Vijaya Raghavendra wife Spandana : ಸ್ಪಂದನಾ ಅಂತಿಮ ದರ್ಶನ : ಮಲ್ಲೇಶ್ವರಂ ಮನೆಯಲ್ಲಿ ಸಾರ್ವಜನಿಕ ದರ್ಶನ

ಬೆಂಗಳೂರು : Vijaya Raghavendra wife Spandana : ನಟ ವಿಜಯ್‌ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ಕೆರೆತರಲಾಗಿದೆ. ಮಲ್ಲೇಶ್ವರಂನಲ್ಲಿರುವ ಸ್ಪಂದನಾ ತಂದೆ ಬಿ.ಕೆ.ಶಿವರಾಂ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದ್ದು, ಸಿನಿಮಾ ರಂಗದ ಗಣ್ಯರು ಆಗಮಿಸಿ ಸ್ಪಂದನಾ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಮಧ್ಯಾಹ್ನದ ನಂತರ ಈಡಿನ ಸಂಪ್ರದಾಯದಂತೆ ಅಂತ್ಯಕ್ರೀಯೆ ನಡೆಯಲಿದೆ.

ಥಾಯ್ಲೆಂಡ್‌ ಪ್ರವಾಸಕ್ಕೆ ತೆರಳಿದ್ದ ವೇಳೆಯಲ್ಲಿ ಸ್ಪಂದನಾ ಅವರಿಗೆ ಹೃದಯಾಘಾತವಾಗಿತ್ತು. ಎರಡು ದಿನಗಳ ಬಳಿಕ ಎಲ್ಲಾ ಕಾನೂನು ತೊಡಕುಗಳನ್ನು ಪೂರೈಸಿ ಪಾರ್ಥಿವ ಶರೀಶರವನ್ನು ಭಾರತಕ್ಕೆ ಕರೆತರಲಾಗಿದೆ. ನಿನ್ನೆ ರಾತ್ರಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸ್ಪಂದನಾ ಪಾರ್ಥಿವ ಶರೀರವನ್ನು ಅಂಬುಲೆನ್ಸ್‌ ಮೂಲಕ ಮಲ್ಲೇಶ್ವರಂನಲ್ಲಿರುವ ಬಿ.ಕೆ.ಶಿವರಾಂ ಅವರ ಮನೆಗೆ ಕರೆಯಲಾಗಿತ್ತು. ಇದನ್ನೂ ಓದಿ : Spandana Vijay Raghavendra : ನಟ ವಿಜಯ್‌ ರಾಘವೇಂದ್ರ ಹಾಗೂ ಸ್ಪಂದನಾ ಅವರ ಪ್ರೀತಿ ಪಯಣ ಹೇಗಿತ್ತು ಗೊತ್ತಾ ?

ನಿನ್ನೆ ರಾತ್ರಿಯಿಂದಲೇ ಸ್ಪಂದನಾ ಅವರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಸಿನಿಮಾ ರಂಗದ ಗಣ್ಯರು, ಪೊಲೀಸ್‌ ಅಧಿಕಾರಿಗಳು ಆಗಮಿಸಿ ಸ್ಪಂದನಾ ಅವರ ಅಂತಿಮ ದರ್ಶನವನ್ನು ಪಡೆದುಕೊಂಡಿದ್ದಾರೆ. ಇಂದು ಮಧ್ಯಾಹ್ನ2 ಗಂಟೆಯ ವರೆಗೆ ಅಂತಿಮ ದರ್ಶನಕ್ಕೆ ಅವಕಾಶವನ್ನು ಕಲ್ಪಿಸಲಾಗಿದ್ದು, ಮಧ್ಯಾಹ್ನದ ನಂತರ ಹರಿಶ್ಚಂದ್ರ ಘಾಟ್‌ನಲ್ಲಿ ಈಡಿಗ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಸಲು ಸಿದ್ದತೆ ಮಾಡಿಕೊಳ್ಳಲಾಗಿದೆ.

ನಟ ವಿಜಯ್‌ ರಾಘವೇಂದ್ರ ಅವರು ಕೂಡ ನಿನ್ನೆಯೇ ಬೆಂಗಳೂರಿಗೆ ಆಗಮಿಸಿದ್ದು, ಪತ್ನಿಯ ಪಾರ್ಥವ ಶರೀರದ ಪಕ್ಕದಲ್ಲಿಯೇ ನಿಂತು ಕಣ್ಣೀರು ಸುರಿಸುತ್ತಿದ್ದಾರೆ. ನಟ ಶಿವರಾಜ್‌ ಕುಮಾರ್‌, ರಾಘವೇಂದ್ರ ರಾಜ್‌ ಕುಮಾರ್‌, ನಟಿ ಸುಧಾರಾಣಿ, ಗಾಯಕ ವಿಜಯಪ್ರಕಾಶ್‌ ಸೇರಿದಂತೆ ಸಿನಿಮಾ ರಂಗದ ಗಣ್ಯಾತಿ ಗಣ್ಯರು ಆಗಮಿಸಿ ಕಂಬನಿ ಮಿಡದಿದ್ದಾರೆ. ಮಲ್ಲೇಶ್ವರಂನಲ್ಲಿರುವ ಬಿ.ಕೆ.ಶಿವರಾಂ ಅವರ ಮನೆಯಲ್ಲೀಗ ಸೂತಕದ ಚಾಯೆ ಆವರಿಸಿದೆ.

ಇದನ್ನೂ ಓದಿ : Spandana Vijay Raghavendra : ಜಾತಕದಲ್ಲೇ ಇತ್ತಾ ಮರಣಕಂಟಕ : ಸ್ಪಂದನಾ ಕುಟುಂಬಕ್ಕೆ ಮುನ್ಸೂಚನೆ ಕೊಟ್ಟಿದ್ರಾ ಜ್ಯೋತಿಷಿ

ಇದನ್ನೂ ಓದಿ : vijaya raghavendra wife Spandana : ಬೆಂಗಳೂರಿಗೆ ಸ್ಪಂದನಾ ಪಾರ್ಥಿವ ಶರೀರ ಆಗಮನ : ಕುಟುಂಬಸ್ಥರಿಗೆ ಹಸ್ತಾಂತರ

Comments are closed.