Shikar Dhavan :  ಬಾಲಿವುಡ್ ನಲ್ಲಿ ಮಿಂಚಲು ಶಿಖರ್ ಧವನ್ ರೆಡಿ

ಮುಂಬೈ : Shikar Dhavan ಬ್ಯಾಟ್ ಹಿಡಿದು ಮೀಸೆ ತಿರುವಿ ಪಿಚ್ ನಲ್ಲಿ ಅಬ್ಬರಿಸೋ ಕ್ರಿಕೆಟರ್ ಶಿಖರ್ ಧವನ್ ಇದೀಗ್ ಬಾಲಿವುಡ್ ಸಿನಿಮಾದ ಮೂಲಕ ಹೊಸ ಇನ್ನಿಂಗ್ಸ್ ಶುರು ಮಾಡಲಾಗಿದೆ. ಹುಮಾ ಖುರೇಷಿ ಮತ್ತು ಸೋನಾಕ್ಷಿ ಸಿನ್ಹಾ ಅವರ ಡಬಲ್ ಎಕ್ಸ್‌ಎಲ್ ಚಿತ್ರದೊಂದಿಗೆ ಶಿಖರ್ ನಟನೆಯ ಜಗತ್ತಿಗೆ ಕಾಲಿಡಲಿದ್ದಾರೆ.

ನವೆಂಬರ್ 4 ರಂದು ಡಬಲ್ ಎಕ್ಸ್ ಎಲ್ ಚಿತರ ಬಿಡುಗಡೆ ಆಗಲಿದ್ದು, ಚಿತ್ರದಲ್ಲಿ ಶಿಖರ್ ಧವನ್ ಹುಮಾ ಖುರೇಷಿ ಮತ್ತು ಸೋನಾಕ್ಷಿ ಸಿನ್ಹಾ ಜೊತೆ ನಟಿಸಲಿದ್ದಾರೆ. ಈ ಬಗ್ಗೆ ಖುದ್ದು ಹುಮಾ ಖುರೇಷಿ ತಮ್ಮ ಇನ್ಸ್ ಸ್ಟಾ ಗ್ರಾಂನಲ್ಲಿ ಫೊಸ್ಟ್ ಹಾಕಿದ್ದಾರೆ ಇಬ್ಬರು ನಾಯಕಿಯರಲ್ಲಿ ಶಿಖರ್ ಯಾವ ನಾಯಕಿಯೊಂದಿಗೆ ತೆರೆಮೇಲೆ ಪ್ರೀತಿಯಲ್ಲಿ ಬೀಳುತ್ತಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇತ್ತೀಚೆಗೆ, ಹುಮಾ ತನ್ನ ಇನ್ಸ್ಟಾಗ್ರಾಮ್ನಲ್ಲಿ ಶಿಖರ್ ಜೊತೆಗಿನ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಇಬ್ಬರೂ ಕೈಕೈ ಹಿಡಿದು ನೃತ್ಯ ಮಾಡುತ್ತಿದ್ದಾರೆ.

