ವರ್ಕೌಟ್ ಮಾಡೋ‌ ಮೊದಲೇ ವೇಟ್ ಲಾಸ್: ಸ್ಪಂದನಾ ಜಿಮ್ ಟ್ರೈನರ್ ಹೇಳಿದ್ದೇನು ?

Spandan Vijay Death secret : ಸ್ಯಾಂಡಲ್ ವುಡ್ ನ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ನಿಧನರಾಗಿದ್ದಾರೆ.‌ ಸ್ಪಂದನಾ ವಿಜಯ ರಾಘವೇಂದ್ರ ಅಕಾಲಿಕ ನಿಧನ ಮತ್ತೊಮ್ಮೆ ಫಿಟನೆಸ್, ವರ್ಕೌಟ್ ಹಾಗೂ ಕೊರೋನೋತ್ತರ ಹೃದಯ ಕಾಯಿಲೆಗಳ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ಈ ಮಧ್ಯೆ ಸ್ಪಂದನಾ ತೂಕ ಇಳಿಸಿಕೊಂಡಿದ್ದು ಹಾಗೂ ವರ್ಕೌಟ್ ಗೆ ಮುಂದಾಗಿದ್ದೇ ಕಾರಣವಾಯ್ತಾ ಎಂಬ ಚರ್ಚೆ ಆರಂಭವಾಗಿದೆ.

ಲಾಕ್ ಡೌನ್ ಅವಧಿಯಲ್ಲಿ ಜಗತ್ತೇ ಒಂದು ರೀತಿ ಸ್ತಬ್ಧವಾಗಿತ್ತು. ಹೀಗಾಗಿ ಯಾವುದೇ ಚಟುವಟಿಕೆಗಳಿಲ್ಲದೇ ಜನರು ತೂಕ ಏರಿಕೆಯಂತಹ ಸಮಸ್ಯೆಗಳಿಗೆ ತುತ್ತಾಗಿದ್ದರು.‌ ವಿಜಯ್ ರಾಘವೇಂದ್ರ್ ಪತ್ನಿ ಸ್ಪಂದನಾ ಕೂಡಾ ಹೀಗೆ ಲಾಕ್ ಡೌನ್ ಅವಧಿಯಲ್ಲಿ ಕೊಂಚ ತೂಕ ಏರಿಸಿಕೊಂಡಿದ್ದರು. ಹೀಗಾಗಿ ಕೆಲ ತಿಂಗಳಿನಿಂದ ಸ್ಪಂದನಾ ಡಯಟ್ ಮೂಲಕ ತೂಕ ಇಳಿಸಿಕೊಂಡಿದ್ದರು. ಆದರೆ ಸ್ಪಂದನಾ ಯಾವ ಡಯಟ್ ಮೂಲಕ ತಮ್ಮ ತೂಕವನ್ನು ಇಷ್ಟು ವೇಗವಾಗಿ ಕಳೆದುಕೊಂಡಿದ್ದರು ಅನ್ನೋದರ ಬಗ್ಗೆ ಹೊರಗಡೆಯ ಯಾರಿಗೂ ಮಾಹಿತಿ ಇಲ್ಲ.

ಆದರೆ ಇತ್ತೀಚಿಗೆ ಅಂದರೇ ಕಳೆದ ಎರಡು ತಿಂಗಳಿನಿಂದ ವಿಜಯ್ ರಾಘವೇಂದ್ರ ಹಾಗೂ ಸ್ಪಂದನಾ ಬೆಂಗಳೂರಿನ ಸಹಕಾರ ನಗರದಲ್ಲಿರೋ ದಿ ಫಿಟ್ ನೇಶನ್ ಜಿಮ್ ಗೆ ವರ್ಕೌಟ್ ಗೆ ಸೇರಿಕೊಂಡಿದ್ದರು. ಈ ವೇಳೆ ಸ್ಪಂದನಾ ಬರೋಬ್ಬರಿ 16 ಕೆಜಿ ತೂಕ ಇಳಿಸಿಕೊಂಡ ಸಂಗತಿಯನ್ನು ನಟ ವಿಜಯ್ ರಾಘವೇಂದ್ರ ದಂಪತಿಗಳಿಗೆ ಟ್ರೈನಿಂಗ್ ನೀಡುತ್ತಿದ್ದ ಜಿಮ್ ಟ್ರೇನರ್ ನಿರಂಜನ್ ಬಳಿ ಹೇಳಿಕೊಂಡಿದ್ದರಂತೆ.

