Sourav Ganguly : ಸೌರವ್ ಗಂಗೂಲಿಗೆ ಬಿಜೆಪಿಯಿಂದ ಅವಮಾನ.. ರಾಜಕೀಯ ಜಟಾಪಟಿಗೆ ತಿರುಗಿದ ಬಿಸಿಸಿಐ ಅಧ್ಯಕ್ಷಗಿರಿ

ಕೋಲ್ಕತ್ತಾ : Sourav Ganguly BCCI : ಬಿಸಿಸಿಐ ಅಧ್ಯಕ್ಷರನ್ನಾಗಿ ಕನ್ನಡಿಗ ರೋಜರ್ ಬಿನ್ನಿ ಆಯ್ಕೆ ಆಗೋ ಸಾಧ್ಯತೆ ಇದೆ ಎಂಬ ವರದಿಗಳ ಬೆನ್ನಲ್ಲೆ ಭಾರತದ ಕ್ರಿಕೆಟ್ ಬಿಗ್ ಬಾಸ್ ಪಟ್ಟ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಸೌರವ್ ಗಂಗೂಲಿ ಬಿಜೆಪಿ ಸೇರದೇ ಇದ್ದುದಕ್ಕಾಗಿ ಅವರಿಗೆ 2ನೇ ಅವಧಿಗೆ ಬಿಸಿಸಿಐ ಅಧ್ಯಕ್ಷರನ್ನಾಗಿ ಮುಂದುವರಿಸುತ್ತಿಲ್ಲ ಅಂತಾ ತೃಣಮೂಲ ಕಾಂಗ್ರೆಸ್ ಆರೋಪಿಸಿದೆ.

ಬಿಸಿಸಿಐನ ಹಾಲಿ ಅಧ್ಯಕ್ಷ ಸೌರವ್ ಗಂಗೂಲಿ ಅವರ ಅಧಿಕಾರಾವಧಿ ಪೂರ್ಣಗೊಂಡಿದ್ದು, ಹೀಗಾಗಿ ಖಾಲಿಯಾಗಲಿರುವ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರೋಜರ್ ಬಿನ್ನಿ ಸ್ಪರ್ಧಿಸಿದ್ದಾರೆ. 1983 ರ ವಿಶ್ವಕಪ್ ವಿಜೇತ ತಂಡದ ಸದಸ್ಯ ರೋಜರ್ ಬಿನ್ನಿ ಮಂಗಳವಾರ BCCI ಅಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನ ಸಲ್ಲಿಸಿದ್ದಾರೆ.  ಅಕ್ಟೋಬರ್ 18 ರಂದು ಮುಂಬೈನಲ್ಲಿ ಬಿಸಿಸಿಐ ಬೋರ್ಡ್ ವಾರ್ಷಿಕ ಸಭೆಯಲ್ಲಿ ರೋಜರ್ ಬಿನ್ನಿ ಅವಿರೋಧವಾಗಿ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆ ಆಗೋ ಸಾಧ್ಯತೆ ಇದೆ. ಇನ್ನು ಜಯ್ ಶಾ ಕೂಡಾ ಬಿಸಿಸಿಐ ಕಾರ್ಯದರ್ಶಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದು, ಯಾವುದೇ ಅಭ್ಯರ್ಥಿ ಬಾರದಿದ್ದಲ್ಲಿ ಸತತ ಎರಡನೇ ಅವಧಿಗೆ ಬಿಸಿಸಿಐ ಕಾರ್ಯದರ್ಶಿಯಾಗಿ ಮುಂದುವರಿಯಲಿದ್ದಾರೆ.

ಆದ್ರೆ ಈ ಬಗ್ಗೆ ಪ್ರತಿಕ್ರೆ ನೀಡಿರೋ ತೃಣಮೂಲ ಕಾಂಗ್ರೆಸ್ ವಕ್ತಾರ ಕುನಾಲ್ ಘೋಷ್ . ಪಶ್ಚಿಮ ಬಂಗಾಳದಲ್ಲಿ ಅಪಾರ ಜನಪ್ರಿಯತೆ ಹೊಂದಿರುವ ಗಂಗೂಲಿ ಬಿಜೆಪಿ ಸೇರುತ್ತಾರೆ ಎಂಬ ಸಂದೇಶವನ್ನು ಕಳೆದ ವರ್ಷದ ವಿಧಾನಸಭಾ ಚುನಾವಣೆಗೆ ಮುನ್ನ ಜನರಲ್ಲಿ ಹರಡಲು ಪ್ರಯತ್ನಿಸಿತ್ತು. ಆದ್ರೆ, ಗಂಗೂಲಿ ಅವರನ್ನ ಪಕ್ಷಕ್ಕೆ ಸೇರಿಸಿಕೊಳ್ಳಲು ವಿಫಲವಾದ ಕಾರಣ ಬಿಜೆಪಿ ಅವರನ್ನು “ಅವಮಾನಗೊಳಿಸಲು ಪ್ರಯತ್ನಿಸುತ್ತಿದೆ” ಎಂದು ಆರೋಪಿಸಿದ್ದಾರೆ. ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜಯ್ ಶಾ ಅವರು ಎರಡನೇ ಅವಧಿಗೆ ಬಿಸಿಸಿಐ ಕಾರ್ಯದರ್ಶಿಯಾಗಿ ಮುಂದುವರಿಯಬಹುದು ಆದರೆ ಗಂಗೂಲಿ ಅಧ್ಯಕ್ಷರಾಗಿ ಮುಂದುವರಿಯಲು ಸಾಧ್ಯವಿಲ್ಲವೇ. ಇದು ಬಿಜೆಪಿಯ ಸೇಡಿನ ರಾಜಕೀಯ ಎಂದು ಕುನಾಲ್ ಘೋಷ್ ಹೇಳಿದ್ದಾರೆ.

