Raveena Tandon : “ಚೂರು ಬಟ್ಟೆ ಹರಿಯದೇ ಬಲತ್ಕಾರದ ಸನ್ನಿವೇಶದಲ್ಲಿ ನಟಿಸಿದವಳು ನಾನೊಬ್ಳೆ”: ರವೀನಾ ಟಂಡನ್

ರವೀನಾ ಟಂಡನ್ (Raveena Tandon) 90ರ ದಶಕದ ಬಾಲಿವುಡ್‌ನ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದರು. ‘ಉಪೇಂದ್ರ’ ಸಿನಿಮಾದಲ್ಲಿ ಮಸ್ತ್ ಮಸ್ತ್‌ ಹುಡುಗಿಯಾಗಿ ಕುಣಿದು ಕನ್ನಡ ಸಿನಿರಸಿಕರಿಗೂ ಪರಿಚಿತರಾದರು. ಇತ್ತೀಚೆಗೆ ‘ಕೆಜಿಎಫ್’- 2 ಸಿನಿಮಾದಲ್ಲಿ ರಮಿಕಾ ಸೇನ್ ಆಗಿ ಮತ್ತೊಮ್ಮೆ ರವೀನಾ ಮೋಡಿ ಮಾಡಿದ್ದು ಗೊತ್ತೇಯಿದೆ. ಒಂದು ಕಾಲದಲ್ಲಿ ರವೀನಾ ಟಂಡನ್ ಹೆಸರು ಕೇಳಿದ್ರೆ, ಪಡ್ಡೆ ಹುಡುಗರು ಅಲರ್ಟ್ ಆಗ್ತಿದ್ದರು. ‘ಥೂ ಚೀಸ್ ಬಡಿ ಹೈ ಮಸ್ತ್ ಮಸ್ತ್’ ಎಂದು ‘ಮೆಹ್ರಾ’ ಸಿನಿಮಾ ಚೆಲುವೆ ಕುಣಿದಿದ್ದನ್ನು ಸಿನಿರಸಿಕರು ಇನ್ನು ಮರೆತ್ತಿಲ್ಲ. ಆಕೆಯ ಮಾದಕ ಮೈಮಾಟಕಂತೂ ಇಡೀ ಬಾಲಿವುಡ್ ಫಿದಾ ಆಗಿ ಹೋಗಿತ್ತು. ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಮಸ್ತ್ ಮಸ್ತ್ ಹುಡುಗಿ ಕಮಾಲ್ ಮಾಡಿದ್ದರು. ಆದರೆ ರವೀನಾಗೆ ಅಹಂಕಾರ ಹೆಚ್ಚು, ನಿರ್ಮಾಪಕ ನಿರ್ದೇಶಕರ ಮಾತು ಕೇಳಲ್ಲ ಎನ್ನುವ ಆರೋಪ ಇತ್ತು.

ಈ ಆಟಿಟ್ಯೂಡ್‌ನಿಂದ ರವೀನಾಗೆ ಸಾಕಷ್ಟು ಅವಕಾಶಗಳು ಸಿಗಲಿಲ್ಲ. ಒಳ್ಳೆ ಅವಕಾಶಗಳನ್ನು ಕೈಚೆಲ್ಲುವಂತಾಗಿತ್ತು. ಆದರೆ ಅದಕ್ಕೆ ಕಾರಣ ಏನು ಎನ್ನುವುದನ್ನು ಇದೀಗ ಸ್ವತಃ ರವೀನಾ ಬಿಚ್ಚಿಟ್ಟಿದ್ದಾರೆ. ANIಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ನನಗೆ ಕೆಲ ವಿಚಾರಗಳು ಕಂಫರ್ಟ್‌ ಎನಿಸುತ್ತಿರಲಿಲ್ಲ. ಉದಾಹರಣೆಗೆ ಡ್ಯಾನ್ಸ್ ಸ್ಟೆಪ್ಸ್. ನನಗೆ ಯಾವುದಾದರೂ ಸ್ಟೆಪ್ ಕಂಫರ್ಟ್ ಅನ್ನಿಸದಿದ್ದರೆ ನೇರವಾಗಿ ಹೇಳಿಬಿಡುತ್ತಿದ್ದೆ. ನಾನು ಆ ಸ್ಟೆಪ್ ಮಾಡುತ್ತಿರಲಿಲ್ಲ. ನನಗೆ ಸ್ವಿಮ್‌ಸೂಟ್ ಧರಿಸಲು ಇಷ್ಟವಾಗುತ್ತಿರಲಿಲ್ಲ. ಜೊತೆಗೆ ನಾನು ಕಿಸ್ಸಿಂಗ್ ಸೀನ್‌ಗಳಲ್ಲೂ ನಟಿಸುತ್ತಿರಲಿಲ್ಲ. ಶೂಟಿಂಗ್‌ಗೂ ಮೊದಲೇ ಒಪ್ಪಂದದ ಸಮಯದಲ್ಲಿ ಈ ಷರತ್ತುಗಳನ್ನೆಲ್ಲಾ ಹೇಳುತ್ತಿದ್ದೆ.’

