KGF Chapter 2 : ಕೆಜಿಎಫ್-2 ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ : ಮಲ್ಟಿಪ್ಲೆಕ್ಸ್ ಗೆ ಬರಲ್ಲ ರಾಕಿ ಬಾಯ್ ಸಿನಿಮಾ

ಒಂದೆಡೆ ವಿಶ್ವದಾದ್ಯಂತ ಕೆಜಿಎಫ್-೨ ಹವಾ ಜೋರಾಗಿದ್ದರೇ, ಇನ್ನೊಂದೆಡೆ ಸಾವಿರಾರು ಥಿಯೇಟರ್ ಗಳಲ್ಲಿ ಕೆಜಿಎಫ್-2 ಸಿನಿಮಾ ರಿಲೀಸ್ ಗೆ ಸಿದ್ಧತೆ ನಡೆದಿದೆ. ಆದರೆ ಈ ಎಲ್ಲ ಸಂಭ್ರಮಗಳ ಮಧ್ಯೆ ಕೆಜಿಎಫ್-೨ ರಿಲೀಸ್ ಗೆ ದೇಶದ ಮಲ್ಟಿಫ್ಲೆಕ್ಸ್ ಗಳು ಇನ್ನು ಬಾಗಿಲು ತೆರೆದಿಲ್ಲ ಅನ್ನೋದು ಕೆಜಿಎಫ್-2 ಗೆ ಒಂದು ದೊಡ್ಡ ಸೆಟ್ ಬ್ಯಾಕ್ ನಂತಾಗಿದ್ದು ಕೆಜಿಎಫ್-2 ಸಿನಿಮಾ ರಿಲೀಸ್ ಗೆ ಕ್ಷಣಗಣನೆ ನಡೆದಿರುವಾಗಲೂ ಈ ಮಾತುಕತೆ ಫಲಪ್ರದವಾಗಿಲ್ಲ.

ಹೌದು, ಬಹುನೀರಿಕ್ಷಿತ ಕೆಜಿಎಫ್-2 ಸಿನಿಮಾ ರಿಲೀಸ್ ಗೆ 24 ಗಂಟೆಗೂ ಕಡಿಮೆ ಅವಧಿ ಇರುವಾಗಲೂ ಇನ್ನೂ ಕೆಜಿಎಫ್-2 ಚಿತ್ರತಂಡ ಹಾಗೂ ಮಲ್ಟಿಪ್ಲೆಕ್ಸ್ ನಡುವಿನ ಮಾತುಕತೆ ಒಂದು ಸೌಹಾರ್ದಯುತ ನಿರ್ಧಾರಕ್ಕೆ ಬರುವಲ್ಲಿ ವಿಫಲವಾಗಿದೆ. ಚಿತ್ರತಂಡ ಹಾಗೂ ಮಲ್ಟಿಪ್ಲೆಕ್ಸ್ ನಡುವಿನ ಮಾತುಕತೆ ಫಲಪ್ರದವಾಗದ ಕಾರಣ ಕರ್ನಾಟಕ ಮಲ್ಟಿಪ್ಲೆಕ್ಸ್​ನಲ್ಲಿ KGF ಟಿಕೆಟ್ ಬುಕಿಂಗ್ ಇನ್ನು ಓಪನ್ ಆಗಿಲ್ಲ. ಪಿವಿಆರ್, ಐನಾಕ್ಸ್​​ನಲ್ಲಿ ಕೆಜಿಎಫ್ ಚಾಪ್ಟರ್ 2 ರಿಲೀಸ್ ಟಿಕೇಟ್ ಬುಕ್ಕಿಂಗ್ ಅವಕಾಶ ನೀಡಲಾಗಿಲ್ಲ.‌ಇದರರ್ಥ ನಾಳೆ ಈ ಸ್ಕ್ರಿನ್ ಗಳಲ್ಲಿ ಕೆಜಿಎಫ್-2 ಸಿನಿಮಾ ಪ್ರದರ್ಶನವಿಲ್ಲ.