https://www.instagram.com/p/CjkRAsxpbxt/?utm_source=ig_web_copy_link

‘ಡಬಲ್ ಎಕ್ಸ್‌ಎಲ್’ ಬಗ್ಗೆ ಶಿಖರ್ ಧವನ್ ಹೇಳಿದ್ದೇನು?: ಶಿಖರ್ ಧವನ್ ಇತ್ತೀಚೆಗೆ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಈ ಚಿತ್ರದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದರು. ಚಿತ್ರದ ಕಥೆ ತನ್ನ ಮೇಲೆ ಆಳವಾದ ಪ್ರಭಾವ ಬೀರಿದೆ ಎಂದು ಅವರು ಹೇಳಿದ್ದರು. ಚಿತ್ರವನ್ನು ಭಾರತ ಮತ್ತು ಯುಕೆಯಲ್ಲಿ ಚಿತ್ರೀಕರಿಸಲಾಗಿದೆ. ‘ಡಬಲ್ ಎಕ್ಸ್‌ಎಲ್’  ನವೆಂಬರ್ 4 ರಂದು ಥಿಯೇಟರ್‌ಗಳಿಗೆ ಬರಲಿದೆ. ಡಬಲ್ ಎಕ್ಸ್ಎಲ್ ಇದು ದಪ್ಪ ಮಹಿಳೆಯರ ಕಥೆಯನ್ನ ಹೇಳಲಿದೆ. ಚಿತ್ರದಲ್ಲಿ ಒಬ್ಬ ನಾಯಕಿ ಉತ್ತರ ಪ್ರದೇಶದವರಾಗಿದ್ದರೆ, ಇನ್ನೊಬ್ಬರು ನವದೆಹಲಿಯಿಂದ ಬಂದವರು. ದಪ್ಪ ಮಹಿಳೆಯರು ತಮ್ಮ ಕನಸನ್ನು ಹೇಗೆ ಈಡೇರಿಸಿಕೊಳ್ಳಲು ಪ್ರಯತ್ನಿಸುತ್ತಾಳೆ, ಅದನ್ನೇ ಈ ಚಿತ್ರದಲ್ಲಿ ತೋರಿಸಲಾಗಿದೆ. ‘ಡಬಲ್ ಎಕ್ಸ್‌ಎಲ್’ ಚಿತ್ರವನ್ನು ಸತ್ರಂ ರಮಣಿ ನಿರ್ದೇಶಿಸಿದ್ದಾರೆ. ಇನ್ನು ಶಿಖರ್ ಧವನ್ ಪಾತ್ರದ ಬಗ್ಗೆ ಎಳೆ ಬಿಟ್ಟು ಕೊಟ್ಟಿರೋ ಚಿತ್ರ ತಂಡ ಶಿಖರ್ ಧವನ್ ಈ ಚಿತ್ರದಲ್ಲಿ ನಾಯಕರಾಗಿ ಕಾಣಿಸಿಕೊಳ್ಳುತ್ತಿಲ್ಲ. ಬದಲಾಗಿ ಅವರು ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಹುಮಾ ಖುರೇಷಿ ಹಂಚಿಕೊಂಡಿರೋ ಫೋಟೋಗಳಲ್ಲಿ ಪಾರ್ಟಿಯಲ್ಲಿ ಪರಸ್ಪರರ ಕೈ ಹಿಡಿದು ನೃತ್ಯ ಮಾಡುವುದನ್ನು ಕಾಣಬಹುದು. ಅದೇ ಸಮಯದಲ್ಲಿ, ಎರಡನೇ ಫೋಟೋದಲ್ಲಿ, ಇಬ್ಬರೂ ಒಟ್ಟಿಗೆ ಕುಳಿತು ನಗುತ್ತಿದ್ದಾರೆ. ಶಿಖರ್ ಕಪ್ಪು ಸೂಟ್ ಬೂಟಿನಲ್ಲಿ ಕಾಣಿಸಿಕೊಂಡರೆ, ಹುಮಾ ಗುಲಾಬಿ ಬಣ್ಣದ ಒನ್ ಆಫ್ ಶೋಲ್ಡರ್ ಹಾಟ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಫೋಟೋಗಳು ಕಾಣಿಸಿಕೊಂಡ ತಕ್ಷಣ ಅಭಿಮಾನಿಗಳು ಕಾಮೆಂಟ್ ಮಾಡಲು ಪ್ರಾರಂಭಿಸಿದ್ದಾರೆ. ಶಿಖರ್ ಹೊಸ ಇನ್ನಿಂಗ್ಸ್ ಪ್ರಾರಂಭಿಸುತ್ತಿದ್ದಾರೆ ಆಲ್ ದಿ ಬೆಸ್ಟ್ ಅಂತಾ ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ : Sourav Ganguly : ಸೌರವ್ ಗಂಗೂಲಿಗೆ ಬಿಜೆಪಿಯಿಂದ ಅವಮಾನ.. ರಾಜಕೀಯ ಜಟಾಪಟಿಗೆ ತಿರುಗಿದ ಬಿಸಿಸಿಐ ಅಧ್ಯಕ್ಷಗಿರಿ

Shikar Dhavan has started a new innings with a new Bollywood movie double xl

Comments are closed.