ ವಿರುದ್ಧ ಕಾನೂನು ಸಮರವನ್ನು ಮುಂದುವರಿಸಿದೆ. ಸುಪ್ರಿಂ ಕೋರ್ಟ್ ಮೆಟ್ಟಿಲೇರಿರುವ ಮಹಾ ವಿಕಾಸ್​ ಅಘಾಡಿ ಮೈತ್ರಿಕೂಟವು 16 ಬಂಡಾಯ ಶಿವಸೇನೆ ಶಾಸಕರ ವಿರುದ್ಧ ಸಲ್ಲಿಸಲಾದ ಅನರ್ಹತೆ ಅರ್ಜಿಗಳನ್ನು ಉಪಸಭಾಪತಿ ನಿರ್ಧರಿಸುವವರೆಗೆ ಅಮಾನತುಗೊಳಿಸುವಂತೆ ಕೋರಿದೆ.


ನೂತನವಾಗಿ ಮಹಾರಾಷ್ಟ್ರ ಸಿಎಂ ಗದ್ದುಗೆ ಏರಿರುವ ಏಕನಾಥ್​ ಶಿಂಧೆ ಹಾಗೂ 15 ಮಂದಿ ಬಂಡಾಯ ಶಾಸಕರ ವಿರುದ್ಧ ಅನರ್ಹತಾ ಅರ್ಜಿಗಳ ಸಲ್ಲಿಕೆಯಾಗಿದ್ದು ಇವರ ಅನರ್ಹತೆಯ ಬಗ್ಗೆ ಉಪ ಸಭಾಪತಿ ಅಂತಿಮ ನಿರ್ಧಾರ ಕೈಗೊಳ್ಳುವವರೆಗೆ ಅವರನ್ನು ಅಮಾನತುಗೊಳಿಸುವತೆ ಶಿವಸೇನಾ ಮುಖ್ಯ ಸಚೇತಕ ಸುನೀಲ್​ ಪ್ರಭು ಕೋರಿದ್ದಾರೆ.


ಶಿವಸೇನಾ ಬಂಡಾಯ ಶಾಸಕರ ಅನರ್ಹತೆ ಪ್ರಕ್ರಿಯೆಗಳ ಅಂತಿಮ ತೀರ್ಪು ಬರುವವರೆಗೂ ಮಹಾರಾಷ್ಟ್ರ ವಿಧಾನಸಭೆಗೆ ಏಕನಾಥ್​ ಶಿಂಧೆ ಸೇರಿದಂತೆ ಎಲ್ಲಾ ಬಂಡಾಯ ಶಾಸಕರು ಪ್ರವೇಶಿಸದಂತೆ ಅಥವಾ ಸದನಕ್ಕೆ ಸಂಬಂಧಿಸಿದ ಯಾವುದೇ ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ಅವರನ್ನು ನಿರ್ಬಂಧಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ. ಈ ಮೂಲಕ ಮಹಾ ವಿಕಾಸ್​ ಅಘಾಡಿ ಸರ್ಕಾರವನ್ನು ಪತನಗೊಳಿಸಿ ಸಿಎಂ ಗದ್ದುಗೆಯನ್ನು ಏರಿರುವ ಏಕನಾಥ್​ ಶಿಂಧೆಯನ್ನು ಕಟ್ಟಿ ಹಾಕಲು ಶಿವಸೇನೆ ಪ್ಲಾನ್​ ರೂಪಿಸಿದೆ. ಇತ್ತ ಏಕನಾಥ್​ ಶಿಂಧೆ ಶನಿವಾರದಂದು ಮಹಾರಾಷ್ಟ್ರ ಸದನದಲ್ಲಿ ವಿಶ್ವಾಸ ಮತಯಾಚನೆ ಮಾಡುವ ತಯಾರಿಯಲ್ಲಿದ್ದಾರೆ. 40 ಮಂದಿ ಶಿವಸೇನೆ ಶಾಸಕರು ಸೇರಿದಂತೆ ಒಟ್ಟು 50 ಮಂದಿ ಏಕನಾಥ್​ ಶಿಂಧೆ ಬಣದಲ್ಲಿದ್ದಾರೆ. ಇದರ ಜೊತೆಯಲ್ಲಿ ಬಿಜೆಪಿಯ ಬಲವೂ ಶಿಂಧೆ ಬೆನ್ನಿಗಿದೆ.

ಇದನ್ನು ಓದಿ : incredible fashion design : ಸಾಮಾನ್ಯ ವ್ಯಕ್ತಿಯ ಅಸಾಮಾನ್ಯ ಅನುಕರಣೆ

ಇದನ್ನೂ ಓದಿ : ಬೆನ್ನು ಬಿಡದೆ ಫಾಲೋ ಮಾಡಿದ ಕ್ಯಾಮರಾಮೆನ್‌ಗೆ ಸೀರಿಯಸ್ ಲುಕ್ ಕೊಟ್ಟ ಕಿಂಗ್ ಕೊಹ್ಲಿ

MVA Moves SC, Seeks Suspension of 16 Rebel MLAs Till Disqualification Decision

Comments are closed.