ಅತ್ಯಂತ ವೇಗವಾಗಿ ತೂಕ ಇಳಿಸಿಕೊಂಡಿದ್ದರಿಂದ ಚರ್ಮ ಬಿಗಿ ಕಳೆದುಕೊಂಡು ಜೋಲುತ್ತಿದೆ. ಹೀಗಾಗಿ ಸ್ಕಿನ್ ಟೈಟ್ ಮಾಡಿಕೊಳ್ಳಲು ಸ್ಪಂದನಾ ಜಿಮ್ ಗೆ ಬಂದಿದ್ದಾರೆ ಎಂದು ಹೇಳಿದ್ದರಂತೆ. ಹೀಗಾಗಿ ಸ್ಪಂದನಾ ಅಗತ್ಯ ತಕ್ಕಂತೆ ವರ್ಕೌಟ್ ಪ್ಲ್ಯಾನ್ ಸಿದ್ಧಪಡಿಸಿದ್ದಾರೆ ಜಿಮ್ ಟ್ರೇನರ್ ನಿರಂಜನ್ ಹೇಳಿದ್ದಾರೆ. ಇದಲ್ಲದೇ ಸ್ಪಂದನಾ ಲೋ ಬಿಪಿ ಸಮಸ್ಯೆಯಿಂದ ಬಳಲುತ್ತಿದ್ದನ್ನು ತಿಳಿಸಿದ್ದರು. ಹೀಗಾಗಿ ಲೋ ಬಿಪಿ ಸಮಸ್ಯೆ ಗಮನದಲ್ಲಿಟ್ಟುಕೊಂಡು ವರ್ಕೌಟ್ ಪ್ಲ್ಯಾನ್ ರೂಪಿಸಲಾಗಿತ್ತಂತೆ.

ಇನ್ನೂ ಜಿಮ್ ಕಡೆಯಿಂದ ಯಾವುದೇ ವರ್ಕೌಟ್ ಹಾಗೂ ಡಯಟ್ ಪ್ಲ್ಯಾನ್ ಕೂಡ ಸ್ಪಂದನಾ ಅವರಿಗೆ ನೀಡಲಾಗಿರಲಿಲ್ಲವಂತೆ. ಸ್ಪಂದನಾ ತಮ್ಮ ಬ್ಯಾಂಕಾಕ್ ಪ್ರವಾಸದ ಪ್ಲ್ಯಾನ್ ಹೇಳಿಕೊಂಡಿದ್ದು, ಇದಾದ ಬಳಿಕ ಫುಲ್ ಟೈಂ ವರ್ಕೌಟ್ ಪ್ಲ್ಯಾನ್ ಮಾಡಿದ್ದರು ಎನ್ನಲಾಗಿದೆ. ಆದರೆ ಇದಕ್ಕೂ ಮುನ್ನವೇ ಸ್ಪಂದನಾ ಇನ್ನಿಲ್ಲವಾಗಿದ್ದಾರೆ. ಒಟ್ಟಿನಲ್ಲಿ ಸ್ಪಂದನಾ 16 ಕೆಜಿ ತೂಕ ಇಳಿಸಿದ್ದೇ ಬದುಕಿಗೆ ಮುಳುವಾಗಿದ್ದು, ಯಾವ ರೀತಿಯ ಡಯಟ್ ಮಾಡಿದ್ದರೂ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.

ಇದನ್ನೂ ಓದಿ : Spandana Vijay Raghavendra : ಜಾತಕದಲ್ಲೇ ಇತ್ತಾ ಮರಣಕಂಟಕ : ಸ್ಪಂದನಾ ಕುಟುಂಬಕ್ಕೆ ಮುನ್ಸೂಚನೆ ಕೊಟ್ಟಿದ್ರಾ ಜ್ಯೋತಿಷಿ

ಇದನ್ನೂ ಓದಿ : Vijaya Raghavendra wife Spandana : ಸ್ಪಂದನಾ ಅಂತಿಮ ದರ್ಶನ : ಮಲ್ಲೇಶ್ವರಂ ಮನೆಯಲ್ಲಿ ಸಾರ್ವಜನಿಕ ದರ್ಶನ

Comments are closed.