‘ನನ್ನ ಈ ಷರತ್ತುಗಳಿಂದ ನನಗೆ ಮೇಲೆ ದುರಹಂಕಾರಿ ಎನ್ನುವ ಹಣೆಪಟ್ಟಿ ಕಟ್ಟಿಬಿಟ್ಟಿದ್ದರು. ಇದರಿಂದಲೇ ಸಾಕಷ್ಟು ಅವಕಾಶಗಳು ಕಳೆದುಕೊಳ್ಳುವಂತಾಯಿತು. ಆದರೂ ಕೂಡ ನಾನು ಅಂತ ಸನ್ನಿವೇಶಗಳಲ್ಲಿ ನಟಿಸಲಿಲ್ಲ. ಎರಡು ರೇಪ್‌ ಸೀನ್‌ಗಳಲ್ಲಿ ಕಾಣಿಸಿಕೊಂಡಿದ್ದರು ಅಶ್ಲೀಲತೆಗೆ ಆಸ್ಪದ ಕೊಡದಂತೆ ಕಾಣಿಸಿಕೊಂಡಿದ್ದೆ. ಒಂದು ಚೂರು ಬಟ್ಟೆ ಹರಿಯದೇ ರೇಪ್‌ ಸೀನ್‌ನಲ್ಲಿ ನಟಿಸಿದ್ದು ನಾನು ಮಾತ್ರ ಎನಿಸುತ್ತೆ’ ಎಂದು ರವೀನಾ ಹೇಳಿದ್ದಾರೆ.ನನ್ನ ಬಟ್ಟೆ ಹರಿಯುವಂತಿಲ್ಲ. ಬೇಕಿದ್ದರೆ ನೀನು ರೇಪ್ ಸೀನ್ ಮಾಡು ಎನ್ನುತ್ತಿದ್ದೆ.

ಇದನ್ನೂ ಓದಿ : ಬಾಲಿವುಡ್‌ ನವದಂಪತಿಗಳಾದ ಸಿದ್ಧಾರ್ಥ್,ಕಿಯಾರಾ ಜೋಡಿ ಬಗ್ಗೆ ಭವಿಷ್ಯ ನುಡಿದ ಜ್ಯೋತಿಷಿ

ಇದನ್ನೂ ಓದಿ : Vijay Surya : ಸಂಗೀತಗಾರನಾಗಿ ಕಿರುತೆರೆಗೆ ಮರಳಿದ ಅಗ್ನಿಸಾಕ್ಷಿಯ ವಿಜಯ ಸೂರ್ಯ

ಇದನ್ನೂ ಓದಿ : ತಮಿಳು ಸಿನಿಮಾ ನಿರ್ಮಾಪಕ ಹೇಮ್ ನಾಗ್ ವಿಧಿವಶ

ಇದಕ್ಕೆ ‘ನನ್ನನ್ನು ಅಹಂಕಾರಿ’ ಎನ್ನುತ್ತಿದ್ದರು. ‘ಢರ್’ ಸಿನಿಮಾ ಅವಕಾಶ ಮೊದಲು ನನಗೆ ಬಂದಿತ್ತು. ಅದರಲ್ಲಿ ಅಶ್ಲೀಲ ಎನ್ನುವುದು ಏನು ಇರಲಿಲ್ಲ. ಆದರೆ ಮೊದಲಿಗೆ ಸಿನಿಮಾದಲ್ಲಿ ಒಂದು ಸೀನ್ ಇತ್ತು. ಅದು ನನಗೆ ಕಂಫರ್ಟ್ ಎನ್ನಿಸಲಿಲ್ಲ. ನಾನು ಸ್ವಿಮ್ ಸೂಟ್ ಧರಿಸುತ್ತಿರಲಿಲ್ಲ. ನಾನು ಸ್ವಿಮ್ ಸೂಟ್ ಧರಿಸೋಕೆ ಆಗುವುದಿಲ್ಲ ಎಂದು ಹೇಳಿದ್ದೆ. ಇನ್ನು ‘ಪ್ರೇಮ್‌ ಖೈದಿ’ ಸಿನಿಮಾ ಅವಕಾಶ ಕೂಡ ಮೊದಲು ನನಗೆ ಬಂದಿತ್ತು. ಕರೀಷ್ಮಾ ಕಪೂರ್ ಆ ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾದಲ್ಲೂ ಕೂಡ ನನಗೆ ಒಂದು ಸನ್ನಿವೇಶ ನನಗೆ ಅದು ಕಂಫರ್ಟ್ ಎನಿಸಲಿಲ್ಲ. ಅದಕ್ಕಾಗಿ ಆ ಸಿನಿಮಾ ಕೂಡ ಒಪ್ಪಿಕೊಂಡಿರಲಿಲ್ಲ’ ಎಂದು ರವೀನಾ ಟಂಡನ್ ವಿವರಿಸಿದ್ದಾರೆ. 1991ರಲ್ಲಿ ‘ಪಥರ್‌ ಕೆ ಫೂಲ್’ ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಮುಂಬೈ ಬೆಡಗಿ ಮುಂದೆ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದರು. ತೆಲುಗು, ಕನ್ನಡ ಸಿನಿಮಾಗಳಲ್ಲೂ ಮಿಂಚಿದರು.

“She who acted in a rape scene without a shred of clothes is a genius”: Raveena Tandon

Comments are closed.