“ನಾವು ಈ ವಿಷಯದ ಬಗ್ಗೆ ನೇರವಾಗಿ ಪ್ರತಿಕ್ರಿಯಿಸುವುದಿಲ್ಲ, ಆದರೆ ಚುನಾವಣೆಯ ಸಮಯದಲ್ಲಿ ಮತ್ತು ನಂತರ ಬಿಜೆಪಿಯು ಗಂಗೂಲಿ ತಮ್ಮ ಪಕ್ಷವನ್ನ ಸೇರುತ್ತಾರೆ ಅಂತಾ ಪ್ರಚಾರ ಮಾಡಿತ್ತು. ಇದೀಗ ಬಿಜೆಪಿಯೇ ಇದಕ್ಕೆ ಉತ್ತರ ಕೊಡಬೇಕಿದೆ. ಗಂಗೂಲಿ ಎರಡನೇ ಬಾರಿಗೆ ಆಯ್ಕೆಯಾಗದಿರುವ ಹಿಂದೆ ರಾಜಕೀಯವಿದೆ. ಸೌರವ್ ಗಂಗೂಲಿ ಅವರನ್ನ ಅವರನ್ನು ಬಿಜೆಪಿ ಅವಮಾನಿಸುತ್ತಿದೆ ಎಂದು ಪ್ರಯತ್ನಿಸುತ್ತಿದೆ ಎಂದು ತೃಣಮೂಲ ಕಾಂಗ್ರೆಸ್ ವಕ್ತಾರ ಕುನಾಲ್ ಘೋಷ್ ಹೇಳಿದ್ದಾರೆ.

ಟಿಎಂಸಿ ಆರೋಪವನ್ನ ಅಲ್ಲಗಳೆದಿರುವ ಬಿಜೆಪಿ, ಬಂಗಾಳದ ಜನರು ಗಂಗೂಲಿ ಅವರನ್ನ ಪ್ರಿನ್ಸ್ ಆಫ್ ಕೋಲ್ಕತ್ತಾ ಎಂದು ಕರೆಯುತ್ತಾರೆ. ಅಂತಹ ಶ್ರೇಷ್ಠ ಆಟಗಾರನನ್ನ ಬಿಜೆಪಿಗೆ ಸೇರಿಸಿಕೊಳ್ಳಲು ಬಿಜೆಪಿ ಎಂದಿಗೂ ಪ್ರಯತ್ನಿಸಿಲ್ಲ ಎಂದು ತಿಳಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ದಿಲೀಪ್, ಟಿಎಂಸಿ ಆರೋಪಗಳು ಆಧಾರರಹಿತ ಎಂದು ಬಣ್ಣಿಸಿದ್ದಾರೆ. ಸೌರವ್ ಗಂಗೂಲಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಬಿಜೆಪಿ ಯಾವಾಗ ಪ್ರಯತ್ನಿಸಿತು ಎಂಬುದು ನಮಗೆ ತಿಳಿದಿಲ್ಲ. ಸೌರವ್ ಗಂಗೂಲಿ ಕ್ರಿಕೆಟ್ ದಂತಕಥೆ. ಕೆಲವರು ಈಗ ಬಿಸಿಸಿಐ ಬದಲಾವಣೆಗಳ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಅವರು ಬಿಸಿಸಿಐ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗ ಬಿಜೆಪಿ ಪಾತ್ರ ಇತ್ತಾ.? ತೃಣಮೂಲ ಕಾಂಗ್ರೆಸ್ ಪ್ರತಿಯೊಂದು ವಿಷಯವನ್ನು ರಾಜಕೀಯಗೊಳಿಸುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ : Binny BCCI President : ಕನ್ನಡಿಗನಿಗೆ ಕ್ರಿಕೆಟ್ ಬಿಗ್ ಬಾಸ್ ಪಟ್ಟ..? ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ರೋಜರ್ ಬಿನ್ನಿ !

Sourav Ganguly Didn’t Join BJP, So No 2nd Term, Alleges TMC Leader

Comments are closed.