ಹಣಕಾಸಿನ ವಿಚಾರದಲ್ಲಿ ಕೆಜಿಎಫ್ ಹಾಗೂ ಮಲ್ಟಿಫ್ಲೆಕ್ಸ್ ನಡುವೆ ಅಭಿಪ್ರಾಯ ಭೇದ ಉಂಟಾಗಿದೆ. ಷೇರ್ ವಿಚಾರದಲ್ಲಿ ಒಮ್ಮತಕ್ಕೆ ಬಾರದ ನಿರ್ಮಾಪಕ ಮಲ್ಟಿಪ್ಲೆಕ್ಸ್ ಓನರ್ಸ್ ಗಳಿಂದಾಗಿ ಸಿನಿಮಾ ಮಲ್ಟಿಪ್ಲೆಕ್ಸ್ ನಲ್ಲಿ ಪ್ರದರ್ಶನ ಕಾಣೋದು ಅನುಮಾನ ಎನ್ನಲಾಗ್ತಿದೆ. ಕೆಜಿಎಫ್ ಚಿತ್ರಕ್ಕೆ ಜಾಸ್ತಿ ಶೇರ್ ಕೊಡಬೇಕು ಅಂತ ಕೆಜಿಎಫ್ ತಂಡ ಪಟ್ಟು ಹಿಡಿದಿದೆ. ಕೆಜಿಎಫ್ ಬಿಗ್ ಬಜೆಟ್ ಸಿನಿಮಾ, ದೊಡ್ಡ ಪ್ರಾಜೆಕ್ಟ್. ಹಾಗಾಗಿ ಪರ್ಸೆಂಟ್​ ಜಾಸ್ತಿ ಬೇಕು. ಬೇರೆ ಭಾಷೆಗಳಿಗೆ ಜಾಸ್ತಿ ಕೊಡ್ತಾರೆ, ಕನ್ನಡ ಸಿನಿಮಾಗೆ ಏಕೆ ಕೊಡಲ್ಲ? ಎಂದು ಚಿತ್ರತಂಡ ಹಾಗೂ ನಿರ್ಮಾಪಕರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : KGF 2 : ಕೆಜಿಎಫ್ ನಿಂದ ಸಿಕ್ಕಾಪಟ್ಟೆ ದುಡ್ಡು ಬಂದಿಲ್ಲ

ಹೀಗಾಗಿ ಇನ್ನೂ ಮಲ್ಟಿಪ್ಲೆಕ್ಸ್​ ಮತ್ತು ನಿರ್ಮಾಪಕರ ನಡುವೆ ಮಾತುಕತೆ ಮುಂದುವರೆದಿದೆ‌.ಸದ್ಯ ಮೊದಲವಾರ ಮಲ್ಟಿಪ್ಲೆಕ್ಸ್ ಗಳಲ್ಲಿ50:50ಶೇರ್ ಒಪ್ಪಂದ ಇದೆ.ಅದ್ರೆ ಈಗ ನಿರ್ಮಾಪಕರಿಗೆ 55ಮಲ್ಟಿಪ್ಲೆಕ್ಸ್  ಅವರಿಗೆ 45 ಶೇರ್ ಗೆಕೆಜಿಎಫ್ ಟೀಮ್ ಪಟ್ಟು ಹಿಡಿದಿದೆ. ಹೀಗಾಗಿ ಈ 55:45 ಶೇರ್ ಗೆ ಮಲ್ಟಿಪ್ಲೆಕ್ಸ್ ಮ್ಯಾನೇಜ್ಮೆಂಟ್ ಒಪ್ಪುತ್ತಿಲ್ಲ. ಒಂದು ವೇಳೆ ಇಂದು ಈ ಸಮಸ್ಯೆ ಬಗೆಹರಿಯದಿದ್ರೆ ಮಲ್ಟಿಪ್ಲೆಕ್ಸ್ ಗಳಲ್ಲಿ ಕೆಜಿಎಫ್ ರಿಲೀಸ್ ಡೌಟ್ ಎನ್ನಲಾಗ್ತಿದೆ. ಒಂದೊಮ್ಮೆ ಶೇರ್ ಹಂಚಿಕೆಯ ಈ ಮಾತುಕತೆ ಸರಿಯಾಗದೇ ಇದ್ದಲ್ಲಿ ನಾಳೆ ದೇಶದ ಯಾವುದೇ ಮಲ್ಟಿಫ್ಲೆಕ್ಸ್ ಗಳಲ್ಲಿ ಕೆಜಿಎಫ್-2 ಚಿತ್ರ ತೆರೆಕಾಣೋದಿಲ್ಲ. ಈ ವಿಚಾರ ಈಗ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

ಇದನ್ನೂ ಓದಿ : KGF Chapter 2 : ತೆರೆಗೆ ಬಂದ ಧೀರ ಧೀರ ಧೀರ ಸುಲ್ತಾನಾ : ಮೋಡಿ ಮಾಡಿದ ಕೆಜಿಎಫ್-2 ಸಾಂಗ್

KGF Chapter 2 Yash Movie not Releasing Multiflex

Comments are closed.